Kalaburagi : ಕಬ್ಬು ನಾಟಿ ಮಾಡುತ್ತಿದ್ದಾಗ ಸಿಡಿಲು ಬಡಿದು ಯುವ ರೈತ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ..

ಕಬ್ಬು ನಾಟಿ ಮಾಡುತ್ತಿದ್ದಾಗ ಸಿಡಿಲು ಬಡಿದು ಯುವ ರೈತ ಸಾವನ್ನಪ್ಪಿರುವ ದುರ್ಘಟನೆ Kalaburagi ಜಿಲ್ಲೆಯ Chincholi ತಾಲೂಕಿನ ಶಾದಿಪುರ ತಾಂಡಾದಲ್ಲಿ ನಡೆದಿದೆ.
ಮೃತರನ್ನು ಮಹೇಶ್ ಚೌವ್ಹಾಣ್ (24) ಎಂದು ಗುರುತಿಸಲಾಗಿದೆ. ಅವರು ಜಮೀನಿನಲ್ಲಿ ಕಬ್ಬು ನಾಟಿ ಮಾಡಲು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
MUST READ : Dina Bhavishya : ದಿನ ಭವಿಷ್ಯ 25 ಮಾರ್ಚ್ 2026..
ಜಮೀನಿನಲ್ಲಿ ಕೆಲಸ ಮಾಡುವಾಗಲೇ ಸಿಡಿಲಿನ ದಾಳಿ
ಇಂದು ಕಲಬುರಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಿರುಗಾಳಿ ಮತ್ತು ಗುಡುಗು ಸಹಿತ ಮಳೆಯಾಗಿತ್ತು. ಈ ಸಂದರ್ಭದಲ್ಲಿ ಮಹೇಶ್ ಅವರು ತಮ್ಮ ಜಮೀನಿನಲ್ಲಿ ಕಬ್ಬು ನಾಟಿ ಮಾಡುತ್ತಿದ್ದಾಗ, ಅಕಸ್ಮಿಕವಾಗಿ ಸಿಡಿಲು ಬಡಿದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದರಿಂದ ಗ್ರಾಮದಲ್ಲಿ ಆತಂಕ ಮತ್ತು ದುಃಖದ ವಾತಾವರಣ ನಿರ್ಮಾಣವಾಗಿದೆ.
ಅಧಿಕಾರಿಗಳ ಭೇಟಿ ಮತ್ತು ಪರಿಶೀಲನೆ
ಘಟನೆಯ ಮಾಹಿತಿ ತಿಳಿದ ತಕ್ಷಣ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ, ಪ್ರಕರಣವು ಕುಂಚಾವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
MUST WATCH : GOVERNAMENT HOSTELನಲ್ಲಿ ಹತ್ತಾರು ಸಮಸ್ಯೆಗಳು- ಸಮಸ್ಯೆ ಪರಿಹರಿಸಿ ಅಂದ್ರೆ ಕಥೆ ಕಟ್ಟುತ್ತಾರಂತೆ..! | TUMAKURU |




