ಎಐ ಬಳಸಿ Rukmini Vasanth ಬಿಕಿನಿ ಫೋಟೋ ವೈರಲ್ ಕೇಸ್ – ಮೂವರು ಅರೆಸ್ಟ್

ಸೋಷಿಯಲ್ ಮೀಡಿಯಾದಲ್ಲಿ ನಟಿ ರುಕ್ಮಿಣಿ ವಸಂತ ಅವರ ಹೆಸರಿನಲ್ಲಿ ಎಐ ಮೂಲಕ ಸೃಷ್ಟಿಸಿದ್ದ ಅಶ್ಲೀಲ ಫೋಟೊ ವೈರಲ್ ಕೇಸ್ನಲ್ಲಿ ಸೈಬರ್ ಕ್ರೈಂ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರು ಯಾರು?
ಬಾಗಲಕೋಟೆಯ ರವಿಕುಮಾರ್(24), ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಚಂದ್ರಕಾಂತ್(33) ಹಾಗೂ ಬೆಂಗಳೂರಿನ ರಂಜಿತ್(25) ಬಂಧಿತ ಆರೋಪಿಗಳಾಗಿದ್ದಾರೆ. ರುಕ್ಮಿಣಿ ವಸಂತ್ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಟಿ ನೀಡಿದ ದೂರಿನಲ್ಲೇನಿದೆ?
ಕಾಂತಾರದ ಕನಕವತಿ Rukmini Vasanth ಬಿಕಿನಿ ಫೋಟೋ ಪೋಸ್ಟ್ ಮಾಡಿದ ಪ್ರಕರಣದ ಸಂಬಂಧ ರುಕ್ಮಿಣಿ ವಸಂತ್ ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮ್ಮ ದೂರಿನಲ್ಲಿ, ಎಐ ತಂತ್ರಜ್ಞಾನ ಬಳಸಿಕೊಂಡು ತಮ್ಮ ಫೋಟೋವನ್ನು ಬಿಕಿನಿ ಮಾದರಿಯಲ್ಲಿ ಸೃಷ್ಟಿಸಲಾಗಿದೆ. ಡೀಪ್ಫೇಕ್ ತಂತ್ರಜ್ಞಾನ ಮೂಲಕ ಬೇರೆಯವರ ದೇಹಕ್ಕೆ ತಮ್ಮ ಮುಖವನ್ನು ಸೇರಿಸಿ ನಕಲಿ ಫೋಟೋ ಹಾಗೂ ವಿಡಿಯೋಗಳನ್ನು ತಯಾರಿಸಲಾಗಿದೆ ಎಂದು ರುಕ್ಮಿಣಿ ವಸಂತ್ ಆರೋಪಿಸಿದ್ದರು.
ಇದನ್ನು ಓದಿ : ನಟಿ ರುಕ್ಮಿಣಿ ವಸಂತ್ ಡೀಪ್ಫೇಕ್ ಪ್ರಕರಣ – 29 ಅಕೌಂಟ್ಗಳ ವಿರುದ್ಧ FIR!

ʼನನ್ನ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ – Rukmini Vasanthʼ
ಈ ನಕಲಿ ಚಿತ್ರಗಳು ಮತ್ತು ವಿಡಿಯೋಗಳು ತಮ್ಮ ಗೌರವಕ್ಕೆ ಧಕ್ಕೆ ಉಂಟುಮಾಡಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸೈಬರ್ ಕ್ರೈಂ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಡೀಪ್ಫೇಕ್ ಜಾಲದ ಹಿಂದೆ ಯಾರಿದ್ದಾರೆ?
ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾಗಿದ್ದ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ಡೀಪ್ಫೇಕ್ ಜಾಲದ ಹಿಂದೆ ಬೇರೆಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.

ಈ ಹಿಂದೆ ಇತರೆ ನಟಿಯರಿಗೂ ಇಂತಹ ಅಶ್ಲೀಲ ಕಮೆಂಟ್ ಹಾಗೂ ಮಾರ್ಫಿಂಗ್ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಂಡಿದ್ದ ಪೊಲೀಸರು, ಈ ಪ್ರಕರಣದಲ್ಲಿಯೂ ಕಿಡಿಗೇಡಿಗಳ ಬಂಧಿಸಿದ್ದಾರೆ.

ಇದನ್ನು ನೋಡಿ : ತುಮಕೂರಿನ ನಜರಾಬಾದ್ ಕಸದಿಂದ ಗಬ್ಬೇದ್ದು ನಾರುತ್ತಿದೆ




