ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ Darshan ರನ್ನು ಭೇಟಿಯಾದ ಪತ್ನಿ ವಿಜಯಲಕ್ಷ್ಮಿ, ನಟಿ ರಕ್ಷಿತಾ ಪ್ರೇಮ್!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ ಹಾಗೂ ನಟಿ ರಕ್ಷಿತಾ ಪ್ರೇಮ್ ಇಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದರು.
ದರ್ಶನ್ನ ಭೇಟಿಯಾದ ನಟಿ ರಕ್ಷಿತಾ ಪ್ರೇಮ್!
ಇತ್ತೀಚೆಗಷ್ಟೇ ತಮ್ಮ ವಿವಾಹ ವಾರ್ಷಿಕೋತ್ಸವದ ವೇಳೆ ಮಗನೊಂದಿಗೆ ಜೈಲಿಗೆ ತೆರಳಿ Darshan ಅವರನ್ನು ಭೇಟಿಯಾಗಿದ್ದ ವಿಜಯಲಕ್ಷ್ಮಿ, ಇದೀಗ ಮತ್ತೊಮ್ಮೆ ಪತಿಯನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ ನಟಿ ರಕ್ಷಿತಾ ಪ್ರೇಮ್ ಕೂಡ ಪ್ರತ್ಯೇಕವಾಗಿ ಜೈಲಿಗೆ ಬಂದು ದರ್ಶನ್ ಅವರನ್ನು ಭೇಟಿಯಾಗಿದ್ದಾರೆ.
ಇದನ್ನು ಓದಿ : ನಟ Darshan ಜೈಲಿನಲ್ಲಿರುವಾಗಲೇ ಪತ್ನಿ ವಿಜಯಲಕ್ಷ್ಮಿ ಅಚ್ಚರಿ ಪೋಸ್ಟ್

ಪ್ರತ್ಯೇಕ ಕಾರುಗಳಲ್ಲಿ ಜೈಲಿಗೆ ಆಗಮನ
ವಿಜಯಲಕ್ಷ್ಮಿ ಮತ್ತು ರಕ್ಷಿತಾ ಪ್ರೇಮ್ ಇಬ್ಬರೂ ಪ್ರತ್ಯೇಕ ಕಾರುಗಳಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಆಗಮಿಸಿದರು. ದರ್ಶನ್ ಅವರನ್ನು ಭೇಟಿ ಮಾಡಲು ರಕ್ಷಿತಾ ಪ್ರೇಮ್ ಆಗಮಿಸಿರುವುದು ಇದು ಎರಡನೇ ಬಾರಿ. ಈ ಹಿಂದೆ ಅವರು ತಮ್ಮ ಪತಿ ನಿರ್ದೇಶಕ ಪ್ರೇಮ್ ಅವರೊಂದಿಗೆ ಜೈಲಿಗೆ ಭೇಟಿ ನೀಡಿ ದರ್ಶನ್ ಅವರ ಆರೋಗ್ಯ ಹಾಗೂ ಯೋಗಕ್ಷೇಮವನ್ನು ವಿಚಾರಿಸಿದ್ದರು.
Darshan – ರಕ್ಷಿತಾ ನಡುವೆ ಮಾತುಕತೆ ಏನಾಗಿದೆ?
ಸದ್ಯ ರಕ್ಷಿತಾ ಅವರು ಯಾವ ಕಾರಣಕ್ಕಾಗಿ ಆಗಮಿಸಿದ್ದರು. ಇಬ್ಬರ ನಡುವೆ ಏನು ಮಾತುಕತೆ ಆಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

ಇದನ್ನು ನೋಡಿ : ತುಮಕೂರಿನಲ್ಲಿ AIRPORT ನಿರ್ಮಾಣಕ್ಕೆ ಒತ್ತಾಯ – BJP ಮುಖಂಡ SPOORTHY CHIDANAND ಏನಂದ್ರು?




