ನಿನ್ನೆ ಯುಗಾದಿ ದಿನ ಭಾರೀ ಇಳಿಕೆ ಕಂಡಿದ್ದ Gold Rate ಇಂದು ಕೊಂಚ ಏರಿಕೆ ಕಂಡಿದೆ.

ಒಂದು ಕಡೆ ಇರಾನ್-ಇಸ್ರೇಲ್ ಯುದ್ದ ತಾರಕ್ಕೇರುತ್ತಿದೆ. ಮತ್ತೊಂದು ಕಡೆ ಸಾಲು ಸಾಲು ಹಬ್ಬ ಹರಿದಿನಗಳು, ಶುಭಸಮಾರಂಭಗಳು ಬರುತ್ತಿವೆ. ಹೀಗಿರುವಾಗಲೇ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಾಣುತ್ತಿರುವುದು ಆಭರಣ ಖರೀದಿಸುವ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಯುಗಾದಿ ಹಬ್ಬದಂದು ಇಳಿಕೆ ಕಂಡಿದ್ದ ಚಿನ್ನ
ನೆನ್ನೆ ಯುಗಾದಿಹಬ್ಬದ ದಿನದಂದು ಪ್ರತಿ ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 714 ರುಪಾಯಿ ಇಳಿಕೆ ಕಂಡಿತ್ತು. ಅದೇ ರೀತಿ ಆಭರಣ ಚಿನ್ನವಾದ 22 ಕ್ಯಾರಟ್ ಪ್ರತಿ ಗ್ರಾಮ್ ಚಿನ್ನದ ಬೆಲೆಯಲ್ಲಿ 655 ರುಪಾಯಿ ಇಳಿಕೆ ಕಂಡಿದ್ದು ಚಿನ್ನ ಖರೀದಿಸುವವರ ಮುಖದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತ್ತು.
ಇಂದು ಚಿನ್ನದ ದರದಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ Gold Rate ನಲ್ಲಿ ಏರಿಕೆ ಕಂಡು ಬಂದಿದೆ.
READ THIS : ನೀರಾನೆ ಅಟ್ಯಾಕ್ಗೆ ಬೆಂಗಳೂರಿನ ಪಶುವೈದ್ಯೆ ದುರಂತ ಅಂತ್ಯ

ಇಂದಿನ ಚಿನ್ನದ ದರ (ಮಾರ್ಚ್20)
- 22 ಕ್ಯಾರಟ್ (1 ಗ್ರಾಂ): ₹13,835 (+₹60)
- 24 ಕ್ಯಾರಟ್ (1 ಗ್ರಾಂ): ₹15,093 (+₹65)
22 ಕ್ಯಾರಟ್ Gold Rate
- 8 ಗ್ರಾಂ: ₹1,10,680
- 10 ಗ್ರಾಂ: ₹1,38,350
- 100 ಗ್ರಾಂ: ₹13,83,500
24 ಕ್ಯಾರಟ್ ಚಿನ್ನದ ದರ
- 8 ಗ್ರಾಂ: ₹1,20,744
- 10 ಗ್ರಾಂ: ₹1,50,930
- 100 ಗ್ರಾಂ: ₹15,09,300́

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,835 ರೂ. | 15,093 ರೂ. |
| ಮುಂಬೈ | 13,835 ರೂ. | 15,093 ರೂ. |
| ಹೈದರಾಬಾದ್ | 13,835 ರೂ. | 15,093 ರೂ. |
| ಕೋಲ್ಕತ್ತಾ | 13,835 ರೂ. | 15,093 ರೂ. |
ಬೆಳ್ಳಿಯ ದರದಲ್ಲಿಇಳಿಕೆ
ಇನ್ನೊಂದೆಡೆ ಬೆಳ್ಳಿಯ ದರದಲ್ಲಿ ಇಳಿಕೆ ಕಂಡು ಬಂದಿದೆ.
- 1 ಗ್ರಾಂ ಬೆಳ್ಳಿ: ₹255
- 10 ಗ್ರಾಂ: ₹2,550
- 1 ಕೆಜಿ: ₹2,55,000
MUST WATCH : ಯುಗಾದಿ ಹಬ್ಬದ ದಿನವೇ ಡೆಡ್ಲಿ ಆಕ್ಸಿಡೆಂ* ಬೈಕ್ ಸವಾರ ಸ್ಥಳದಲ್ಲೇ ಸಾ*




