WhatsApp ನಲ್ಲಿ ಹೊಸ ಸೈಬರ್ ವಂಚನೆ: ಒಂದು ಮೆಸೇಜ್ ಕ್ಲಿಕ್ ಮಾಡಿದರೆ ಬ್ಯಾಂಕ್ ಖಾತೆ ಖಾಲಿ!

ಸೈಬರ್ ವಂಚಕರು ಜನರನ್ನು ಮೋಸ ಮಾಡಲು ಪ್ರತಿದಿನ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈ ಹಿಂದೆ ಫೋನ್ ಕರೆ ಮಾಡಿ ಅಥವಾ ಒಟಿಪಿ (OTP) ಕೇಳಿ ಹಣ ದೋಚುತ್ತಿದ್ದ ವಂಚಕರು, ಇದೀಗ ಜನಪ್ರಿಯ ಮೆಸೇಜಿಂಗ್ ಆ್ಯಪ್ WhatsApp ಮೂಲಕ ಹೊಸ ರೀತಿಯ ವಂಚನೆ ನಡೆಸುತ್ತಿದ್ದಾರೆ. ಕೇವಲ ಒಂದು ಮೆಸೇಜ್ ನಿಮ್ಮ ಬ್ಯಾಂಕ್ ಖಾತೆಯನ್ನು ಕ್ಷಣಾರ್ಧದಲ್ಲಿ ಖಾಲಿ ಮಾಡಬಹುದೆಂಬ ಆತಂಕಕಾರಿ ಮಾಹಿತಿ ಹೊರಬಂದಿದೆ.
ವಾಟ್ಸಾಪ್ನಲ್ಲಿ ಬರುವ ನಕಲಿ ಮೆಸೇಜ್ ಹೇಗಿರುತ್ತೆ?
ಸೈಬರ್ ಖದೀಮರು ಸಾಮಾನ್ಯವಾಗಿ ಮದುವೆ ಆಹ್ವಾನ ಪತ್ರಿಕೆ (Wedding Card) ಅಥವಾ ಹಬ್ಬದ ಶುಭಾಶಯಗಳ ಹೆಸರಿನಲ್ಲಿ ವಾಟ್ಸಾಪ್ನಲ್ಲಿ ಮೆಸೇಜ್ ಕಳುಹಿಸುತ್ತಾರೆ.
ಬಳಕೆದಾರರು ಅದನ್ನು ನಿಜವೆಂದು ನಂಬಿ ಸಂದೇಶವನ್ನು ತೆರೆಯುತ್ತಾರೆ. ನಂತರ ಅದರಲ್ಲಿರುವ ಫೋಟೋ ಅಥವಾ ಫೈಲ್ ಅನ್ನು ಡೌನ್ಲೋಡ್ ಮಾಡಿದ ತಕ್ಷಣ, ಅದರಲ್ಲಿ ಅಡಗಿರುವ ಎಪಿಕೆ (APK) ಫೈಲ್ ನಿಮ್ಮ ಮೊಬೈಲ್ನಲ್ಲಿ ಇನ್ಸ್ಟಾಲ್ ಆಗುತ್ತದೆ.
ಈ ಹಾನಿಕಾರಕ ಆ್ಯಪ್ ಒಮ್ಮೆ ಇನ್ಸ್ಟಾಲ್ ಆದ ಬಳಿಕ, ವಂಚಕರು ನಿಮ್ಮ ಮೊಬೈಲ್ನ ಮೇಲೆ ಸಂಪೂರ್ಣ ನಿಯಂತ್ರಣ ಪಡೆಯಬಹುದು. ಬಳಿಕ ಯಾವುದೇ ಒಟಿಪಿ ಇಲ್ಲದೇ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿ ದೋಚುವ ಸಾಧ್ಯತೆ ಇದೆ.

READ THIS : ಹಾಸ್ಟೆಲ್ನಲ್ಲಿ 9ನೇ ತರಗತಿ ವಿದ್ಯಾರ್ಥಿಯ ಅಟ್ಟಹಾಸಕ್ಕೆ ಓರ್ವ ಬಲಿ
ಅಪರಿಚಿತ ನಂಬರ್ಗಳಿಂದ ಬರುತ್ತವೆ ಇಂತಹ ಮೆಸೇಜ್ಗಳು
ಸಾಮಾನ್ಯವಾಗಿ ಈ ರೀತಿಯ ನಕಲಿ ಸಂದೇಶಗಳು ಅಪರಿಚಿತ ನಂಬರ್ಗಳಿಂದ ಬರುತ್ತವೆ. ಆದ್ದರಿಂದ ನಿಮಗೆ ಪರಿಚಯವಿಲ್ಲದ ನಂಬರ್ನಿಂದ ಬರುವ ಮದುವೆ ಕಾರ್ಡ್, ಫೋಟೋ, ವಿಡಿಯೋ ಅಥವಾ ಲಿಂಕ್ಗಳನ್ನು ತೆರೆಯುವುದು ಅಪಾಯಕಾರಿ. ನಿಮಗೆ ಚೆನ್ನಾಗಿ ಪರಿಚಯವಿರುವವರಿಂದ ಬಂದ ಮೆಸೇಜ್ಗಳನ್ನು ಮಾತ್ರ ನಂಬುವುದು ಉತ್ತಮ.
ಈ ವಂಚನೆಯಿಂದ ಪಾರಾಗಲು ಏನು ಮಾಡಬೇಕು?
ನಿಮ್ಮ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಡಲು ಈ ಕ್ರಮಗಳನ್ನು ಅನುಸರಿಸುವುದು ಅಗತ್ಯ:
1. ಆಟೋ-ಡೌನ್ಲೋಡ್ಆಫ್ಮಾಡಿ
ವಾಟ್ಸಾಪ್ ಸೆಟ್ಟಿಂಗ್ಸ್ಗೆ ಹೋಗಿ ಫೋಟೋ, ವಿಡಿಯೋ ಮತ್ತು ಡಾಕ್ಯುಮೆಂಟ್ಗಳ Auto-download ಆಯ್ಕೆಯನ್ನು ಆಫ್ ಮಾಡಿ. ಇದರಿಂದ ಯಾವುದೇ ಫೈಲ್ ತಾನಾಗಿಯೇ ಡೌನ್ಲೋಡ್ ಆಗುವುದಿಲ್ಲ.
2. ಅಪರಿಚಿತಲಿಂಕ್ಗಳಮೇಲೆಕ್ಲಿಕ್ಮಾಡಬೇಡಿ
ಅಪರಿಚಿತ ನಂಬರ್ನಿಂದ ಬಂದ ಫೋಟೋ, ವಿಡಿಯೋ, ಫೈಲ್ ಅಥವಾ ಲಿಂಕ್ಗಳನ್ನು ತೆರೆಯಬೇಡಿ.
3. ಬ್ಲಾಕ್ ಮತ್ತು ರಿಪೋರ್ಟ್ ಮಾಡಿ
ಅನುಮಾನಾಸ್ಪದ ಸಂದೇಶಗಳನ್ನು ತಕ್ಷಣವೇ ಡಿಲೀಟ್ ಮಾಡಿ. ಜೊತೆಗೆ ಆ ನಂಬರ್ ಅನ್ನು ವಾಟ್ಸಾಪ್ನಲ್ಲಿ Report ಮಾಡಿ ಮತ್ತು Block ಮಾಡಿ.

ಎಚ್ಚರಿಕೆಯಿಂದ ಇರಬೇಕು
ಸೈಬರ್ ವಂಚನೆಗಳು ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿವೆ. ಆದ್ದರಿಂದ ಎಚ್ಚರಿಕೆಯಿಂದ ಇರುವುದು ಮತ್ತು ಅಪರಿಚಿತ ಸಂದೇಶಗಳನ್ನು ನಿರ್ಲಕ್ಷಿಸುವುದು ಅತ್ಯಂತ ಮುಖ್ಯ.
MUST WATCH : BPL CARDದಾರರಿಗೆ ಸಿದ್ದು ಬಜೆಟ್ ನಲ್ಲಿ ಬಂಫರ್ ಗಿಫ್ಟ್




