IPL 2026 : ಟಿಕೆಟ್ ಖರೀದಿ ಬಗ್ಗೆ ಮಾಹಿತಿ ನೀಡಿದ RCB; ಸ್ಟೇಡಿಯಂ ಎಂಟ್ರಿ, ಪಾರ್ಕಿಂಗ್ ವಿವರವೂ ಇಲ್ಲಿದೆ.

IPL 2026 ರ ಕ್ರಿಕೆಟ್ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತನ್ನ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ಸಿಬಿ ಪಂದ್ಯಗಳ ಟಿಕೆಟ್ ಹೊಂದಿರುವವರು ‘ನಮ್ಮ ಮೆಟ್ರೋ’ದಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
ಉದ್ಘಾಟನಾ ಪಂದ್ಯ ಯಾವಾಗ?
ಮಾರ್ಚ್ 28 ರಂದು ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ 2026ರ ಉದ್ಘಾಟನಾ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ RCB ತಂಡವು ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಸೆಣಸಾಡುವ ಮೂಲಕ ಟೂರ್ನಿಗೆ ಚಾಲನೆ ನೀಡಲಿದೆ. ಚುನಾವಣೆಗಳ ಹಿನ್ನೆಲೆಯಲ್ಲಿ ಮೊದಲ ಹಂತದ ವೇಳಾಪಟ್ಟಿ ಮಾತ್ರ ಬಿಡುಗಡೆಯಾಗಿದ್ದು, ಏಪ್ರಿಲ್ 5 ರಂದು ಸಿಎಸ್ಕೆ ವಿರುದ್ಧ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಟಿಕೆಟ್ ಬುಕಿಂಗ್ ಹೇಗೆ?
ಅಭಿಮಾನಿಗಳು ಆನ್ಲೈನ್ ಮೂಲಕ ಸುಲಭವಾಗಿ ಟಿಕೆಟ್ ಬುಕ್ ಮಾಡಬಹುದು:
- RCB ಅಧಿಕೃತ ವೆಬ್ಸೈಟ್ ಅಥವಾ ಆ್ಯಪ್ಗೆ ಭೇಟಿ ನೀಡಿ
- ಪಂದ್ಯ ಆಯ್ಕೆ ಮಾಡಿ
- ಸ್ಟೇಡಿಯಂ ಮ್ಯಾಪ್ ಮೂಲಕ ಆಸನ ಆಯ್ಕೆ ಮಾಡಿ
- ಆನ್ಲೈನ್ ಪಾವತಿ ಪೂರ್ಣಗೊಳಿಸಿ
- ದೃಢೀಕರಣ ಸಂದೇಶವನ್ನು ಪಡೆಯಿರಿ
ಟಿಕೆಟ್ಗಳು ಕೇವಲ ಅಧಿಕೃತ ವೆಬ್ಸೈಟ್/ಆ್ಯಪ್ನಲ್ಲಿ ಮಾತ್ರ ಲಭ್ಯ. ಮೂರನೇ ವ್ಯಕ್ತಿಗಳಿಂದ ಖರೀದಿಸುವುದರಿಂದ ದೂರವಿರಿ ಎಂದು ಎಚ್ಚರಿಕೆ ನೀಡಲಾಗಿದೆ.
READ THIS : ಹೆಚ್ಚಿತು ‘Love Mocktail 3’ ಶೋ – ಒಟ್ಟಾರೆ ಕಲೆಕ್ಷನ್ ಎಷ್ಟು?
ಆಫ್ಲೈನ್ ಟಿಕೆಟ್ ಸೌಲಭ್ಯ
ಅಧಿಕೃತ ಕೌಂಟರ್ಗಳಲ್ಲಿ ಸಹ ಟಿಕೆಟ್ ಲಭ್ಯವಿದ್ದು, ಖರೀದಿಸುವಾಗ ಆಧಾರ್/ಪ್ಯಾನ್/ಪಾಸ್ಪೋರ್ಟ್ ಮುಂತಾದ ಮಾನ್ಯ ಗುರುತಿನ ಚೀಟಿ ಕಡ್ಡಾಯ.
ಹೆಚ್ಚುವರಿ ಸೌಲಭ್ಯಗಳು
- ಪಾರ್ಕಿಂಗ್ ಸ್ಲಾಟ್ ಮುಂಗಡ ಬುಕ್ಕಿಂಗ್
- ಸ್ಟೇಡಿಯಂಗೆ ಶಟಲ್ ಸರ್ವಿಸ್
- ಆ್ಯಪ್ನಲ್ಲಿ ಗೇಟ್, ಎಂಟ್ರಿ/ಎಕ್ಸಿಟ್ ಮಾಹಿತಿ

ಟಿಕೆಟ್ ದರಗಳು
- ಸಾಮಾನ್ಯ ಆಸನಗಳು: ₹2,300 – ₹2,800
- ಮಧ್ಯಮ ಶ್ರೇಣಿ: ₹3,500 – ₹7,500
- ಪ್ರೀಮಿಯಂ/ಪೆವಿಲಿಯನ್: ₹8,000 – ₹15,000+
- VIP/ಕಾರ್ಪೊರೇಟ್: ₹30,000+
ಇದೀಗ RCB ತಂಡದ ಸ್ಟಾರ್ ಆಟಗಾರ Virat Kohli ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದು, ಮುಖ್ಯ ತರಬೇತುದಾರ ಆಂಡಿ ಫ್ಲವರ್ಮಾರ್ಗದರ್ಶನದಲ್ಲಿ ತಂಡ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.

MUST WATCH : ತುಮಕೂರಿನಲ್ಲಿ RAMZAN ಆಚರಣೆ ವೇಳೆ ಗಮನ ಸೆಳೆದ ಬಿತ್ತಿ ಪತ್ರ




