Dina Bhavishya : ಇಂದು ಮೇಷ ಸೇರಿ ಈ 6 ರಾಶಿಗೆ ವಿಘ್ನವಿನಾಯಕನ ಅನುಗ್ರಹದಿಂದ ವಿಘ್ನಗಳೆಲ್ಲಾ ದೂರ..!

Dina Bhavishya : 2026 ಮಾರ್ಚ್ 25ರ ಬುಧವಾರವಾದ ಇಂದು, ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.
ಮೇಷ ರಾಶಿ
ಇಂದು ನಿಮಗೆ ವಿಶೇಷ ಭರವಸೆ ದೊರೆಯುವ ದಿನ. ಕಾನೂನು ವಿಷಯಗಳಲ್ಲಿ ಪರಿಹಾರ ಮತ್ತು ಯಶಸ್ಸಿನ ಸೂಚನೆ ಇದೆ. ವೃತ್ತಿಯಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಹೊಸ ಅವಕಾಶಗಳು ಕಾಣಿಸಿಕೊಳ್ಳಬಹುದು.
ಆದರೆ ಇತರರ ವ್ಯವಹಾರಗಳಲ್ಲಿ ಅನಗತ್ಯ ಹಸ್ತಕ್ಷೇಪವನ್ನು ತಪ್ಪಿಸುವುದು ಉತ್ತಮ. ವಾಹನ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ.
ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಒಳಿತು. ಒಟ್ಟಾರೆ ದಿನವು ಆಹ್ಲಾದಕರವಾಗಿರುತ್ತದೆ.
ವೃಷಭ ರಾಶಿ
ಇಂದು “ಹುಟ್ಟುಗುಣ ಘಟ್ಟ ಹತ್ತಿದರೂ ಹೋಗದು” ಎಂಬ ಮಾತನ್ನು ನೆನಪಿಸಿಕೊಳ್ಳುವುದು ಉತ್ತಮ. ಹೊಸ ಪರಿಸರ ಅಥವಾ ಹೊಸ ಜನರೊಂದಿಗೆ ಹೊಂದಿಕೊಳ್ಳುವ ಮನೋಭಾವವನ್ನು ಬೆಳೆಸಿದರೆ ಬದಲಾವಣೆಯಿಂದ ದೊಡ್ಡ ಸಾಧನೆ ಸಾಧ್ಯವಾಗುತ್ತದೆ.
ವ್ಯವಹಾರದಲ್ಲಿ ತೊಡಗಿರುವವರಿಗೆ ದಿನ ಅನುಕೂಲಕರವಾಗಿದ್ದು, ಕಠಿಣ ಪರಿಶ್ರಮಕ್ಕೆ ಫಲ ಸಿಗುತ್ತದೆ. ಹಿಂದಿನ ತಪ್ಪುಗಳಿಂದ ಪಾಠ ಕಲಿದು ಮುಂದುವರಿದರೆ ಪ್ರಗತಿ ಖಚಿತ.
ಮಿಥುನ ರಾಶಿ
ಇಂದು ಕೆಲಸದ ಸ್ಥಳದಲ್ಲಿ ಬಾಸ್ ಅನವಶ್ಯಕ ಕಿರಿಕಿರಿ ಮಾಡಿದರೂ ಶಾಂತವಾಗಿ ನಡೆದುಕೊಳ್ಳುವುದು ಉತ್ತಮ. ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿದರೆ ಪ್ರಶಂಸೆ ಸಿಗಬಹುದು. ಅನ್ಯರೊಂದಿಗೆ ವಾದ–ವಿವಾದಗಳನ್ನು ತಪ್ಪಿಸಿ, ಸಮಸ್ಯೆಗಳು ಬಂದಾಗ ಧೈರ್ಯದಿಂದ ಎದುರಿಸುವ ಮನೋಭಾವ ಇರಲಿ.
ಸ್ನೇಹಿತರ ಸಹಾಯದಿಂದ ಒತ್ತಡ ಕಡಿಮೆಯಾಗಬಹುದು. ಮಕ್ಕಳ ಪ್ರಗತಿ ಕುಟುಂಬದಲ್ಲಿ ಸಂತೋಷ ತರಬಹುದು. ಸಾಮಾಜಿಕ ಹಾಗೂ ವೃತ್ತಿ ಕ್ಷೇತ್ರದಲ್ಲಿ ಬೆಳವಣಿಗೆ ಕಂಡುಬಂದು, ಆದಾಯದಲ್ಲೂ ಉತ್ತಮ ಏರಿಕೆ ಸಾಧ್ಯವಾಗುವ ದಿನ.
ಕಟಕ ರಾಶಿ
ಕಟಕ ರಾಶಿಯವರಿಗೆ ಇಂದು ಗುರು ಹಾಗೂ ಹಿರಿಯರಿಗೆ ಮಾಡುವ ಸೇವೆಯಿಂದ ಯಶಸ್ಸಿನ ದಾರಿಗೆ ಸಾಗುವ ಸಾಧ್ಯತೆ ಇದೆ. ಅವರ ಆಶೀರ್ವಾದದಿಂದ ಆತ್ಮಬಲ ಹೆಚ್ಚಾಗಿ ಮನಸ್ಸಿಗೆ ನೆಮ್ಮದಿ ದೊರೆಯಬಹುದು.
ಸರ್ಕಾರಿ ನೌಕರರಿಗೆ ಪ್ರಶಂಸೆ ಸಿಗುವ ದಿನವಾಗಬಹುದು. ಹಣಕಾಸು ವ್ಯವಹಾರ ನಡೆಸುವವರಿಗೆ ಸಾಲ ವಸೂಲಾತಿಯಲ್ಲಿ ಸ್ವಲ್ಪ ಅಡ್ಡಿಗಳು ಎದುರಾಗಬಹುದು. ವಿವಾಹ ಯೋಗ್ಯರಿಗೆ ಮದುವೆಯ ಯೋಗಗಳು ಕಾಣಿಸಿಕೊಳ್ಳುವ ಸೂಚನೆ ಇದೆ.
ಸಿಂಹ ರಾಶಿ
ಇಂದು ನಿಮ್ಮನ್ನು ಕಾಡುತ್ತಿದ್ದ ಚಿಂತೆಗಳಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಚಂಚಲತೆ ತೋರದೆ ಗಟ್ಟಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಚಾಡಿ ಮಾತುಗಳನ್ನಾಡುವ ಬಂಧುಗಳ ಬಗ್ಗೆ ಎಚ್ಚರಿಕೆಯಿಂದಿದ್ದು, ವೈಯಕ್ತಿಕ ವಿಚಾರಗಳನ್ನು ಬಹಿರಂಗವಾಗಿ ಹಂಚಿಕೊಳ್ಳುವುದನ್ನು ತಪ್ಪಿಸಿ.
ನಿಮ್ಮ ಆಪ್ತರಿಗೆ ಅನಾರೋಗ್ಯ ಕಂಡುಬಂದರೆ ಅವರಿಗೆ ಸಹಾಯ ಮಾಡುವ ಮನೋಭಾವ ಇರಲಿ. ಮುಂದಿನ ದಿನಗಳ ಪ್ರಮುಖ ಕಾರ್ಯಗಳಿಗಾಗಿ ಸ್ನೇಹಿತರೊಂದಿಗೆ ಚರ್ಚಿಸಿ ಸ್ಪಷ್ಟ ಯೋಜನೆ ರೂಪಿಸುವುದು ಶುಭಕರ.
ಕನ್ಯಾ ರಾಶಿ
ಇಂದು ಗೊಂದಲದಿಂದ ಕೂಡಿದ್ದ ವೃತ್ತಿಯಲ್ಲಿ ಸ್ಥಿರತೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅನಿರೀಕ್ಷಿತ ಬಂಡವಾಳ ನಿಮ್ಮ ಹೊಸ ಯೋಜನೆಗಳಿಗೆ ಸಹಕಾರಿಯಾಗಬಹುದು.
ಕುಟುಂಬದಲ್ಲಿ ಮಗನ ಮದುವೆ ವಿಚಾರದಲ್ಲಿ ಒಮ್ಮತ ಮೂಡಬಹುದು ಹಾಗೂ ದೂರ ಪ್ರಯಾಣದ ಯೋಗವೂ ಇದೆ.
ಬಂಧುಗಳ ವಿಶ್ವಾಸವನ್ನು ಮತ್ತೆ ಗಳಿಸುವ ಅವಕಾಶ ಸಿಗಬಹುದು. ಆದರೆ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ, ವಿವಾದಗಳಿಂದ ದೂರವಿರುವುದು ಒಳಿತು. ನೆರೆಹೊರೆಯವರೊಂದಿಗೆ ಸ್ನೇಹಪೂರ್ಣ ಮತ್ತು ಸೌಜನ್ಯಪೂರ್ಣ ಮಾತುಕತೆ ಇರಲಿ,
ಆದರೆ ಎಲ್ಲರನ್ನೂ ಸಂಪೂರ್ಣವಾಗಿ ನಂಬದೆ, ಅಂತಿಮ ನಿರ್ಧಾರವನ್ನು ನಿಮ್ಮದೇ ಎಂದು ತೆಗೆದುಕೊಳ್ಳುವುದು ಉತ್ತಮ.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಎಲ್ಲವನ್ನೂ ಸುಲಭವಾಗಿ ನಂಬುವ ಮನೋಭಾವವನ್ನು ಸ್ವಲ್ಪ ಬದಲಿಸಿಕೊಳ್ಳುವುದು ಅಗತ್ಯ. ಹಣದ ಉಳಿತಾಯದ ಬಗ್ಗೆ ವಿಶೇಷ ಗಮನ ಹರಿಸುವುದು ಒಳಿತು. ನೀವು ಆರಂಭಿಸಿದ ವೃತ್ತಿ ನಿಮಗೆ ನೆಮ್ಮದಿ ಮತ್ತು ತೃಪ್ತಿ ನೀಡುವ ಸಾಧ್ಯತೆ ಇದೆ.
ಕುಟುಂಬದಲ್ಲಿದ್ದ ಅನಾರೋಗ್ಯ ಸಮಸ್ಯೆ ಸುಧಾರಿಸಬಹುದು. ವಿದ್ಯಾರ್ಥಿಗಳಿಗೆ ಇಚ್ಛಿಸಿದ ವಿಭಾಗದಲ್ಲಿ ಓದುವ ಅವಕಾಶ ದೊರೆಯಬಹುದು ಮತ್ತು ಮಂಗಳ ಕಾರ್ಯಗಳಲ್ಲಿ ಭಾಗವಹಿಸುವ ಯೋಗ ಇದೆ. .
ಆದರೆ ಅನಗತ್ಯ ವಸ್ತುಗಳ ಖರೀದಿಯಿಂದ ಹೆಚ್ಚು ಹಣ ಖರ್ಚಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಮಕ್ಕಳಿಗೆ ಶೀತ ಸಂಬಂಧಿತ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ
ಇಂದು ಹಣಕಾಸಿನ ಸಮಸ್ಯೆಗಳು ನಿಧಾನವಾಗಿ ಸರಿದಾರಿಗೆ ಬರಲಿವೆ. ಬಂಧುಗಳ ಆಗಮನದಿಂದ ಮನಸ್ಸಿಗೆ ಸಂತೋಷ ಉಂಟಾಗಬಹುದು. ಅನ್ಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ವಿಷಯದಲ್ಲಿ ತ್ವರಿತ ನಿರ್ಧಾರಗಳನ್ನು ತಪ್ಪಿಸುವುದು ಒಳಿತು.
ಸ್ನೇಹಿತರ ಸಲಹೆ ಸೂಕ್ತವೆನಿಸಿದರೆ ಸ್ವೀಕರಿಸಬಹುದು. ಅನಿರೀಕ್ಷಿತ ಘಟನೆಗಳು ಸ್ವಲ್ಪ ಆತಂಕ ಉಂಟುಮಾಡಬಹುದು. ಕೆಲವು ವಿಷಯಗಳಲ್ಲಿ ಸಿಹಿ ಮತ್ತು ಕಹಿ ಸುದ್ದಿಗಳ ಮಿಶ್ರ ಅನುಭವ ಸಿಗುವ ಸಾಧ್ಯತೆ ಇದೆ—ಒಂದೆಡೆ ನಿಮ್ಮ ದೊಡ್ಡ ಯೋಜನೆಗೆ ಸರ್ಕಾರದಿಂದ ಅನುಮೋದನೆ ಸಿಗಬಹುದು,
ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಹಣದ ಕೊರತೆ ಸವಾಲಾಗಬಹುದು.
ಧನು ರಾಶಿ
ಇಂದು ವೈವಾಹಿಕ ಜೀವನದಲ್ಲಿ ಸ್ವಲ್ಪ ಅಸಮಾಧಾನ ಉಂಟಾಗುವ ಸಾಧ್ಯತೆ ಇದೆ, ಆದ್ದರಿಂದ ಬಂಧುಗಳೊಂದಿಗೆ ಅನವಶ್ಯಕ ವಾಗ್ವಾದಗಳನ್ನು ತಪ್ಪಿಸುವುದು ಒಳಿತು. ಸೋದರ–ಸೋದರಿಯರ ವಿವಾಹ ಸಂಬಂಧಿತ ಶುಭ ಸುದ್ದಿ ಕೇಳಿಬರುವ ಸಾಧ್ಯತೆ ಇದೆ.
ಅನಿರೀಕ್ಷಿತವಾಗಿ ವಾಸಸ್ಥಾನದಲ್ಲಿ ಬದಲಾವಣೆ ಸಂಭವಿಸಬಹುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಅನುಕೂಲಕರ ವಾತಾವರಣ ದೊರೆಯಬಹುದು. ಖಾಸಗಿ ಕಂಪನಿ ನೌಕರರು ಮೇಲಾಧಿಕಾರಿಗಳೊಂದಿಗೆ ಹೊಂದಿಕೊಳ್ಳುವುದು ಅಗತ್ಯವಾಗಲಿದೆ.
ನಿಮ್ಮದೇ ಆದ ಮನೆ ನಿರ್ಮಾಣ ಅಥವಾ ಖರೀದಿ ವಿಚಾರದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಬಹುದು, ಆದರೆ ಅದಕ್ಕಾಗಿ ಸಾಲ ಮಾಡುವ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ.
ಮಕರ ರಾಶಿ
ಇಂದು ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ ಅನವಶ್ಯಕ ಖರ್ಚುಗಳಿಂದ ಉಳಿತಾಯ ಕಡಿಮೆಯಾಗಬಹುದು.
ತಾಯಿಯ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಅಗತ್ಯ. ಆಸ್ತಿ ಸಂಬಂಧಿತ ವ್ಯವಹಾರಗಳು ತಕ್ಷಣ ಬಗೆಹರಿಯದ ಸಾಧ್ಯತೆ ಇದೆ.
ವಾಹನ ಚಲಾಯಿಸುವಾಗ ವಿಶೇಷ ಎಚ್ಚರಿಕೆ ವಹಿಸುವುದು ಒಳಿತು.
ಕುಂಭ ರಾಶಿ
ಇಂದು ದೊಡ್ಡ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಮಹತ್ವದ ಸಾಧನೆ ಮಾಡಲು ಅನುಕೂಲಕರ ಕಾಲಘಟ್ಟವಾಗಿದೆ. ಕೆಲ ಅಡೆತಡೆಗಳು ಕಂಡುಬಂದರೂ ಟೀಕೆ–ಟಿಪ್ಪಣಿಗಳಿಗೆ ಸಮರ್ಥವಾಗಿ ಪ್ರತಿಕ್ರಿಯಿಸಿ ಮುಂದುವರಿಯುವಿರಿ.
ಆಸ್ತಿ ವಿಚಾರಗಳನ್ನು ಜಾಗರೂಕತೆಯಿಂದ ನಿರ್ವಹಿಸುವುದು ಉತ್ತಮ. ಹಿರಿಯರ ಸಲಹೆಗಳನ್ನು ಗೌರವಿಸಿದರೆ ಲಾಭವಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ದೊರೆಯುವ ಸಾಧ್ಯತೆ ಇದೆ.
ಆತ್ಮಸ್ಥೈರ್ಯಕ್ಕಾಗಿ ಗುರು ರಾಘವೇಂದ್ರರನ್ನು ಪಾಹಿ ಪ್ರಭೋ ಎಂದು ಪ್ರಾರ್ಥಿಸುವುದು ಮನಶಾಂತಿ ನೀಡಬಹುದು.
ಮೀನ ರಾಶಿ
ಇಂದು ಗೆಳೆಯರೊಂದಿಗೆ ಸ್ನೇಹಪೂರ್ಣವಾಗಿ ಇರುವುದು ಉತ್ತಮ, ಆದರೆ ಯಾರಿಗೂ ಸಾಲ ಕೊಡುವುದಾಗಲಿ ಪಡೆಯುವುದಾಗಲಿ ತಪ್ಪಿಸುವುದು ಒಳಿತು. ಮನೆಯ ಲೆಕ್ಕಪತ್ರ ಅಥವಾ ದಾಖಲೆಗಳ ವಿಷಯದಲ್ಲಿ ಸಣ್ಣ ವಿವಾದಗಳು ಉಂಟಾಗುವ ಸಾಧ್ಯತೆ ಇದೆ,
ಆದ್ದರಿಂದ ಎಚ್ಚರಿಕೆ ಅಗತ್ಯ. ಸರ್ಕಾರಿ ಹುದ್ದೆಯಲ್ಲಿರುವವರಿಗೆ ದೂರದ ಸ್ಥಳಗಳಿಗೆ ವರ್ಗಾವಣೆಯ ಸಾಧ್ಯತೆ ಕಾಣಿಸಬಹುದು. ನೀವು ಅಂದುಕೊಂಡ ಕೆಲಸಗಳನ್ನು ಸಮಯಕ್ಕೆ ಮುಗಿಸಲು ಪ್ರಯತ್ನಿಸುವುದು ಉತ್ತಮ.
ಮನೆ ಕಟ್ಟುವ ವಿಚಾರದಲ್ಲಿ ಅನಗತ್ಯ ವಿಳಂಬ ಮಾಡದೆ ಧೈರ್ಯವಾಗಿ ಮುಂದುವರಿಯಬಹುದು. ಅಮೂಲ್ಯ ವಸ್ತುಗಳು ಕಳೆದು ಹೋಗುವ ಸಾಧ್ಯತೆ ಇರುವುದರಿಂದ ವಿಶೇಷ ಜಾಗರೂಕತೆ ವಹಿಸುವುದು ಒಳಿತು.




