ಪಕ್ಕದ್ಮನೆ ಹುಡುಗಿ ಜೊತೆ ಗಂಡನ ಲವ್ವಿಡವ್ವಿ – ಪ್ರಶ್ನಿಸಿದ್ದಕ್ಕೆ ರಾಡ್ನಿಂದ ಹೊಡೆದು ಪತ್ನಿಯ ಭೀಕರ Murder.!

ಪಕ್ಕದ್ಮನೆ ಹುಡುಗಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ, ರಾಡ್ನಿಂದ ಹೊಡೆದು ಪತ್ನಿಯ ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಗಾಯಮುಖ ದೇವಸ್ಥಾನದ ಬಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಮೃತಳನ್ನ 26 ವರ್ಷದ ಸಂಜನಾ ಎಂದು ಗುರುತಿಸಲಾಗಿದೆ.
ದೇವಸ್ಥಾನಕ್ಕೆ ಹೋಗೋಣ ಬಾ ಎಂದವನೇ ಯಮನಾದ
ಭಾಲ್ಕಿ ತಾಲೂಕಿನ ಬೋಳೆಗಾವ್ ಗ್ರಾಮದ ಭಗವತ್ ಜ್ಞಾನೇಶ್ವರ ಹಾಗೂ ಹೊನ್ನಿಕೇರಿ ಗ್ರಾಮದ ಸಂಜನಾ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ರು. ಭಗವತ್ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಬೀದರ್ನ ಶಿವನಗರದಲ್ಲಿ ವಾಸವಾಗಿದ್ರು. ಈ ವೇಳೆ ಪಕ್ಕದ ಮನೆಯ ಹುಡುಗಿ ಜೊತೆ ಭಗವತ್ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಈ ವಿಚಾರ ಸಂಜನಾಗೆ ತಿಳಿದು ದಂಪತಿ ನಡುವೆ ಆಗಾಗ ಜಗಳ ನಡೀತ್ತಿತ್ತಂತೆ.
ಇದೇ ವಿಚಾರವಾಗಿ ಮತ್ತೆ ಇಬ್ಬರ ಮಧ್ಯೆ ಜಗಳವಾಗಿದ್ದು, ಜೂನ್ 25ರಂದು ಸಂಜನಾಳವನ್ನ ದೇವಸ್ಥಾನಕ್ಕೆ ಹೋಗೋಣ ಎಂದು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಭಗವತ್, ಗಾಯಮುಖ ದೇವಸ್ಥಾನದ ಬಳಿಯ ಅರಣ್ಯ ಪ್ರದೇಶದಲ್ಲಿ ಕಾರು ನಿಲ್ಲಿಸಿ ಕಬ್ಬಿಣದ ರಾಡ್ನಿಂದ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.
ಇದನ್ನು ಓದಿ : ಗಂಡನನ್ನೇ ಕೊಂದು ಹಾರ್ಟ್ ಅಟ್ಯಾಕ್ ಕಥೆ ಕಟ್ಟಿದ ಶಿಕ್ಷಕಿ!

ಕೀಟನಾಶಕ ಬೆರೆಸಿದ ನೀರು ಕುಡಿಸಿ Murder?
ಇನ್ನು ಭೀಕರವಾಗಿ ಗಾಯಗೊಂಡಿದ್ದ ಪತ್ನಿಯನ್ನು ಮಹಾರಾಷ್ಟ್ರದ ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಂಜನಾ ಸಾವನ್ನಪ್ಪಿದ್ದಾಳೆ. ಇನ್ನು ಮೃತದೇಹವನ್ನು ಬೀದರ್ ಬ್ರೀಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಶವಗಾರದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು, ಕಳೆದ ವರ್ಷವೂ ಭಗವತ್ ಸಂಜನಾಳಿಗೆ ಕೀಟನಾಶಕ ಬೆರೆಸಿದ ನೀರು ನೀಡಿ Murder ಗೆ ಯತ್ನಿಸಿದ್ದ ಎಂದು ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಪ್ರಕರಣ ದಾಖಲು
ಸದ್ಯ ಈ ಸಂಬಂಧ ಧನ್ನೂರಾ ಪೊಲೀಸ್ ಠಾಣೆಯಲ್ಲಿ ಮೃತಳ ಕುಟುಂಬಸ್ಥರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ನೋಡಿ : PRADEEP ESHWAR ವಿರುದ್ಧ BJP ಆಕ್ರೋಶ – POLICE ಠಾಣೆ ಎದುರು ಭಾರೀ ಹೈಡ್ರಾಮ





