WhatsApp ನಲ್ಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ?

ಇಂದಿನ ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್ ಪ್ರತಿಯೊಬ್ಬ ಭಾರತೀಯನ ಪ್ರಮುಖ ಗುರುತಿನ ಚೀಟಿಯಾಗಿದೆ. ಬ್ಯಾಂಕಿಂಗ್ ವ್ಯವಹಾರ, ಸರ್ಕಾರಿ ಯೋಜನೆಗಳ ಸೌಲಭ್ಯ, ಸಬ್ಸಿಡಿ ಸೇರಿದಂತೆ ಅನೇಕ ಸೇವೆಗಳಿಗೆ ಆಧಾರ್ ಕಡ್ಡಾಯವಾಗಿದೆ. ಆದರೆ, ಆಧಾರ್ ಕಾರ್ಡ್ ಜೊತೆಯಲ್ಲಿಲ್ಲದಿದ್ದರೂ ಈಗ ಚಿಂತಿಸುವ ಅಗತ್ಯವಿಲ್ಲ. ಇನ್ನು ನಿಮ್ಮ ಮೊಬೈಲ್ನ ವಾಟ್ಸಾಪ್ (Whatsapp) ಮೂಲಕವೇ ಕೆಲವೇ ಕ್ಷಣಗಳಲ್ಲಿ ಆಧಾರ್ ಕಾರ್ಡ್ನ ಡಿಜಿಟಲ್ ಪ್ರತಿಯನ್ನು ಪಡೆಯಬಹುದಾಗಿದೆ.
WhatsApp ಮೂಲಕವೇ ಡಿಜಿಟಲ್ ಆಧಾರ್
ಕೇಂದ್ರ ಸರ್ಕಾರದ MyGov Helpdesk ಚಾಟ್ಬಾಟ್ ಈ ಸೌಲಭ್ಯವನ್ನು ಒದಗಿಸಿದೆ. ಈ ಸೇವೆಯನ್ನು ಬಳಸಲು ನಿಮ್ಮ ಆಧಾರ್ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು.
ಜೊತೆಗೆ ನಿಮ್ಮ ಹೆಸರಿನಲ್ಲಿ ಸಕ್ರಿಯ DigiLocker ಖಾತೆಯೂ ಇರಬೇಕು. ಸರ್ಕಾರದ ಅಧಿಕೃತ ವಾಟ್ಸಾಪ್ ಸಂಖ್ಯೆ 90131 51515 ಅನ್ನು ಮೊಬೈಲ್ನಲ್ಲಿ ಸೇವ್ ಮಾಡಿಕೊಂಡಿರಬೇಕು.
ಇದನ್ನು ಓದಿ : Whatsapp ನಲ್ಲಿ ಯಾರಾದರೂ ಬ್ಲ್ಯಾಕ್ ಮೇಲ್ ಮಾಡಿದರೆ ಇಲ್ಲಿ ದೂರು ನೀಡಿ!

ವಾಟ್ಸಾಪ್ನಲ್ಲಿ ಆಧಾರ್ ಪಡೆಯುವ ವಿಧಾನ
- 90131 51515 ಸಂಖ್ಯೆಗೆ Hi ಅಥವಾ ನಮಸ್ತೆ ಎಂದು ಮೆಸೇಜ್ ಕಳುಹಿಸಿ
- DigiLocker Services ಆಯ್ಕೆ ಮಾಡಿ
- 12 ಅಂಕಿಯ ಆಧಾರ್ ಸಂಖ್ಯೆ ನಮೂದಿಸಿ
- ಮೊಬೈಲ್ಗೆ ಬಂದ OTP ನಮೂದಿಸಿ
- Aadhaar Card ಆಯ್ಕೆ ಮಾಡಿದರೆ PDF ಲಭ್ಯ

ಆಧಾರ್ ಡೌನ್ ಲೋಡ್ ಮಾಡುವ ಸರಳ ಹಂತಗಳು
OTP ಪರಿಶೀಲನೆ ಯಶಸ್ವಿಯಾದ ಬಳಿಕ ಡಿಜಿಲಾಕರ್ನಲ್ಲಿರುವ ದಾಖಲೆಗಳ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ಆಧಾರ್ ಕಾರ್ಡ್ ಆಯ್ಕೆ ಮಾಡಿದರೆ ಕೆಲವೇ ಕ್ಷಣಗಳಲ್ಲಿ ಆಧಾರ್ ಕಾರ್ಡ್ನ PDF ಪ್ರತಿಯು ವಾಟ್ಸಾಪ್ ಚಾಟ್ಗೆ ಬರುತ್ತದೆ.
ಅದನ್ನು ಡೌನ್ಲೋಡ್ ಮಾಡಿಕೊಂಡು ಯಾವುದೇ ಅಧಿಕೃತ ಕೆಲಸಗಳಿಗೆ ಬಳಸಿಕೊಳ್ಳಬಹುದು.
ಇಂಟರ್ನೆಟ್ ಕೆಫೆ ಅಥವಾ ವೆಬ್ಸೈಟ್ಗೆ ಹೋಗುವ ಅಗತ್ಯವಿಲ್ಲದೆ, ವಾಟ್ಸಾಪ್ನಲ್ಲೇ ಸುಲಭವಾಗಿ ಆಧಾರ್ ಕಾರ್ಡ್ ಪಡೆಯುವ ಈ ವ್ಯವಸ್ಥೆ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲಕರವಾಗಿದೆ. ಆದರೆ, ನಿಮ್ಮ OTP ಹಾಗೂ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಇದನ್ನು ನೋಡಿ : ಬೈಕ್ಗೆ ಡಿಕ್ಕಿ ಹೊಡೆದ ತಹಶೀಲ್ದಾರ್ JEEP- ಸ್ಥಳದಲ್ಲೇ ಓರ್ವ ಬೈಕ್ ಸವಾರ ಸಾ*




