Bengaluru : ಕಟ್ಟಡದಿಂದ ಬಿದ್ದ ಮಹಿಳೆ ದುರ್ಮರಣ

ಮನೆಗೆ ಚಾಚಿಕೊಂಡಿದ್ದ ಮರದ ಕೊಂಬೆಗಳನ್ನು ಕತ್ತರಿಸಲು ಹೋಗಿದ್ದ ಮಹಿಳೆಯೊಬ್ಬರು ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ Bengaluru ರಾಜಾಜಿನಗರದಲ್ಲಿ ನಡೆದಿದೆ. ರಾಜಾಜಿನಗರ ನಿವಾಸಿ ಪ್ರಮೀಳಾ ಬಾಯಿ (58) ಮೃತ ಮಹಿಳೆ.
ಕಟ್ಟಡದಿಂದ ಬಿದ್ದ ಮಹಿಳೆ ದುರ್ಮರಣ
ಮನೆಯ ಬಳಿ ಬೆಳದಿದ್ದ ಮರದ ಕೊಂಬೆಗಳು ಮನೆಗೆ ಬಾಚಿಕೊಂಡಿದ್ದ ಕಾರಣ ಅವುಗಳನ್ನು ಕತ್ತರಿಸುವಂತೆ ಜಿಬಿಎಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆ ಮಹಿಳೆ ತಾವೇ ಕೊಂಬೆ ಕತ್ತರಿಸಲು ಟೆರಸ್ ಮೇಲೆ ಹೋಗಿದ್ದಾರೆ. ಈ ವೇಳೆ ಟೆರಸ್ ಮೇಲಿನ ಒಂದು ಕೊಠಡಿಗೆ ಅಳವಡಿಸಲಾಗಿದ್ದ ಶೀಟ್ ಮೇಲೆ ಕಾಲಿಟ್ಟಿದ್ದು, ಶೀಟ್ ಮುರಿದು ಹೋಗಿದೆ.
ಇದನ್ನು ಓದಿ : ತೀವ್ರ ಎದೆನೋವಿನಿಂದ ASI ಸಾವು..!!

ಇನ್ನು ಪ್ರಮೀಳಾ ಅವರು ಕೆಳಗಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಜೂನ್ 18ರಂದು ಸಂಜೆ 5 ಗಂಟೆ ಸುಮಾರಿಗೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Bengaluru – ಜಿಬಿಎ ನಿರ್ಲಕ್ಷ್ಯದಿಂದಲೇ ದುರಂತ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಜಿಬಿಎ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ನೋಡಿ : ರಾಜ್ಯದಲ್ಲಿ ಕೈ ಕೊಟ್ಟ ಮಳೆರಾಯ ತುಮಕೂರಿನಲ್ಲಿ ಮುಂದಿನ ವಾರ ಮಳೆ ಆಗುತ್ತಾ




