Petrol Rate Hike : ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಈಗ ಭಾರತದ ವಾಹನ ಸವಾರರ ಜೇಬಿಗೆ ತಟ್ಟಲು ಶುರುವಾಗಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಜಾಗತಿಕ ತೈಲದ ಬೆಲೆ ಏರಿಕೆಯಾಗಿದ್ದು, ಇದರ ಪರಿಣಾಮವಾಗಿ ಭಾರತದಲ್ಲಿನ ಖಾಸಗಿ ತೈಲ ಕಂಪನಿಯಾದ ಶೆಲ್ ತನ್ನ Petrol ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್ಗೆ 2.50 ರೂ. ಹೆಚ್ಚಿಸಿದೆ.
ಶೆಲ್ ಬಂಕ್ಗಳಲ್ಲಿ ಇಂಧನ ದರ ಈ ಕೆಳಗಿನಂತಿರಲಿದೆ
- ಪೆಟ್ರೋಲ್: ಹಳೆಯ ದರ ಲೀಟರ್ಗೆ 106 ರೂ., ಹೊಸ ದರ 108.50 ರೂ.
- ಡೀಸೆಲ್: ಹಳೆಯ ದರ ಲೀಟರ್ಗೆ 91 ರೂ., ಹೊಸ ದರ 93.50 ರೂ.
READ THIS : ಯುಗಾದಿ ಹಬ್ಬದಂದು ಅಂದರ್ ಬಾಹರ್ ಆಡ್ತಿದ್ದವರಿಗೆ ಖಾಕಿ ಶಾಕ್!

ಇತರೆ ಕಂಪನಿಗಳಲ್ಲೂ ಬೆಲೆ ಏರಿಕೆ ಭೀತಿ!
ಸದ್ಯಕ್ಕೆ ಶೆಲ್ ಕಂಪನಿ ಮಾತ್ರ ದರ ಏರಿಕೆ ಮಾಡಿದೆ. ಖಾಸಗಿ ಕಂಪನಿಯ ಈ ನಡೆಯನ್ನು ಅನುಸರಿಸಿ ಮುಂದಿನ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಹೆಚ್ಪಿ (HP), ಬಿಪಿ (BP) ಮತ್ತು ಇಂಡಿಯನ್ ಆಯಿಲ್ ಕೂಡ ಇಂಧನ ದರವನ್ನು ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ. ಇದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.

MUST WATCH : ತುಮಕೂರಿನಲ್ಲಿ LOCKUP DEATH ಆರೋಪ CASE – ಪ್ರತ್ಯಕ್ಷದರ್ಶಿಯ ಗಂಭೀರ ಆರೋಪ




