ವಾಣಿಜ್ಯ ಗ್ಯಾಸ್ Cylinder ಬೆಲೆ ಮತ್ತೆ ಏರಿಕೆ – ಇಂದಿನಿಂದಲೇ ದೇಶಾದ್ಯಂತ ಹೊಸ ಪರಿಷ್ಕೃತ ದರ ಜಾರಿ

ಈಗಾಗಲೇ ಪೆಟ್ರೋಲ್, ಡೀಸೆಲ್, ಸಿಎನ್ಜಿ ದರ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಈ ಮಧ್ಯೆ ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ಶಾಕ್ ಕೊಟ್ಟಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ₹42 ರಷ್ಟು ಹೆಚ್ಚಳ ಮಾಡಿದ್ದು, ಹೊಸ ದರ ಇಂದಿನಿಂದಲೇ ಜಾರಿಗೆ ಬಂದಿದೆ.

ಬಳಕೆದಾರರಿಗೆ ಬೆಲೆ ಏರಿಕೆ ಬರೆ
ಇನ್ನು ದರ ಏರಿಕೆಯಿಂದಾಗಿ ಮತ್ತೆ ಹೋಟೆಲ್, ರೆಸ್ಟೋರೆಂಟ್, ಬೇಕರಿ ಸೇರಿದಂತೆ ವಾಣಿಜ್ಯ ಬಳಕೆದಾರರ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ. ಸತತವಾಗಿ ವಾಣಿಜ್ಯ ಸಿಲಿಂಡರ್ ದರದಲ್ಲಿ ಏರಿಳಿತವಾಗುತ್ತಿದ್ದು, ಈ ಬಾರಿ ಕೂಡ ಬಳಕೆದಾರರಿಗೆ ಬೆಲೆ ಏರಿಕೆ ಬರೆ ಎಳೆದಂತಾಗಿದೆ. ಇನ್ನು ಹೊಸ ದರದ ಪ್ರಕಾರ ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ₹1,958ಕ್ಕೆ ಏರಿಕೆಯಾಗಿದೆ.
ಇದನ್ನು ಓದಿ : ಹೋಟೆಲ್ ಮಾಲೀಕರಿಗೆ ಸರ್ಕಾರದಿಂದ BIG ರಿಲೀಫ್ – LPG ಪೂರೈಕೆಗೆ ಸರ್ಕಾರ ನಿರ್ಧಾರ..!!

14.2 ಕೆಜಿ ಎಲ್ಪಿಜಿ ಸಿಲಿಂಡರ್ ದರದಲ್ಲಿ ಬದಲಾವಣೆ ಇಲ್ಲ
ಇನ್ನು ವಿವಿಧ ನಗರಗಳಲ್ಲಿ ತೆರಿಗೆ ಹಾಗೂ ಸಾಗಣೆ ವೆಚ್ಚದ ಆಧಾರದ ಮೇಲೆ ದರದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರಲಿದೆ. ಆದರೆ ಗೃಹ ಬಳಕೆಯ 14.2 ಕೆಜಿ ಎಲ್ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ವಾಣಿಜ್ಯ ಬಳಕೆಯ ಸಿಲಿಂಡರ್ಗಳಿಗೆ ಮಾತ್ರ ಹೊಸ ದರ ಅನ್ವಯವಾಗಲಿದೆ.

ವ್ಯಾಪಾರ ವಲಯಕ್ಕೆ ಹೊಡೆತ
ಒಟ್ನಲ್ಲಿ ತಿಂಗಳ ಆರಂಭದಲ್ಲೇ ವಾಣಿಜ್ಯ ಸಿಲಿಂಡರ್ ದರ ಏರಿಕೆಯಾಗಿರುವುದು ಹೋಟೆಲ್ ಹಾಗೂ ವ್ಯಾಪಾರ ವಲಯಕ್ಕೆ ಮತ್ತೊಂದು ಹೊಡೆತ ನೀಡಿದ್ದು, ವಾಣಿಜ್ಯ Cylinder ಗಳ ಬೆಲೆ ಸತತವಾಗಿ ಹೆಚ್ಚುತ್ತಿರೋದ್ರಿಂದ ಹೋಟೆಲ್ರೆಸ್ಟೋರೆಂಟ್ ಮತ್ತು ಕೇಟರಿಂಗ್ ವ್ಯವಹಾರಗಳ ನಿರ್ವಹಣಾ ವೆಚ್ಚ ಹೆಚ್ಚಾಗಲಿದೆ. ಇದರ ಪರಿಣಾಮವಾಗಿ ಮುಂಬರುವ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನು ನೋಡಿ : FINAL MATCH ಕರ್ನಾಟಕದಲ್ಲೇ ನಡೀಬೇಕಿತ್ತು – GIJARATHನವ್ರು ಪ್ಲಾನ್ ಮಾಡಿ ಕಿತ್ತುಕೊಂಡ್ರು..!




