
GUBBI ಯಲ್ಲಿ ಮಾದಕವಸ್ತು ಮಾರಾಟಕ್ಕೆ ಪೊಲೀಸ್ ಬ್ರೇಕ್!
ಅತ್ಯಂತ ವ್ಯಸನಕಾರಿ ಮತ್ತು ಅಪಾಯಕಾರಿ ಉತ್ತೇಜಕಗಳಲ್ಲಿ ಒಂದಾದ ಎಮ್.ಡಿ.ಎಂ.ಎ ನಂತಹ 50 ಗ್ರಾಂ ಪೌಡರ್ ಸೇರಿದಂತೆ 2 ಕೆ.ಜಿ ಗಾಂಜಾವನ್ನು ಅಕ್ರಮವಾಗಿ ರಸ್ತೆಯಲ್ಲಿ ಮಾರಾಟ ಮಾಡಲು ನಿಂತಿದ್ದ 4 ಮಂದಿ ಗಾಂಜಾ ಗಿರಾಕಿಗಳನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟ ಗುಬ್ನೆಬಿ ತಾಲೂಕಿನ ಸಿ.ಎಸ್ ಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಗುಬ್ಬಿಯಲ್ಲಿ ಮಾದಕವಸ್ತು ಮಾರಾಟಕ್ಕೆ ಪೊಲೀಸ್ ಬ್ರೇಕ್
ಹೌದು.. ಗುಬ್ಬಿ ತಾಲೂಕಿನ ಸಿ.ಎಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೆ.ಜಿ ಟೆಂಪಲ್ ಕಡೆಯಿಂದ ನಾಗವಲ್ಲಿ ಕಡೆಗೆ ಸಂಪರ್ಕ ಕಲ್ಪಿಸುವ ನಾಗಸಂದ್ರ ಗೇಟ್ ಬಳಿ ಆಟೋ ಮತ್ತು ಕಾರನ್ನು ನಿಲ್ಲಿಸಿಕೊಂಡು 4 ಮಂದಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ನಿಂತಿದ್ರು. ಖಚಿತ ಮಾಹಿತಿ ಮೇರೆಗೆ ಕಾರ್ಯ ಪ್ರವೃತ್ತರಾದ ಸಿ.ಎಸ್ ಪುರ ಪೊಲೀಸರು ಮಾಲು ಸಮೇತ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನು ಆರೋಪಿಗಳು 2 ಕೆಜಿ ಗಾಂಜಾ ಹಾಗೂ 50 ಗ್ರಾಂ ಎಮ್.ಡಿ.ಎಂ.ಎ ಯನ್ನು ಮಾರಾಟ ಮಾಡಲು ಬಂದಿದ್ದರೆಂದು ತಿಳಿದುಬಂದಿದೆ.
READ THIS : ಪೊಲೀಸರ ಭರ್ಜರಿ ಕಾರ್ಯಾಚರಣೆ – 60 ಕೆಜಿ ಗಾಂಜಾ ಗಿಡಗಳು ಜಪ್ತಿ!

ಅಪಾಯಕಾರಿ ಪೌಡರ್ ಬಳಕೆಗೆ ಮುಂದಾಗಿರುವ ಬಗ್ಗೆ ದೂರು
ಇತ್ತೀಚೆಗೆ ಗುಬ್ಬಿ ತಾಲೂಕಿನ ವಿವಿಧ ಕಡೆಗಳಲ್ಲಿ ಗಾಂಜಾ ಗಿಡ ಕೃಷಿ ಮಾಡುವುದು ಸೇರಿದಂತೆ ಎಂ.ಡಿ.ಎಂ.ಎ ಗಳಂತಹ ಅತ್ಯಂತ ವ್ಯಸನಕಾರಿ ಮತ್ತು ಅಪಾಯಕಾರಿ ಪೌಡರ್ ಬಳಕೆಗೆ ಮುಂದಾಗಿರುವ ಬಗ್ಗೆ ದೂರುಗಳು ದಾಖಲಾಗುತ್ತಿದ್ದು ಗಾಂಜಾ ಪೆಡ್ಲರ್ಗಳನ್ನ ಎಡೆಮುರಿ ಕಟ್ಟುವ ಜೊತೆಗೆ ಯುವಕರು ದುಶ್ಚಟಗಳಿಗೆ ಬಲಿಯಾಗದಂತೆ ಪೊಲೀಸ್ ಇಲಾಖೆ ಜಾಗೃತಿ ಮೂಡಿಸಬೇಕೆಂದು ಸಾರ್ಜನಿಕರು ಒತ್ತಾಯಿಸಿದ್ದಾರೆ.
GUBBI – ಪ್ರಕರಣ ದಾಖಲು
ಇನ್ನು ಘಟನೆ ಸಂಬಂಧ ಸಿ.ಎಸ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

MUST WATCH : SIR ಫಾರಂ 7 ದುರ್ಬಳಕೆ ಆರೋಪ – ಬಿಜೆಪಿ ವಿರುದ್ಧ ತನಿಖೆಗೆ ಸಿಎಂ ಪಟ್ಟು




