Love Mocktail 3 ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ.

‘ಲವ್ ಮಾಕ್ಟೇಲ್’ ಸರಣಿಗೆ ಅದರದ್ದೇ ಆದ ಅಭಿಮಾನಿ ಬಳಗ ಇದೆ. ಈ ಚಿತ್ರದ ಮೊದಲ ಭಾಗ ರಿಲೀಸ್ ಆಗಿದ್ದು 2020ರಲ್ಲಿ. ಆ ಬಳಿಕ ಇದಕ್ಕೆ ಪಾರ್ಟ್ 2 ಬಂತು. ಈಗ ಮೂರನೇ ಭಾಗ ತೆರೆಗೆ ಬಂದಿದೆ.
ಈ ಚಿತ್ರವನ್ನು ಜನರು ಬಹುವಾಗಿ ಇಷ್ಟಪಟ್ಟಿದ್ದಾರೆ. ಸಿನಿಮಾನ ಕೊಂಡಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಭಾವನಾತ್ಮಕವಾಗಿ ಸಿನಿಮಾ ಇಷ್ಟ ಆಗುತ್ತಿದೆ. ಹಾಗಾದರೆ, ಈ ಚಿತ್ರ ಮಾಡಿದ ಒಟ್ಟಾರೆ ಕಲೆಕ್ಷನ್ ಎಷ್ಟು ಕೋಟಿ ರೂಪಾಯಿ? ಆ ಬಗ್ಗೆ ಇಲ್ಲಿದೆ ವಿವರ.

ಲವ್ ಮಾಕ್ಟೇಲ್ 3 ಒಟ್ಟಾರೆ ಕಲೆಕ್ಷನ್ ಎಷ್ಟು?
‘ಲವ್ ಮಾಕ್ಟೇಲ್ 3’ ಚಿತ್ರ ಮೊದಲ ದಿನ 1.36 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು sacnilk ವರದಿ ಮಾಡಿದೆ. ಎರಡನೇ ದಿನವಾದ ಶುಕ್ರವಾರ 1.15 ಕೋಟಿ ರೂಪಾಯಿ ಗಳಿಸಿದೆ. ಚಿತ್ರದ ಒಟ್ಟಾರೆ ಗಳಿಕೆ ಎರಡೂವರೆ ಕೋಟಿ ರೂಪಾಯಿ ಆಗಿದೆ. ವಿಶೇಷ ಎಂದರೆ ಚಿತ್ರಕ್ಕೆ ಗುರುವಾರ 397 ಶೋಗಳನ್ನು ನೀಡಲಾಗಿತ್ತು. ಶುಕ್ರವಾರ ಅದನ್ನು 407ಕ್ಕೆ ಏರಿಸಲಾಗಿದೆ. ಇದು ಚಿತ್ರದ ಹೆಚ್ಚುಗಾರಿಕೆ.
READ THIS : 15 ವರ್ಷಗಳ `Namma Metro’ ಇತಿಹಾಸದಲ್ಲಿ ಹೊಸ ದಾಖಲೆ
ಮೂರನೇ ಭಾಗದಲ್ಲಿ ಹಾಸ್ಯ ಹೈಲೈಟ್
ಈ ಸಿನಿಮಾದ ವಿಶೇಷತೆ ಎಂದರೆ, ಹಿಂದಿನ ಭಾಗಗಳಂತೆ ಬ್ರೇಕಪ್ ಮತ್ತು ಸಂಬಂಧಗಳ ಭಾವನಾತ್ಮಕ ಅಂಶಗಳನ್ನು ಮುಂದುವರಿಸಿದರೂ, ಮೂರನೇ ಭಾಗದಲ್ಲಿ ಹೊಸದಾದ ಕಥಾ ತಿರುವುಗಳನ್ನು ನೀಡಲಾಗಿದೆ.
ನಟಿ ಮಿಲನ ನಾಗರಾಜ್ ಅವರು ಮೂರನೇ ಭಾಗದಲ್ಲೂ ಕಾಣಿಸಿಕೊಂಡಿದ್ದು, ಅವರ ಪಾತ್ರ ಹೇಗೆ ಬರುತ್ತದೆ ಎಂಬುದು ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದೆ.

ಒಟ್ಟಿನಲ್ಲಿ, ‘ಲವ್ ಮಾಕ್ಟೇಲ್ 3’ ಸಿನಿಮಾ ಭಾವನಾತ್ಮಕ ಮತ್ತು ಮನರಂಜನಾತ್ಮಕ ಅಂಶಗಳಿಂದ ಪ್ರೇಕ್ಷಕರ ಮನ ಗೆದ್ದು, ಬಾಕ್ಸ್ ಆಫೀಸ್ನಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ.

MUST WATCH : ನಿವೃತ್ತಿಗೆ ಕೆಲವೇ ದಿನಗಳು ಬಾಕಿ ಇರುವಾಗ್ಲೇ ಕಚೇರಿಯಲ್ಲೇ ಅಧಿಕಾರಿ ಸೂ**ಡ್




