ಡಿ ಬಾಸ್ Darshan ಅಭಿಮಾನಿಗಳಿಗೆ ಗುಡ್ನ್ಯೂಸ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇದೀಗ ಒಟಿಟಿ ಹಾಗೂ ಕಿರುತೆರೆಗೆ ಬರಲು ಸಜ್ಜಾಗಿದೆ.
‘ಡೆವಿಲ್’ OTTಗೆ ಎಂಟ್ರಿ
ಹೌದು.. ಕಳೆದ ವರ್ಷದ ಡಿಸೆಂಬರ್ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ‘ಡೆವಿಲ್’ ಸಿನಿಮಾ ಇದೀಗ ಜೀ5 ಮೂಲಕ ಡಿಜಿಟಲ್ ವೇದಿಕೆಗೆ ಬರಲಿದೆ. ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಜೀ5 ಸಂಸ್ಥೆ ಖರೀದಿಸಿದೆ ಎಂದು ತಿಳಿದುಬಂದಿದೆ. ಇನ್ನು ಈ ಚಿತ್ರ ಬಿಡುಗಡೆಯಾಗಿ ಸುಮಾರು ಆರು ತಿಂಗಳು ಕಳೆದರೂ ಯಾವುದೇ ಒಟಿಟಿ ಅಥವಾ ಟಿವಿ ವೇದಿಕೆಯಲ್ಲಿ ಪ್ರಸಾರವಾಗಿರಲಿಲ್ಲ.

‘ಬರ್ತಾ ಇದೀನಿ ಚಿನ್ನ’ – ಪೋಸ್ಟ್ ವೈರಲ್
ಇದೀಗ ಜೀ5 ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಈ ಸಂಬಂಧ ಜೀ5 ತನ್ನ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದೆ.
ದರ್ಶನ್ ಅವರ ‘ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ… ಬರ್ತಾ ಇದೀನಿ ಚಿನ್ನ’ ಎಂಬ ಡೈಲಾಗ್ ಬಳಸಿ ಸಿನಿಮಾ ಶೀಘ್ರದಲ್ಲೇ ಬರಲಿದೆ ಎಂಬ ಸುಳಿವು ನೀಡಿದೆ.

ಚಿತ್ರೀಕರಣದ ವೇಳೆ ನಡೆದಿತ್ತು ವಿವಾದ
2024ರಲ್ಲಿ ‘ಡೆವಿಲ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲೇ ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣದಲ್ಲಿ ದರ್ಶನ್ ಬಂಧನವಾಗಿದ್ದ ಕಾರಣ ಚಿತ್ರದ ಕೆಲಸಗಳು ವಿಳಂಬಗೊಂಡಿದ್ದವು. ನಂತರ ಕರ್ನಾಟಕ ಹೈಕೋರ್ಟ್ನಿಂದ ಜಾಮೀನು ದೊರೆತಾಗ ದರ್ಶನ್ ಚಿತ್ರದ ಉಳಿದ ಚಿತ್ರೀಕರಣ ಹಾಗೂ ಡಬ್ಬಿಂಗ್ ಕಾರ್ಯವನ್ನು ಪೂರ್ಣಗೊಳಿಸಿದ್ದರು. ಬಳಿಕ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಮತ್ತೆ ಜೈಲು ಸೇರಿದ್ದರು.
ಇದನ್ನು ಓದಿ : 1 ವರ್ಷದಲ್ಲಿ ಮುಗಿಯುತ್ತಾ Darshan ಕೇಸ್? ಸೆಷನ್ಸ್ ಕೋರ್ಟಲ್ಲಿ ವಿಚಾರಣೆ

Darshan ಇಲ್ಲದೇ ನಡೆದಿತ್ತು ಪ್ರಚಾರ
ದರ್ಶನ್ ಜೈಲಿನಲ್ಲಿದ್ದಾಗಲೇ ‘ಡೆವಿಲ್’ ಸಿನಿಮಾ ಬಿಡುಗಡೆಯಾಗಿತ್ತು. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಆಪ್ತರು ಚಿತ್ರದ ಪ್ರಚಾರ ನಡೆಸಿದ್ದರು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಯಶಸ್ಸು ಗಳಿಸಿತ್ತು.
ಇನ್ನು ಮಿಲನ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ. ಈಗ ಒಟಿಟಿ ಹಾಗೂ ಟಿವಿ ಪ್ರಸಾರದ ಮೂಲಕ ಸಿನಿಮಾ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲಿದೆ.
ಒಟ್ಟಿನಲ್ಲಿ ಜೈಲಿನಲ್ಲಿರೋ ದರ್ಶನ್ ಸಿನಿಮಾ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ‘ಡೆವಿಲ್’ ಒಟಿಟಿ ಬಿಡುಗಡೆಯ ಸುದ್ದಿ ಸಂತಸ ತಂದಿದೆ.

ಇದನ್ನು ನೋಡಿ : FAKE ATROCITY CASE ಆರೋಪ – VIDEO ಮಾಡಿ ಸೂ*ಸೈ* ಮಾಡಿಕೊಂಡ ವ್ಯಕ್ತಿ




