Ballari : ರಾಡ್ನಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ 9ನೇ ತರಗತಿ ವಿದ್ಯಾರ್ಥಿ ಎಸ್ಕೇಪ್: ಒರ್ವ ಬಾಲಕ ಸಾವು

ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಓರ್ವ ಬಾಲಕ ಮೃತಪಟ್ಟಿರುವ ಘಟನೆ Ballari ಖಾಸಗಿ ಶಾಲೆಗೆ ಸೇರಿದ ಹಾಸ್ಟೆಲ್ನಲ್ಲಿ ನಡೆದಿದೆ.
9ನೇ ತರಗತಿ ಯುವಕನೊರ್ವ ಹಾಸ್ಟಲ್ ವಾರ್ಡನ್ ಅನ್ನು ಸೇರಿ, 7 ಮಂದಿ ಮೇಲೆ ರಾಡ್ನಿಂದ ಹಲ್ಲೆ ಮಾಡಿದ್ದಾನೆ. ಈ ಪ್ರಕರಣದಲ್ಲಿ ಒರ್ವ ವಿದ್ಯಾರ್ಥಿ ಸಾವನಪ್ಪಿದ್ದು, ಆರೋಪಿತ ವಿದ್ಯಾರ್ಥಿ ಪರಾರಿಯಾಗಿದ್ದಾನೆ. ಮೃತ ಬಾಲಕನ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಯ ಬಗ್ಗೆ ನಿರ್ಲಕ್ಷದ ಆರೋಪ ಮಾಡಿದ್ದಾರೆ.

ರಾಡ್ನಿಂದ ಹಲ್ಲೆ ಮಾಡಿದ 9ನೇ ತರಗತಿ ಬಾಲಕ
9ನೇ ತರಗತಿ ವಿದ್ಯಾರ್ಥಿಯೊರ್ವ ರಾಡ್ ನಿಂದ ಹಲ್ಲೆ ನಡೆಸಿದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಇತರ ಏಳು ಮಂದಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ನು ಹಲ್ಲೆ ನಡೆಸಿ ಬಾಲಕ ಪರಾರಿಯಾಗಿದ್ದು, ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಮೃತನ ಪೋಷಕರ ಆಕ್ರಂದನ ಮುಗುಲಿ ಮುಟ್ಟಿದ್ದು, ರಾಡ್ ನಿಂದ ಹೊಡೆದಿದ್ದಾನೆ ಎಂದು ಶಾಲಾ ಆಡಳಿತ ಮಂಡಳಿ ಹೇಳ್ತಿದೆ. ಆದರೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂಬ ಅನುಮಾನ ಮೂಡಿದೆ.
ಹಲ್ಲೆ ನಡೆಸಿರುವ ವಿದ್ಯಾರ್ಥಿ ಡ್ರಗ್ ಅಡಿಕ್ಟ್ ಆಗಿರುವ ಶಂಕೆ
ಇನ್ನು ಹಲ್ಲೆ ಮಾಡಿರುವ ವಿದ್ಯಾರ್ಥಿ ಡ್ರಗ್ ಅಡಿಕ್ಟ್ ಆಗಿರುವ ಶಂಕೆ ಇದ್ದು, ಇಷ್ಟೆಲ್ಲ ಹುಡುಗರ ಮೇಲೆ ಆತ ಒಬ್ಬನೇ ಹಲ್ಲೆ ಮಾಡೋದಕ್ಕೆ ಹೇಗೆ ಸಾದ್ಯ? ಇದಕ್ಕೆಲ್ಲಾ ಶಾಲಾ ಆಡಳಿತ ಮಂಡಳಿಯೇ ಕಾರಣ ಎಂದು ಮೃತ ವಿದ್ಯಾರ್ಥಿ ಪೋಷಕರು ಆರೋಪಿಸಿದ್ದಾರೆ.
READ THIS : ವಿದ್ಯುತ್ ಶಾಕ್ ತಗುಲಿ ಲೈನ್ ಮ್ಯಾನ್ ಸಾವು – BESCOM ನಿರ್ಲಕ್ಷ್ಯ ಆರೋಪ

ವಿದ್ಯಾರ್ಥಿಗೆ ಮಾನಸಿಕ ಸಮಸ್ಯೆಇ ತ್ತಾ?
ಈ ಹಿಂದೆ ಹಾಸ್ಟೆಲ್ ನಲ್ಲಿ ಈ ರೀತಿಯಾದ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಹಲ್ಲೆ ನಡೆದಿರೋದು ಕೇವಲ ಒಬ್ಬರ ಮೇಲಲ್ಲ. ಹಲವರ ಮೇಲೆ ಬಾಲಕ ಹಲ್ಲೆ ನಡೆಸಿದ್ದಾನೆ. ಈ ರೀತಿಯಾದ ವರ್ತನೆಗೆ ಆತನಿಗೆ ಏನಾದರೂ ಮಾನಸಿಕ ಸಮಸ್ಯೆ ಇತ್ತಾ? ಅಥವಾ ಡ್ರಗ್ಸ್ ಅಡಿಕ್ಟ್ ಆಗಿದ್ದಾನಾ ಎಂಬ ಪ್ರಶ್ನೆಗಳು ಇವೆ.
ಬಾಲಕರ ನಡುವೆ ಏನಾಗಿದೆ..?
ಇನ್ನು ಹಾಸ್ಟಲ್ ಆಡಳಿತ ಮಂಡಳಿಯನ್ನು ನಂಬಿ, ಮಕ್ಕಳನ್ನು ಬಿಟ್ಟಿದ್ದೇವೆ. ಆದರೆ ಅವರ ನಿರ್ಲಕ್ಷದಿಂದ ಈ ಘಟನೆ ನಡೆದಿದೆ. ಅಸಲಿಗೆ ಬಾಲಕರ ನಡುವೆ ಏನಾಗಿದೆ ಎಂಬುದು ಗೊತ್ತಿಲ್ಲ.
ರಾತ್ರಿ ನಮಗೆ ದೂರವಾಣಿ ಕರೆ ಬಂದ ಹಿನ್ನಲೆ ಇಲ್ಲಿಗೆ ಬಂದು ನೋಡಿದಾಗ ಕೊಲೆ ನಡೆದಿರೋದು ಗೊತ್ತಾಗಿದೆ, ವಿದ್ಯಾರ್ಥಿ ಕೈಗೆ ಮಾರಕಾಸ್ತ್ರ ಸಿಕ್ಕಿದ್ದಾದರೂ ಹೇಗೆ ಎಂದು ಪೋಷಕರು ಪ್ರಶ್ನಿಸಿದ್ದಾರೆ.

MUAT WATCH : ಗುತ್ತಿಗೆದಾರ, ಬೆಸ್ಕಾಂ ಅಧಿಕಾರಿಯ ಇದೆಂಥಾ ನಿರ್ಲಕ್ಷ್ಯ..?- ಕೂಲಿ ಕಾರ್ಮಿಕನನ್ನೇ ಬಲಿ




