ಒಂದೇ ದಿನ 10.73 ಲಕ್ಷ ಜನ ಸಂಚಾರ – 15 ವರ್ಷಗಳ `Namma Metro’ ಇತಿಹಾಸದಲ್ಲಿ ಹೊಸ ದಾಖಲೆ.

ಒಂದೇ ದಿನ 10.73 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣಿಸುವ ಮೂಲಕ 15 ವರ್ಷಗಳ `ನಮ್ಮ ಮೆಟ್ರೋ’ (Namma Metro) ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಮಾ.18ರಂದು ಒಂದೇ ದಿನ 10.73 ಲಕ್ಷ ಜನರು ಮೆಟ್ರೋದಲ್ಲಿ ಸಂಚರಿಸುವ ಮೂಲಕ 15 ವರ್ಷಗಳ ‘ನಮ್ಮ ಮೆಟ್ರೋ’ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.
10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚಾರ
ನಾಲ್ಕು ದಿನಗಳ ನಿರಂತರ ರಜೆ ಹಿನ್ನೆಲೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೋ ಸೇವೆಯನ್ನು ಬಳಸಿಕೊಂಡಿದ್ದಾರೆ. ಇದರ ಫಲವಾಗಿ ದಿನನಿತ್ಯದ ಸರಾಸರಿ ಸಂಖ್ಯೆಯನ್ನು ಮೀರಿಸಿ 10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದಾರೆ.
READ THIS : ವಾಹನ ಸವಾರರಿಗೆ ಬಿಗ್ ಶಾಕ್ – Petrol ರೇಟ್ ಹೆಚ್ಚಳ!

ಸ್ಮಾರ್ಟ್ಕಾರ್ಡ್ ಬಳಸಿ Namma Metro ದಲ್ಲಿ ಪ್ರಯಾಣ
ಇದಲ್ಲದೆ, ಈ ದಾಖಲೆ ದಿನದಲ್ಲಿ 4 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸ್ಮಾರ್ಟ್ಕಾರ್ಡ್ ಬಳಸಿ ಪ್ರಯಾಣಿಸಿರುವುದು ಗಮನಾರ್ಹವಾಗಿದೆ. ಇದು ಡಿಜಿಟಲ್ ಪಾವತಿ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಸಾಧನೆ ‘ನಮ್ಮ ಮೆಟ್ರೋ’ಗೆ ಮತ್ತೊಂದು ಮೈಲುಗಲ್ಲಾಗಿದ್ದು, ನಗರ ಸಾರಿಗೆ ವ್ಯವಸ್ಥೆಯಲ್ಲಿ ಮೆಟ್ರೋದ ಮಹತ್ವವನ್ನು ಮತ್ತೆ ಸಾಬೀತುಪಡಿಸಿದೆ.

MUST WATCH : ಗೋಕಟ್ಟೆ ಜಾಗದಲ್ಲಿ ನಿವೇಶನ ಹಂಚಿಕೆ- ಪ್ರಜಾಶಕ್ತಿ ವರದಿ ಬೆನ್ನಲ್ಲೇ ಗ್ರಾಮ ಸಭೆ ರದ್ದು




