ಯುಗಾದಿ ಹಬ್ಬದ ದಿನವೇ ಡೆಡ್ಲಿ Accident – ಬೈಕ್ ಸವಾರ ಸ್ಥಳದಲ್ಲೇ ಸಾವು.

ಯುಗಾದಿ ಹಬ್ಬದ ದಿನವೇ ಭೀಕರ ರಸ್ತೆ Accident ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗುಬ್ಬಿ ತಾಲ್ಲೂಕಿನಲ್ಲಿ ನಡೆದಿದೆ. ಮೃತರನ್ನು ಕಡಬ ಹೋಬಳಿಯ ಬ್ಯಾಡಗೆರೆ ಗ್ರಾಮದ ನಿವಾಸಿ ಅಂದಾನಿಗೌಡ ಎಂದು ಗುರುತಿಸಲಾಗಿದೆ.

ಬೈಕ್ ಸವಾರ ಸ್ಥಳದಲ್ಲೇ ದಾರುಣ ಸಾವು
ಗುಬ್ಬಿ–ಮೈಸೂರು ಸಂಪರ್ಕ ರಸ್ತೆಯ ಕಡಬ ಗ್ರಾಮದ ಸಮೀಪ ಈ ದುರ್ಘಟನೆ ಸಂಭವಿಸಿದ್ದು, ಕೆಲಸ ಮುಗಿಸಿ ತನ್ನ ಊರಿನ ಕಡೆಗೆ ಟಿವಿಎಸ್ ಎಕ್ಸ್ಎಲ್ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ, ಕಲ್ಲೂರು ಕ್ರಾಸ್ ದಿಕ್ಕಿನಿಂದ ಎದುರಿಗೆ ಬಂದ ಮತ್ತೊಬ್ಬ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಅಪಘಾತವಾಗ್ತಿದ್ದಂತೆ ಮತ್ತೊಬ್ಬ ಬೈಕ್ ಸವಾರ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಮೃತದೇಹವನ್ನ ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
READ THIS : ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ನೇಣು ಬಿಗಿದುಕೊಂಡು Suicide

Accident ಗೆ ಕಾರಣವಾದ ವ್ಯಕ್ತಿಯ ಗುರುತು ಪತ್ತೆ
ಸದ್ಯ ವಿಷಯ ತಿಳಿದು ಗುಬ್ಬಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರಿಸಿ ಅಪಘಾತಕ್ಕೆ ಕಾರಣವಾದ ವ್ಯಕ್ತಿಯ ಗುರುತು ಪತ್ತೆಹಚ್ಚಿದ್ದಾರೆ. ಅಪಘಾತ ಮಾಡಿದವರನ್ನ ಮೆಳೇಕಲ್ಲಹಳ್ಳಿ ಗ್ರಾಮದ ಸಂಜಯ್ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
MUST WATCH : ಊರಿಗೆ ರಸ್ತೆ ಬಿಡದೆ ಜಮೀನು ಮಾಲೀಕ ಪಟ್ಟು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಶೀಲ್ದಾರ್




