Hubballi : ರೀಲ್ಸ್ ಶೂಟಿಂಗ್ ವೇಳೆ ಭೀಕರ ಅಪಘಾತ – ಬಿಜೆಪಿ ಮುಖಂಡನ ಪುತ್ರ ದಾರುಣ ಸಾವು.

ಸಾಮಾಜಿಕ ಜಾಲತಾಣಗಳಲ್ಲಿ ‘ರೀಲ್ಸ್’ ಮಾಡಲು ಹೋಗಿ 15 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ಹುಬ್ಬಳ್ಳಿಯ ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ 15 ವರ್ಷದ ಪುತ್ರ ನಮೀಶ್ ಸಂಗಳದ ರೀಲ್ಸ್ ಚಿತ್ರೀಕರಣ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
‘ರೀಲ್ಸ್’ಗಾಗಿ ಆಡಿ ಕಾರು-ಬೈಕ್ ಸ್ಟಂಟ್
ಮೈಸೂರಿನಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನಮೀಶ್, ಯುಗಾದಿ ರಜೆಗಾಗಿ Hubballi ಗೆ ಬಂದಿದ್ದನು. ಗುರುವಾರ ಸಂಜೆ ತನ್ನ ಸ್ನೇಹಿತರೊಂದಿಗೆ ಸೇರಿ ಶೇಜವಾಡಕರ್ ಪ್ಲಾಟ್ ಪ್ರದೇಶದಲ್ಲಿ ರೀಲ್ಸ್ ಚಿತ್ರೀಕರಣಕ್ಕೆ ತೆರಳಿದ್ದನು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಉದ್ದೇಶದಿಂದ ‘ಸ್ಟಂಟ್ ಮತ್ತು ಕ್ರಾಶ್’ ರೀತಿಯ ಅಪಾಯಕಾರಿ ದೃಶ್ಯವನ್ನು ಚಿತ್ರೀಕರಿಸಲು ಯೋಜನೆ ರೂಪಿಸಿದ್ದರು.
READ THIS : ಮತ್ತೆ ಏರಿದ ಚಿನ್ನದ ಬೆಲೆ – ಇಂದಿನ ರೇಟ್ ಚೆಕ್ ಮಾಡಿ

ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವು
ಚಿತ್ರೀಕರಣದ ವೇಳೆ ನಮೀಶ್ ಬೈಕ್ ಚಲಾಯಿಸುತ್ತಿದ್ದಾಗ, ಎದುರಿನಿಂದ ಅತಿ ವೇಗವಾಗಿ ಬಂದ ಆಡಿ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಭೀಕರ ಡಿಕ್ಕಿಯ ಪರಿಣಾಮ ನಮೀಶ್ ಸುಮಾರು 30 ಅಡಿ ದೂರಕ್ಕೆ ಎಸೆಯಲ್ಪಟ್ಟಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅಪ್ರಾಪ್ತರಿಂದಲೇ ವಾಹನ ಚಾಲನೆ
ಅಪಘಾತಕ್ಕೆ ಕಾರಣವಾದ ಕಾರನ್ನು ಚಲಾಯಿಸುತ್ತಿದ್ದವನು ಕೂಡ ಕೇವಲ 15 ವರ್ಷದ ಅಪ್ರಾಪ್ತ ಬಾಲಕನೇ ಆಗಿದ್ದನು ಎನ್ನಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣವನ್ನು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

MUST WATCH : KING KOHLI ಹೊಸ ಗೆಟಪ್ ಹೇಗಿದೆ ನೋಡಿ- ನೀವು ಫಿದಾ ಆಗ್ತಿರಾ..?




