ಉಪಲೋಕಾಯುಕ್ತರ ಭೇಟಿ ವೇಳೆ Brims ಆಸ್ಪತ್ರೆಯಲ್ಲಿ ಲಕ್ಷಾಂತರ ಹಣ ಪತ್ತೆ

ರಾಜ್ಯದ ಉಪ ಲೋಕಾಯುಕ್ತರಾದ ನ್ಯಾ.ಬಿ.ವೀರಪ್ಪ ಆಗಾಗೆ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ಹಾಸ್ಟೆಲ್ಗಳಿಗೆ ಭೇಟಿ ನೀಡಿ ಅವ್ಯವಸ್ಥೆಯ ವಿರುದ್ಧ ಸಮರ ಸಾರುತ್ತಿದ್ದರು. ಇದೀಗ ಇಂದು ಬೆಳ್ಳಂ ಬೆಳಗ್ಗೆಯೇ ಬೀದರ್ನ ವಿವಿಧ ಕಡೆ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ವೇಳೆ ಬೀದರ್ನ ಬ್ರಿಮ್ಸ್ ಆಸ್ಪತ್ರೆಗೆ ಬಿ.ವೀರಪ್ಪ ಭೇಟಿ ನೀಡಿದ್ದು, ಅಲ್ಲಿನ ಅವ್ಯವಸ್ಥೆ ಹಾಗೂ ಸ್ವಚ್ಛತೆಯ ಕೊರತೆ ಕಂಡು ವೀರಪ್ಪ ಅವರು ಫುಲ್ ಕ್ಲಾಸ್ ತಗೊಂಡ್ರು.
ಇದನ್ನು ಓದಿ : ಇಂಜಿನಿಯರ್ ಮನೆಗಳ ಮೇಲೆ ಲೋಕಾಯುಕ್ತ ದಾಳಿ – 60 ಲಕ್ಷ ನಗದು ಹಣ ಪತ್ತೆ!

ಆಸ್ಪತ್ರೆಯಲ್ಲಿ ಕಂತೆ ಕಂತೆ ಹಣ ನೋಡಿ ನ್ಯಾ.ಬಿ.ವೀರಪ್ಪ ಶಾಕ್
ಇನ್ನು ಬಿಮ್ಸ್ ಆಸ್ಪತ್ರೆಯ ಪರಿಶೀಲನೆ ವೇಳೆ ಆಸ್ಪತ್ರೆಯ ದಿಂಬು, ಬೆಡ್ಗಳು ಸರಿಯಿಲ್ಲದಿದ್ದನ್ನು ನ್ಯಾ.ಬಿ ವೀರಪ್ಪ ಅವರು ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಕ್ಲಾಸ್ ತಗೊಂಡ್ರು. ಇದೇ ವೇಳೆ ಲ್ಯಾಬ್ ಟೆಕ್ನಿಷಿಯನ್ ಬ್ಯಾಗ್ನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿತ್ತು. ಲ್ಯಾಬ್ ಟೆಕ್ನಿಷಿಯನ್ ಆಗಿರುವ ಸಂಜುಕುಮಾರ್ ಬಳಿ ಒಂದು ಲಕ್ಷ ನಗದು ಮತ್ತು ಒಂದು ಲಕ್ಷ ರೂ ಮೊತ್ತದ ಚೆಕ್ ಪತ್ತೆಯಾಗಿದ್ದು ಉಪ ಲೋಕಾಯುಕ್ತರೇ ಶಾಕ್ ಆಗಿದ್ರು. ಸರ್ಕಾರಿ ಆಸ್ಪತ್ರೆಯಲ್ಲಿ ಅದರಲ್ಲೂ ಲ್ಯಾಬ್ ಟೆಕ್ನಿಷಿಯನ್ ಬಳಿ ಇಷ್ಟೊಂದು ಹಣ ಹೇಗೆ ಬಂತು ಅಂತಾ ನ್ಯಾ.ಬಿ.ವೀರಪ್ಪ ತರಾಟೆ ತೆಗೆದುಕೊಂಡಿದ್ದು, ಹಣದ ಮಾಹಿತಿ ನೀಡಲು ಲ್ಯಾಬ್ ಟೆಕ್ನಿಷಿಯನ್ ತಡಬಡಾಯಿಸಿದ್ದಾನೆ.

Brims ಆಸ್ಪತ್ರೆಯಲ್ಲಿ ಪತ್ತೆಯಾದ ಹಣ ಸೀಜ್!
ಸದ್ಯ ಬಿಮ್ಸ್ ಆಸ್ಪತ್ರೆಯಲ್ಲಿ ಪತ್ತೆಯಾದ ಹಣವನ್ನು ಸೀಜ್ ಮಾಡಲಾಗಿದ್ದು, ಲ್ಯಾಬ್ ಟೆಕ್ನಿಷಿಯನ್ ಸಂಜು ಕುಮಾರ್ ವಿರುದ್ಧ ಸುಮೊಟೊ ಕೇಸ್ ದಾಖಲಿಸುವಂತೆ ಅಧಿಕಾರಿಗಳಿಗೆ ನ್ಯಾಯಮೂರ್ತಿ ಖಡಕ್ ಸೂಚನೆ ನೀಡಿದ್ರು. ಒಟ್ನಲ್ಲಿ ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿರುವ ಉಪ ಲೋಕಾಯುಕ್ತ ನ್ಯಾ.ಬಿ ವೀರಪ್ಪ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನು ನೋಡಿ : ಇದು PRAJASHAKTHI TVಯ BIG IMPACT ಮತ್ತೆ ಆರಂಭವಾದ WHITE TOPPING ಕಾಮಗಾರಿ




