ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ Gubbi ಪೊಲೀಸರು..!

ಯುಗಾದಿ ಹಬ್ಬದ ಹಿನ್ನಲೆ ಅಕ್ರಮ ಜೂಜಾಟಕ್ಕೆ ಕಡಿವಾಣ ಹಾಕಲು ಗುಬ್ಬಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಅಂದರ್ ಬಾಹರ್ ಆಡ್ತಾ ಇರೋರಿಗೆ ಪೊಲೀಸರು ಬಿಗ್ ಶಾಕ್ ಕೊಟ್ಟಿದ್ದಾರೆ.
ಇಸ್ಪೀಟ್ ಆಟ ಆಡದಂತೆ ತುಮಕೂರು ಎಸ್ಪಿ ಅಶೋಕ್ ಮುಂಚಿತವಾಗಿ ಎಚ್ಚರಿಕೆ ನೀಡಿದ್ದರೂ ಸಹ, ನಿಯಮವನ್ನ ಉಲ್ಲಂಘಿಸಿ ತೆರೆಮರೆಯಲ್ಲಿ ಅಂದರ್ ಬಾಹರ್ ಆಡ್ತಿದ್ದ ಜೂಜು ಅಡ್ಡೆ ಮೇಲೆ ಏಕಾಏಕಿ ಗುಬ್ಬಿ ಪೊಲೀಸರು ದಾಳಿ ನಡೆಸಿದ್ದು. ಜೂಜುಕೋರರನ್ನು ಹಾಗೂ ಸಾವಿರಾರು ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ದೇ ಒಂದೇ ದಿನದಲ್ಲಿ ಏಳು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

7 ಮಂದಿ ಅರೆಸ್ಟ್!
Gubbi ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಮಡೇನಹಳ್ಳಿ ಹಾಗೂ ಜಿ. ಹೊಸಹಳ್ಳಿ ಗ್ರಾಮಗಳಲ್ಲಿ ಜೂಜು ಆಡ್ತಿದ್ದ ಅಡ್ಡೆ ಮೇಲೆ ಖಚಿತ ಮಾಹಿತಿ ಮೆರೆಗೆ ದಾಳಿ ಮಾಡಿದ್ದು, ಏಳು ಮಂದಿಯನ್ನು ಬಂಧಿಸಲಾಗಿದ್ದು, ಅವರಿಂದ ಒಟ್ಟು 22 ಸಾವಿರ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದೇ ವೇಳೆ ಸಿ.ಎಸ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಣೆಕುಪ್ಪೆ ಗ್ರಾಮದಲ್ಲಿ ಐದು ಮಂದಿಯನ್ನು ವಶಕ್ಕೆ ಪಡೆದು 31,300 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಜೀಗನಹಳ್ಳಿ ಗ್ರಾಮದಲ್ಲಿ ಎಂಟು ಮಂದಿಯನ್ನು ಬಂಧಿಸಿದ್ದು, 13 ಸಾವಿರ ರೂ.ಗಳನ್ನು ವಶಪಡಿಸಿಕೊಂಡು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
READ THIS : Hubballi|ರೀಲ್ಸ್ ಹುಚ್ಚಾಟಕ್ಕೆ ಬಿಜೆಪಿ ನಾಯಕನ ಪುತ್ರ ಬಲಿ!
ಮೂರು ಪ್ರಕರಣ ದಾಖಲು
ಇನ್ನು ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಕ್ರಮ ಜರುಗಿಸಿದ್ದು, ಕಚ್ಚೇನಹಳ್ಳಿ ಗ್ರಾಮದಲ್ಲಿ ಮೂವರನ್ನು ಬಂಧಿಸಿ, ಅವರಿಂದ 2,100 ರೂಪಾಯಿ ಹಾಗೂ ನಿಂಗಯ್ಯನ ಪಾಳ್ಯದಲ್ಲಿ ನಾಲ್ವರ ಬಳಿ 2,500 ರೂ. ಹಾಗೂ ಕೊಡಿಯಾಲ ಗ್ರಾಮದಲ್ಲಿ ಮೂವರಿಂದ 2,500 ರೂ.ಗಳನ್ನು ವಶಪಡಿಸಿಕೊಂಡು ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಇಸ್ಪೀಟ್ ಆಡ್ತಿದ್ದವರು ಕೊನೆಗೂ ಲಾಕ್
ಒಟ್ನಲ್ಲಿ ಎಸ್ಪಿ ಆದೇಶಕ್ಕೂ ಕಿಮ್ಮತ್ತು ಕೊಡದೇ ಇಸ್ಪೀಟ್ ಆಡ್ತಿದ್ದವರು ಕೊನೆಗೂ ಲಾಕ್ ಆಗಿದ್ದು, ಜೂಜುಕೋರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಇನ್ನು ಗುಬ್ಬಿ ತಾಲ್ಲೂಕಿನಲ್ಲಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ದಾಳಿಗಳಲ್ಲಿ ಏಳು ಪ್ರಕರಣಗಳು ದಾಖಲಾಗಿದ್ದು, ಅಕ್ರಮ ಜೂಜಾಟಕ್ಕೆ ತಡೆ ನೀಡಲು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
MUST WATCH : ಹೆಲ್ಮೆಟ್ ಧರಿಸದೇ ತ್ರಿಬಲ್ ರೈಡಿಂಗ್ ಪೊಲೀಸರು ಏನ್ಮಾಡಿದ್ರೂ ಗೊತ್ತಾ?




