‘Toxic’ ಸಿನಿಮಾ ಬಿಡುಗಡೆ ಮುಂದೂಡಿಕೆ ನಿರ್ಧಾರಕ್ಕೆ ಕಾರಣವೇನು?

ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಬಿಡುಗಡೆಯನ್ನು ಚಿತ್ರತಂಡ ಹಠಾತ್ ಮುಂದೂಡಿದೆ. ಮಾರ್ಚ್ 19ರಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾಗೆ ಟೀಸರ್, ಪೋಸ್ಟರ್ ಹಾಗೂ ಹಾಡುಗಳ ಮೂಲಕ ಭಾರೀ ಹೈಪ್ ಸೃಷ್ಟಿಯಾಗಿತ್ತು. ವಿತರಣೆ ಹಕ್ಕುಗಳು ಮಾರಾಟವಾಗಿದ್ದ ಹಿನ್ನೆಲೆ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದರು. ಆದರೆ ಅಂತರರಾಷ್ಟ್ರೀಯ ಪರಿಸ್ಥಿತಿಯನ್ನು ಗಮನಿಸಿ ಚಿತ್ರತಂಡ ಮಹತ್ವದ ನಿರ್ಧಾರ ಕೈಗೊಂಡಿದೆ.

ಟಾಕ್ಸಿಕ್ಗೆ ತಟ್ಟಿದ ಇಸ್ರೇಲ್-ಇರಾನ್ ಯುದ್ಧ
ಪ್ರಸ್ತುತ ಇಸ್ರೇಲ್–ಅಮೆರಿಕ ಮತ್ತು ಇರಾನ್ ದೇಶಗಳ ನಡುವಿನ ಸಂಘರ್ಷ ತೀವ್ರಗೊಂಡಿದೆ. ಇದರ ಪರಿಣಾಮವಾಗಿ ಮಧ್ಯಪ್ರಾಚ್ಯದ ಅನೇಕ ರಾಷ್ಟ್ರಗಳಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಭಾರತೀಯ ಸಿನಿಮಾಗಳಿಗೆ ಪ್ರಮುಖ ಮಾರುಕಟ್ಟೆಯಾಗಿರುವ ಯುಎಇ, ಕುವೈತ್, ಒಮಾನ್ ಹಾಗೂ ಕತಾರ್ಗಳಲ್ಲಿ ಸಿನಿಮಾ ಬಿಡುಗಡೆಗೆ ಅನುಕೂಲಕರ ಪರಿಸ್ಥಿತಿ ಇಲ್ಲವೆಂದು ವರದಿಯಾಗಿದೆ.
ಯುಎಇಯ ಪ್ರಮುಖ ನಗರಗಳಾದ ದುಬೈ, ಅಬುಧಾಬಿ, ಶಾರ್ಜಾ ಮತ್ತು ಅಲ್ ಐನ್ಗಳಲ್ಲಿ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆ ಅಲ್ಲಿ ಚಿತ್ರ ಬಿಡುಗಡೆ ಸಾಧ್ಯವಿಲ್ಲ ಎನ್ನಲಾಗಿದೆ.
ಇದೇ ಪರಿಸ್ಥಿತಿ ಅಮೆರಿಕದಲ್ಲಿಯೂ ಇದೆ. ಯುದ್ಧದ ಪರ-ವಿರೋಧ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಚಿತ್ರಮಂದಿರಗಳ ಕಾರ್ಯಾಚರಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

‘ಪ್ಯಾನ್ವಲ್ಡ್’ ಕನಸಿಗೆ ತಾತ್ಕಾಲಿಕ ವಿರಾಮ
‘Toxic’ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾತ್ರವಲ್ಲದೆ ‘ಪ್ಯಾನ್ವಲ್ಡ್’ ಮಟ್ಟದಲ್ಲಿ ಬಿಡುಗಡೆ ಮಾಡುವ ಕನಸನ್ನು ಯಶ್ ಹೊಂದಿದ್ದರು. ಮಧ್ಯಪ್ರಾಚ್ಯ, ಅಮೆರಿಕ, ಏಷ್ಯಾ ಹಾಗೂ ಯುರೋಪಿನ ಕೆಲವು ರಾಷ್ಟ್ರಗಳಲ್ಲೂ ಚಿತ್ರವನ್ನು ಭರ್ಜರಿಯಾಗಿ ಬಿಡುಗಡೆ ಮಾಡುವ ಯೋಜನೆ ಇತ್ತು.
ಆದರೆ ವಿಶ್ವದ ಹಲವು ಭಾಗಗಳಲ್ಲಿ ಯುದ್ಧದ ಆತಂಕ ಮತ್ತು ಅನಿಶ್ಚಿತತೆ ಇರುವ ಸಂದರ್ಭದಲ್ಲಿ ಬಿಡುಗಡೆ ಮಾಡುವುದು ವ್ಯವಹಾರಿಕವಾಗಿ ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಚಿತ್ರತಂಡ ಬಂದಿದೆ.
READ THIS : ರಣವೀರ್ ನಟನೆಯ ‘Dhurandhar 2’ ವಿಳಂಬಕ್ಕೆ ಕಾರಣವಾಯ್ತು ಚಂದ್ರ ಗ್ರಹಣ

ಸಿನಿಮಾ ಪ್ರಚಾರಕ್ಕೂ ಅಡ್ಡಿ
ಇನ್ನು ಚಿತ್ರದ ಪ್ರಚಾರಕ್ಕಾಗಿ ಭಾರತ ಸೇರಿದಂತೆ ಅಮೆರಿಕ, ದುಬೈ, ಮಲೇಷ್ಯಾ, ಜಪಾನ್ ಮತ್ತಿತರ ದೇಶಗಳಿಗೆ ಯಶ್ ಮತ್ತು ತಂಡ ಭೇಟಿ ನೀಡಬೇಕಾಗಿತ್ತು.
ಆದರೆ ವೈಮಾನಿಕ ಸಂಚಾರದಲ್ಲಿ ಉಂಟಾದ ಅಸ್ತವ್ಯಸ್ತತೆ ಮತ್ತು ಭದ್ರತಾ ಆತಂಕದ ಹಿನ್ನೆಲೆಯಲ್ಲಿ ಈ ಪ್ರವಾಸ ಸಾಧ್ಯವಿಲ್ಲದಂತಾಗಿದೆ. ಚಿತ್ರತಂಡದ ಸುರಕ್ಷತೆಯನ್ನೂ ಪರಿಗಣಿಸಿಬಿಡುಗಡೆದಿನಾಂಕಮುಂದೂಡಲಾಗಿದೆ.

ಅಭಿಮಾನಿಗಳಿಗೆ ನಿರಾಶೆ
ಇನ್ನು ಟಾಕ್ಸಿಕ್ ಬಿಡುಗಡೆ ಮುಂದೂಡಿಕೆಯಿಂದ ಅಭಿಮಾನಿಗಳಿಗೆ ಬೇಸರ ಉಂಟಾದರೂ, ವ್ಯಾಪಾರಿಕ ಹಾಗೂ ಭದ್ರತಾ ದೃಷ್ಟಿಯಿಂದ ಇದು ಸೂಕ್ತ ಹಾಗೂ ಉದ್ಯಮಸಹಜ ನಿರ್ಧಾರವೆಂದು ಸಿನಿ ವಲಯದಲ್ಲಿ ಚರ್ಚೆಯಾಗುತ್ತಿದೆ.

ಜೂನ್4ಕ್ಕೆ ವಿಶ್ವಾದ್ಯಂತ ರಿಲೀಸ್
ಈ ಬಗ್ಗೆ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡಿರುವ ಯಶ್, ಜಾಗತಿಕ ಮಟ್ಟದ ಬೆಳವಣಿಗೆಗಳ ಕಾರಣದಿಂದಾಗಿ ನಾವು ‘ಟಾಕ್ಸಿಕ್’ ಬಿಡುಗಡೆಯನ್ನು ಮುಂದೂಡುತ್ತಿದ್ದೇವೆ.
ಮಾರ್ಚ್ 19ರ ಬದಲಾಗಿ, ಇದೇ ಜೂನ್ 4 ರಂದು ಸಿನಿಮಾ ವಿಶ್ವದಾದ್ಯಂತ ನಿಮ್ಮೆದುರು ಬರಲಿದೆ. ನಿಮ್ಮ ಪ್ರೀತಿ ಹಾಗೂ ಬೆಂಬಲ ಹೀಗೆಯೇ ಇರಲಿ ಎಂದು ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ ತಮ್ಮ ನೆಚ್ಚಿನ ನಟನ ದರ್ಶನ ಪಡೆಯಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಸುದ್ದಿ ತುಸು ನಿರಾಸೆ ತರಿಸಿದ್ದರೂ, ಜೂನ್ 4ರಂದು ಚಿತ್ರಮಂದಿರಗಳಲ್ಲಿ ದೊಡ್ಡ ಜಾತ್ರೆಯೇ ನಡೆಯುವುದು ಖಚಿತವಾಗಿದೆ.

MUST WATCH : DEADLYATTACK ON FRIEND|ʼಪ್ರಾಣʼಸ್ನೇಹಿತ ಅಂದುಕೊಂಡವನೇ ವಿಲನ್ ಆದ್ನಾ..?




