Gubbi ಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ.

ನೇಣು ಬಿಗಿದ ಸ್ಥಿತಿಯಲ್ಲಿ ಸುಮಾರು 60 ವರ್ಷ ಆಸುಪಾಸಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಹೌದು.. Gubbi ತಾಲೂಕಿನ ನಿಟ್ಟೂರು ಗ್ರಾಮದ ಹೊರವಲಯದ ಗದ್ದೆ ಬಯಲಿನ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು ಒಂದು ವಾರದ ಹಿಂದೆಯೇ ವ್ಯಕ್ತಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದನ್ನು ಓದಿ : ತೋಟದಲ್ಲಿ ದಲಿತ ಮಹಿಳೆಯ ಶವ ಪತ್ತೆ! ಕೊಲೆಯೋ..? ಸಹಜ ಸಾವೋ?

ಪೊಲೀಸರು ಭೇಟಿ, ಪರಿಶೀಲನೆ
ಕೃಷಿ ಚಟುವಟಿಕೆಗೆ ಗದ್ದೆ ಬಯಲಿನ ಬಳಿ ಹೋದ ಸ್ಥಳೀಯರೊಬ್ಬರು ಹೊಂಗೆ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿದ ವ್ಯಕ್ತಿಯ ಶವ ಕಂಡು ಗುಬ್ಬಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನು ನೋಡಿ : ಡಿಸಿಎಂ-ಕೆಪಿಸಿಸಿ ರೇಸ್ ನಲ್ಲಿ ಖಂಡ್ರೆ ಹೆಸರು ವರಿಷ್ಟರ ನಿರ್ಧಾರಕ್ಕೆ ಬದ್ದ ಎಂದ ಈಶ್ವರ ಖಂಡ್ರೆ




