Bengaluru : ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗ್ತಿದ್ಯಾ ಮೊಬೈಲ್, ಟಿವಿ ನೆಟ್ ಫ್ಲಿಕ್ಸ್ ಸೌಲಭ್ಯ – ಜೈಲಿನಲ್ಲಿ ಐಷಾರಾಮಿ ಸೌಲಭ್ಯಗಳಿವೆ ಎಂದು ಬಿಂಬಿಸುವ ವಿಡಿಯೋ ವೈರಲ್

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಬಿಂದಾಸ್ ಲೈಫ್ ಮಾಡ್ತಾ ಇದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಪತ್ತೆ, ಡ್ರಗ್ಸ್ ಸಾಗಾಟ ಇವೆಲ್ಲ ಹೊಸದೇನಲ್ಲ. ಹೀಗಾಗಿ ಡಿಜಿಪಿ ಅಲೋಕ್ ಕುಮಾರ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ರು.
ಅಲೋಕ್ ಕುಮಾರ್ ಹೆಸರು ಕೆಡಿಸಲು ಕಿಡಿಗೇಡಿಗಳ ಕೃತ್ಯ
ಆದ್ರೆ ಖಡಕ್ ಆಫೀಸರ್ ಅಲೋಕ್ ಕುಮಾರ್ ಅವರ ಹೆಸರು ಕೆಡಿಸಲು ಕಿಡಿಗೇಡಿಗಳು ಕೃತ್ಯ ಎಸಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್, ಟಿವಿ ನೆಟ್ ಫ್ಲಿಕ್ಸ್ ಸೌಲಭ್ಯ ಇರುವ ಬಗ್ಗೆ ವಿಡಿಯೋವೊಂದು ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಭದ್ರತಾ ಲೋಪವನ್ನು ಬಯಲು ಮಾಡಿದೆ. ಬೇಕಂತಲೇ ಡಿಜಿಪಿ ಅಲೋಕ್ ಕುಮಾರ್ ಅವರ ಹೆಸರು ಹೇಳಿ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಕೈದಿಗಳ ನಿಜ ಬಣ್ಣ ಬಯಲು
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟೋರಿಯಸ್ ರೌಡಿಗಳ ಬ್ಯಾರಕ್ಗಳನ್ನು ಬದಲಾವಣೆ ಮಾಡುವಂತೆ ಡಿಜಿಪಿ ಅಲೋಕ್ ಕುಮಾರ್ ಸೂಚಿಸಿದ್ರು. ಈ ಬೆನ್ನಲ್ಲೇ ಡ್ರೈನೇಜ್ಗಳಲ್ಲಿ ಇದ್ದ ಮೊಬೈಲ್ಗಳನ್ನು ಹೊರತೆಗೆದು, ಅಲೋಕ್ ಕುಮಾರ್ ಅವರೇ ಮೊಬೈಲ್ ಕೊಟ್ಟಿದ್ರು, ಐಪಿಎಲ್ ಮ್ಯಾಚ್ ಇದೆ ಕಪ್ ನಮ್ದೇ ಅಂತಾ ವಿಡಿಯೋ ಮಾಡಿ ವೈರಲ್ ಮಾಡಿದ್ದ ಕೈದಿಗಳ ನಿಜ ಬಣ್ಣ ಬಯಲಾಗಿದೆ.

READ THIS : ಕೃಷಿ ಹೊಂಡದಲ್ಲಿ ಈಜಲು ಹೋದ ನಾಲ್ವರು ಮಕ್ಕಳು ಜಲಸಮಾಧಿ!
ವಿಚಾರಣಾಧೀನ ಕೈದಿಗಳು ಕೃತ್ಯದಲ್ಲಿ ಭಾಗಿ
ಇನ್ನು ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ಬ್ಯಾರಕ್ನ ಡ್ರೈನೇಜ್ ಮಾರ್ಗದಲ್ಲಿ ಹಾಲಿನ ಪ್ಯಾಕೇಟ್ಗಳಲ್ಲಿ ಮೊಬೈಲ್ಗಳನ್ನ ಸುತ್ತಿ ಅಡಗಿಸಿಟ್ಟಿದ್ದು, ಕೈದಿಗಳಿಂದಲೇ ಮೊಬೈಲ್ಗಳನ್ನು ಹಿಂತೆಗೆಸಿದ್ದಾರೆ. ತನಿಖೆಯಲ್ಲಿ ವಿಡಿಯೋ ಮಾಡಿದ್ದ ಕೈದಿಗಳನ್ನು ಪತ್ತೆಹಚ್ಚಲಾಗಿದೆ.
ದರ್ಶನ್, ಅಭಿಷೇಕ್ ಮತ್ತು ಎಂಡ್ರೋಸ್ ಎಂಬ ವಿಚಾರಣಾಧೀನ ಕೈದಿಗಳು ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಇವರು ಕೊಲೆ ಪ್ರಕರಣದ ಆರೋಪಿಗಳಾಗಿದ್ದು, ಬೇರೆ ಬ್ಯಾರಕ್ಗೆ ಸ್ಥಳಾಂತರ ಮಾಡಿದ ಹಿನ್ನೆಲೆಯಲ್ಲಿ ಅಸಮಾಧಾನದಿಂದ ಉದ್ದೇಶಪೂರ್ವಕವಾಗಿ ಡಿಜಿಪಿ ಅಲೋಕ್ ಕುಮಾರ್ ಹೆಸರಿಗೆ ಕಳಂಕ ತರಲು ಈ ವಿಡಿಯೋ ಮಾಡಿ ವೈರಲ್ ಮಾಡಿರುವ ಶಂಕೆ ವ್ಯಕ್ತವಾಗ್ತಾ ಇದೆ.
ಡಿಜಿಪಿ ಅಲೋಕ್ ಕುಮಾರ್ ಅಮಾನತು – Bengaluru
ಇನ್ನು ವಿಡಿಯೋ ವೈರಲ್ ಆದ ಬೆನ್ನಲ್ಲೇ ಕರ್ತವ್ಯ ಲೋಪದ ಆಧಾರದ ಮೇರೆಗೆ ವಾರ್ಡರ್ಗಳಾದ ಶಿವಾನಂದ ಕರ್ಲಬಟ್ಟಿ, ನಿರಂಜನ ಎ. ಕಾಮತ್ ಮತ್ತು ಹನುಮಂತಪ್ಪ ಹಡಪದ್ ಅವರನ್ನು ಡಿಜಿಪಿ ಅಲೋಕ್ ಕುಮಾರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಅಲ್ದೇ ಈ ಪ್ರಕರಣ ಸಂಬಂಧ ಅಲೋಕ್ ಕುಮಾರ್ ಅಸಮಾಧಾನ ಹೊರಹಾಕಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅದೇನೆ ಆಗಲಿ ಡಿಜಿಪಿ ಅಲೋಕ್ ಕುಮಾರ್ ಅವರ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ಕೈದಿಗಳು ಈ ರೀತಿಯ ಕೆಲಸ ಮಾಡಿದ್ದು ಮಾತ್ರ ತಪ್ಪಾಗಿದ್ದು, ಕರ್ತವ್ಯ ಲೋಪ ಎಸಗಿದ ವಾರ್ಡರ್ಗಳ ವಿರುದ್ಧ ಆಕ್ರೋಶ ಹೆಚ್ಚಾಗಿದೆ.
MUST WATCH : ಐಪಿಎಲ್ ಚೊಚ್ಚಲ ಮ್ಯಾಚ್ ನಲ್ಲಿ RCB ಗೆಲುವು ಅಭಿಮಾನಿಗಳ ಸಂಭ್ರಮ ಹೇಗಿತ್ತು ಗೊತ್ತಾ.. ?





