Bengaluru : ಅತ್ತೆ-ಮಾವನ ಮೇಲೆ ಮಚ್ಚು ಬೀಸಿ, ಕತ್ತರಿಸಿದ ಅಳಿಯ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

Bengaluru ನಗರದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಅಳಿಯ ತನ್ನ ಅತ್ತೆ – ಮಾವನ ಮೇಲೆಯೇ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಮಿಣಿಕೆ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಮಚ್ಚಿನಿಂದ ಮನಸೋ ಇಚ್ಛೆ ಹಲ್ಲೆ!
ಬಕ್ರೀದ್ ಹಬ್ಬದ ದಿನ ನಡೆದ ಈ ಘಟನೆ ಇದೀಗ ಸಿಸಿಟಿವಿ ದೃಶ್ಯಗಳ ಮೂಲಕ ಬಹಿರಂಗವಾಗಿದ್ದು, ಹಲ್ಲೆಯ ಭೀಕರ ದೃಶ್ಯಗಳು ಬೆಚ್ಚಿಬೀಳಿಸುವಂತಿವೆ.
ಹೌದು.. ಆರೋಪಿ ಫರ್ಹಾನ್ ಮುಬಾರಕ್ ತನ್ನ ಅತ್ತೆ ನಸ್ರಿನಾ ಭಾನು (48) ಹಾಗೂ ಮಾವ ಸೈಯದ್ ಅಹ್ಮದ್ (55) ಅವರ ಮೇಲೆ ಕೈ, ಕಾಲು, ತಲೆ ಹಾಗೂ ಭುಜ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಮಚ್ಚಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ.

ಏನಿದು ಪ್ರಕರಣ?
ಆರೋಪಿ ಫರ್ಹಾನ್ ಮುಬಾರಕ್ ತನ್ನ ಹೆಂಡತಿಯ ಮೇಲೆ ಅಟ್ಯಾಕ್ ಮಾಡಲು ಅಪಾರ್ಟ್ಮೆಂಟ್ಗೆ ನುಗ್ಗಿದ್ದನು, ಆದ್ರೆ, ಹೆಂಡ್ತಿ ಸೈದಾ ನೇಹಾ ಮನೆಯಲ್ಲಿರಲಿಲ್ಲ, ಹೀಗಾಗಿ ತನ್ನೆದುರಿಗೆ ಸಿಕ್ಕ ಅತ್ತೆ- ಮಾವನ ಮೇಲೆ ಮಚ್ಚು ಬೀಸಿದ್ದಾನೆ.
ಇದನ್ನು ಓದಿ : ರಸ್ತೆಯಲ್ಲೇ ಆಟೋ ಚಾಲಕನ ಮೇಲೆ ಟ್ರಾಫಿಕ್ ಪೊಲೀಸ್ ಇದೆಂಥಾ ಹಲ್ಲೆ.!

ಪತ್ನಿ ಡಿವೋರ್ಸ್ ಅರ್ಜಿ ಸಲ್ಲಿಸಿದ್ದಕ್ಕೆ ಕೋಪ ಪತಿ
ಕಳೆದ ಐದು ವರ್ಷಗಳ ಹಿಂದೆ ಫರ್ಹಾನ್ ಮುಬಾರಕ್ ಮತ್ತು ಸೈದಾ ನೇಹಾ ವಿವಾಹವಾಗಿದ್ದರು. ಆದರೆ ಮದುವೆಯಾದ ಕೇವಲ ಮೂರು ತಿಂಗಳಲ್ಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ದೂರವಾಗಿದ್ದರು.
ಸುಮಾರು ನಾಲ್ಕು ತಿಂಗಳ ಹಿಂದೆ ಸೈದಾ ನೇಹಾ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇದರಿಂದ ಕೋಪಗೊಂಡ ಆರೋಪಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಇನ್ನು ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಸೈಯದ್ ಅಹ್ಮದ್ ಮತ್ತು ನಸ್ರಿನಾ ಭಾನು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣ ದಾಖಲು, ಆರೋಪಿಗಾಗಿ ಹುಡುಕಾಟ
ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿ ಫರ್ಹಾನ್ ಮುಬಾರಕ್ನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಇದನ್ನು ನೋಡಿ : ಸಚಿವಕಾಂಕ್ಷಿಗಳಿಗೆ ಬಿಗ್ ಅಪ್ಡೇಟ್ ಕೊಟ್ಟ ಡಿಕೆಶಿ- ನಾಳೆ ಮತ್ತೆ ದೆಹಲಿಗೆ ತೆರಳಲಿರೋ ಸಿದ್ದು- ಕನಕಪುರ ಬಂಡೆ

