ತುಮಕೂರು ಜಿಲ್ಲೆಯ Koratagere ಯಲ್ಲಿ ತೀವ್ರ ಎದೆನೋವಿನಿಂದ ಎಎಸ್ಐ ಎನ್.ಜಿ. ಪವಾರ್ (54) ಮೃತಪಟ್ಟಿದ್ದಾರೆ.

ತುಮಕೂರು ಜಿಲ್ಲೆಯ Koratagere ಯಲ್ಲಿ ತೀವ್ರ ಎದೆನೋವಿನಿಂದ ಕೆಎಸ್ಆರ್ಪಿ ಎಎಸ್ಐ ಎನ್.ಜಿ. ಪವಾರ್ (54) ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆಗೆ ಸಿಬ್ಬಂದಿ ಬ್ಯಾರಕ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಅವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿದ್ದು, ಸಹೋದ್ಯೋಗಿಗಳು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದರು.

MUST READ : Tumkur ನಲ್ಲಿ ಅನಧಿಕೃತ ಆಶ್ರಮದ ಮೇಲೆ ದಾಳಿ, 64 ಜನರ ರಕ್ಷಣೆ..!
ಆದರೆ, ಚಿಕಿತ್ಸೆಗಾಗಿ ಸಾಗಿಸುವ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದವರಾದ ಎನ್.ಜಿ. ಪವಾರ್ ಅವರ ಪತ್ನಿಯೂ ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಘಟನೆ ಕುರಿತು ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
MUST WATCH : ಸರ್ಕಾರಿ ಶಾಲೆಗೆ DC ದಿಢೀರ್ VISIT -ಮಕ್ಕಳಿಗೆ ಪೌಷ್ಠಿಕ ಆಹಾರ ನೀಡದ್ದಕ್ಕೆ ಗರಂ.! | MADHUGIRI NEWS |




