WhatsApp ನಲ್ಲಿ ಯಾರಾದರೂ ನಿಮ್ಮನ್ನು ಬ್ಲಾಕ್ ಮಾಡಿದ್ದಾರಾ? ಹಾಗಾದ್ರೆ ಇಲ್ಲಿ ದೂರು ನೀಡಿ

ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಮೂಲಕ ಬ್ಲ್ಯಾಕ್ಮೇಲ್ ಮಾಡುವ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗ್ತಿವೆ. ಅಪರಿಚಿತರು ವಿಡಿಯೋ ಕರೆ ಮಾಡಿ ಅಥವಾ ಖಾಸಗಿ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.
Whatsapp ನಲ್ಲಿ ಯಾರಾದರೂ ಬ್ಲ್ಯಾಕ್ ಮೇಲ್ ಮಾಡಿದ್ರೆ ಏನು ಮಾಡಬೇಕು?
ಯಾರಾದರೂ Whatsapp ಮೂಲಕ ನಿಮ್ಮನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟರೆ ಅಥವಾ ಬ್ಲ್ಯಾಕ್ಮೇಲ್ ಮಾಡಲು ಪ್ರಯತ್ನಿಸಿದರೆ, ಮೊದಲಿಗೆ ಯಾವುದೇ ಪ್ರತಿಕ್ರಿಯೆ ನೀಡಬೇಡಿ. ಅವರ ಬೇಡಿಕೆಗಳಿಗೆ ಮಣಿಯದೇ ತಕ್ಷಣ ಆ ನಂಬರ್ ಅನ್ನು ಬ್ಲಾಕ್ ಮಾಡಿ.
ನಂಬರ್ ಬ್ಲಾಕ್ ಮಾಡುವ ಮೊದಲು ಅವರು ಕಳುಹಿಸಿರುವ ಸಂದೇಶಗಳು, ಫೋಟೋಗಳು, ವಿಡಿಯೋ ಕರೆ ವಿವರಗಳು ಸೇರಿದಂತೆ ಎಲ್ಲಾ ಮಾಹಿತಿಯ ಸ್ಕ್ರೀನ್ಶಾಟ್ ತೆಗೆದು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಇವು ಮುಂದಿನ ತನಿಖೆಗೆ ಪ್ರಮುಖ ಸಾಕ್ಷ್ಯಗಳಾಗುತ್ತವೆ.
ಇದನ್ನು ಓದಿ : `WhatsApp’ ಬಳಕೆದಾರರೇ ಎಚ್ಚರ – ಈ ಮೆಸೇಜ್ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ !

ಈ ಸಂಖ್ಯೆಗೆ ಕರೆ ಮಾಡಿ ದೂರು ನೀಡಿ!
ಸೈಬರ್ ವಂಚನೆ ಅಥವಾ ಬ್ಲ್ಯಾಕ್ಮೇಲ್ಗೆ ಒಳಗಾದರೆ ಕೂಡಲೇ 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು. ಸೈಬರ್ ಅಪರಾಧ ಪ್ರಕರಣಗಳಲ್ಲಿ ತ್ವರಿತ ನೆರವು ಪಡೆಯಲು ಈ ಸೇವೆ ಲಭ್ಯವಿದೆ.
ಆನ್ಲೈನ್ನಲ್ಲೇ ದೂರು!
ಇದಲ್ಲದೆ, ಕೇಂದ್ರ ಸರ್ಕಾರದ ಸೈಬರ್ ಕ್ರೈಮ್ ಪೋರ್ಟಲ್ (National Cyber Crime Reporting Portal) ಮೂಲಕ ಆನ್ಲೈನ್ನಲ್ಲೇ ದೂರು ದಾಖಲಿಸಬಹುದು.
ಅಗತ್ಯ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ಅಪ್ಲೋಡ್ ಮಾಡಿ ದೂರು ಸಲ್ಲಿಸುವ ಅವಕಾಶವಿದೆ. ಅಗತ್ಯವಿದ್ದರೆ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರನ್ನೂ ಸಲ್ಲಿಸಬಹುದು.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಾರೆ.

ಮುನ್ನೆಚ್ಚರಿಕೆ ಕ್ರಮಗಳು
- ಅಪರಿಚಿತ ನಂಬರ್ಗಳಿಂದ ಬರುವ ವಿಡಿಯೋ ಕರೆಗಳನ್ನು ಸ್ವೀಕರಿಸಬೇಡಿ.
- ನಿಮ್ಮ ವೈಯಕ್ತಿಕ ಫೋಟೋ ಅಥವಾ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ.
- ಯಾವುದೇ ಬೆದರಿಕೆಗೆ ಹೆದರಿ ಹಣವನ್ನು ವರ್ಗಾಯಿಸಬೇಡಿ.
- ನೆನಪಿಡಿ, ಜಾಗೃತಿಯೇ ಇಂತಹ ಸೈಬರ್ ಅಪರಾಧಗಳಿಗೆ ಮೊದಲ ಮದ್ದು.

ಇದನ್ನು ನೋಡಿ : ಗ್ರಾಮೀಣ ಪ್ರಯಾಣಿಕರಿಗೆ ಡಿಕೆಶಿ ಗುಡ್ ನ್ಯೂಸ್ ಹಳ್ಳಿ ಜನರ ಪ್ರಯಾಣಕ್ಕೆ 400 ಬಸ್ ಗಳ ಖರೀದಿ




