Shivamogga ತ್ಯಾವರೆಕೊಪ್ಪ ಸಫಾರಿಯಲ್ಲಿ ದಾರುಣ ಘಟನೆ – ಯುವ ಪಶುವೈದ್ಯೆ ನೀರಾನೆಯ ದಾಳಿಗೆ ಬಲಿ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಬೆಂಗಳೂರು ಮೂಲದ 27 ವರ್ಷದ ಯುವ ಪಶುವೈದ್ಯೆ ಸಮೀಕ್ಷಾ ರೆಡ್ಡಿ, ನೀರಾನೆಯ ಹಠಾತ್ ದಾಳಿಗೆ ಬಲಿಯಾಗಿದ್ದಾರೆ.
ಘಟನೆ ವಿವರ
ನೆನ್ನೆ ರಾತ್ರಿ 11:30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಸಫಾರಿಯಲ್ಲಿದ್ದ ಗರ್ಭಿಣಿ ನೀರಾನೆಯ ಆರೋಗ್ಯ ತಪಾಸಣೆಗಾಗಿ ಸಮೀಕ್ಷಾ ರೆಡ್ಡಿ ಮುಂದಾಗಿದ್ದರು. ಥರ್ಮಲ್ ಸ್ಕ್ಯಾನಿಂಗ್ ಮೂಲಕ ತಾಪಮಾನ ಪರೀಕ್ಷೆ ಪೂರ್ಣಗೊಳಿಸಿ ಹಿಂದಕ್ಕೆ ಸರಿಯುವಷ್ಟರಲ್ಲಿ, ನೀರಾನೆಯು ಅಕಸ್ಮಿಕವಾಗಿ ಅವರ ಮೇಲೆ ದಾಳಿ ನಡೆಸಿದೆ.

READ THIS : ಯುಗಾದಿ ಹಬ್ಬದ ದಿನವೇ ಭೀಕರ Accident – ಬೈಕ್ ಸವಾರ ಸಾವು
ಚಿಕಿತ್ಸೆ ಫಲಕಾರಿಯಾಗದೆ ಸಾವು
ನೀರಾನೆಯ ದಾಳಿಯಿಂದ ಸಮೀಕ್ಷಾ ಅವರಿಗೆ ದೇಹದ ಒಳಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವ ಉಂಟಾಯಿತು. ತಕ್ಷಣವೇ ಅವರನ್ನು Shivamogga ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ.
ಯುವ ವೈದ್ಯೆಯ ಹಿನ್ನೆಲೆ
ಮೃತ ಸಮೀಕ್ಷಾ ರೆಡ್ಡಿ ಬೆಂಗಳೂರಿನ ಬನ್ನೇರುಘಟ್ಟ ಸಮೀಪದ ಸಕ್ಕಲವಾರ ನಿವಾಸಿ. ಉದ್ಯಮಿ ಧೃವಕುಮಾರ್ ಮತ್ತು ಶೈಲಜಾ ದಂಪತಿಯ ಏಕೈಕ ಪುತ್ರಿಯಾಗಿದ್ದ ಅವರು, ಪಶುವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸು ಕಂಡಿದ್ದರು. ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದ ಅವರು, ಕಳೆದ ಫೆಬ್ರವರಿಯಲ್ಲಷ್ಟೇ ತರಬೇತಿಗೆ ಆಯ್ಕೆಯಾಗಿದ್ದು, ಕೇವಲ ಒಂದೂವರೆ ತಿಂಗಳಿನಿಂದ ಶಿವಮೊಗ್ಗದಲ್ಲಿ ತರಬೇತಿ ಪಡೆಯುತ್ತಿದ್ದರು.

ನೀರಾನೆ ಅಟ್ಯಾಕ್ಗೆ ಪಶುವೈದ್ಯೆ ಬಲಿ
ಸಮೀಕ್ಷಾ ಅವರ ಸಾವಿಗೆ ಕಾರಣವಾದ ನೀರಾನೆಯನ್ನು ಸುಮಾರು ನಾಲ್ಕು ವರ್ಷಗಳ ಹಿಂದೆ ಮೈಸೂರು ಮೃಗಾಲಯದಿಂದ ಶಿವಮೊಗ್ಗ ಸಫಾರಿಗೆ ತರಲಾಗಿತ್ತು. ಗರ್ಭಿಣಿಯಾಗಿದ್ದ ಆ ಪ್ರಾಣಿಯ ಆರೈಕೆಗಾಗಿ ತೆರಳಿದ್ದ ವೈದ್ಯೆಯೇ ಇಂದು ಪ್ರಾಣ ಕಳೆದುಕೊಂಡಿರುವುದು ದುರಂತದ ಸಂಗತಿ.
MUST WATCH : ರೈಲ್ವೆ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯ ರೈಲ್ವೆ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶ




