ಸೋಶಿಯಲ್ ಮೀಡಿಯಾದಲ್ಲಿ ‘Dhurandhar 2’ Vs ‘ಟಾಕ್ಸಿಕ್’ ಚರ್ಚೆ ಜೋರಾಗಿದೆ.

ನಟ ರಣವೀರ್ ಸಿಂಗ್ ಅವರು ಕಳೆದ ವರ್ಷ ‘ಧುರಂಧರ್’ ಸಿನಿಮಾ ಮೂಲಕ ದೊಡ್ಡ ಯಶಸ್ಸು ಕಂಡರು. ಈ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ. ಸಿನಿಮಾದ ಬಗ್ಗೆ ಅಲ್ಲಲ್ಲಿ ತುಸು ನೆಗೆಟಿವ್ ಅಭಿಪ್ರಾಯಗಳು ಕೇಳಿ ಬರುತ್ತಿದ್ದರೂ ಸಹ ಸಿನಿಮಾ ಪ್ರಿಯರು ಮುಗಿಬಿದ್ದು ಸಿನಿಮಾ ನೋಡಿದ್ರು. ದಕ್ಷಿಣ ಭಾರತದಲ್ಲಿಯೂ ಸಹ ಸಿನಿಮಾವನ್ನು ಪ್ರೇಕ್ಷಕರು ನೋಡಿ ಮೆಚ್ಚಿಕೊಂಡಿದ್ದು, ಸಿನಿಮಾ ಒಳ್ಳೆಯ ಗಳಿಕೆ ಮಾಡಿತ್ತು.
ಎರಡೂ ಸಿನಿಮಾಗಳ ನಡುವೆ ಭರ್ಜರಿ ಫೈಟ್
ಈಗ ‘ಧುರಂಧರ್2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ‘ಧುರಂಧರ್’ ಸಿನಿಮಾ ಈಗಾಗಲೇ ಭಾರಿ ದೊಡ್ಡ ಹಿಟ್ ಆಗಿದ್ದು, ಸಹಜವಾಗಿಯೇ ‘ಧುರಂಧರ್ 2’ ಸಿನಿಮಾಕ್ಕೆ ಸಹ ದೊಡ್ಡ ಸಂಖ್ಯೆಯ ಪ್ರೇಕ್ಷಕರು ಕಾಯುತ್ತಿದ್ದು, ಬಾಕ್ಸ್ ಆಫೀಸ್ನಲ್ಲಿ ಎರಡೂ ಸಿನಿಮಾಗಳ ನಡುವೆ ಭರ್ಜರಿ ಫೈಟ್ ನಡೆಯಲಿದೆ.

‘ಧುರಂಧರ್ 2’ Vs ‘ಟಾಕ್ಸಿಕ್’
ಸೋಶಿಯಲ್ ಮೀಡಿಯಾ ಓಪನ್ ಮಾಡಿದರೆ ‘ಧುರಂಧರ್ 2’ Vs ‘ಟಾಕ್ಸಿಕ್’ ಎಂಬ ಚರ್ಚೆ ಕಾಣಿಸುತ್ತದೆ. ಇಂದು ಸಿನಿಮಾ ಟ್ರೇಲರ್ ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ನಂತರ ಅದನ್ನು ಮುಂದಕ್ಕೆ ಹಾಕಲಾಯಿತು. ಇದಕ್ಕೆ ಕಾರಣ ಆಗಿದ್ದು ಚಂದ್ರ ಗ್ರಹಣ ಎಂದು ವರದಿ ಆಗಿದೆ. ಈ ಬಗ್ಗೆ ಬಾಲಿವುಡ್ ಹಂಗಾಮ ವರದಿ ಮಾಡಿದೆ. ಬಾಲಿವುಡ್ನವರೂ ಇದನ್ನು ಬಹುವಾಗಿ ನಂಬುತ್ತಾರೆ ಎಂಬ ವಿಷಯ ಅನೇಕರಿಗೆ ಅಚ್ಚರಿ ತಂದಿದೆ.
READ THIS : Haveri|ದೇವರ ದರ್ಶನಕ್ಕೆ ಹೋಗಿ ಬರುತ್ತಿದ್ದ ನವದಂಪತಿ ಸ್ಥಳದಲ್ಲೇ ಸಾವು..!!

‘Dhurandhar 2’ ವಿಳಂಬಕ್ಕೆ ಕಾರಣವಾಯ್ತು ಚಂದ್ರ ಗ್ರಹಣ
ಕೆಲವರ ನಂಬಿಕೆ ಪ್ರಕಾರ ಗ್ರಹಣ ದಿನವನ್ನು ಒಳ್ಳೆಯ ದಿನ ಎಂದು ಪರಿಗಣಿಸಲಾಗುವುದಿಲ್ಲ. ಈ ಕಾರಣದಿಂದ ಅಂದು ಸಾಕಷ್ಟು ಪೂಜೆಗಳನ್ನು ಮಾಡಲಾಗುತ್ತದೆ. ಕೆಲವು ಕಡೆಗಳಲ್ಲಿ ಗ್ರಹಣದ ಸಮಯದಲ್ಲಿ ಆಹಾರ ಸೇವನೆಯನ್ನೂ ಮಾಡೋದಿಲ್ಲ. ಗ್ರಹಣದ ಬಳಿಕ ಸ್ನಾನ ಮಾಡಿ, ಮನೆಯನ್ನು ಶುಚಿಗೊಳಿಸುವವರೂ ಇದ್ದಾರೆ.
ಹೀಗಾಗಿ, ಈ ದಿನ ‘ಧುರಂಧರ್ 2’ ಟ್ರೇಲರ್ ರಿಲೀಸ್ಮಾಡೋದು ಬೇಡ ಎಂಬ ನಿರ್ಧಾರಕ್ಕೆ ಚಿತ್ರತಂಡಕ್ಕೆ ಬಂದಂತೆ ಇದೆ. ಸದ್ಯ ಹೊಸ ವರದಿ ಪ್ರಕಾರ ಮಾರ್ಚ್ 5 ಅಥವಾ 6ರಂದು ಟ್ರೇಲರ್ ಲಾಂಚ್ ಆಗಲಿದೆಯಂತೆ. ಮುಂಬೈನ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಅಲ್ಲಿ ಈ ಟ್ರೇಲರ್ ರಿವೀಲ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಿನಿಮಾ ಯಾವಾಗ ಬಿಡುಗಡೆ?
ಇನ್ನು ಧುರಂಧರ್-2 ಚಿತ್ರ ಮಾರ್ಚ್-19 ರಂದು ರಿಲೀಸ್ ಆಗುತ್ತಿದೆ. ದೊಡ್ಡಮಟ್ಟದಲ್ಲಿಯೇ ಇದು ತೆರೆಗೆ ಬರ್ತಿದೆ. ಚಿತ್ರದ ಡೈರೆಕ್ಟರ್ ಆದಿತ್ಯ ಧರ್ ಪತ್ನಿ ಮತ್ತು ನಟಿ ಯಾಮಿಗೌತಮ್ ಈ ಚಿತ್ರ ನೋಡಿದ್ದಾರೆ. ಸಿನಿಮಾ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಭಾರತದ ಬಹು ನಿರೀಕ್ಷಿತ ಸಿನಿಮಾ
ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿಎಉವ ಯಶ್ ನಟಿಸಿರುವ ‘ಟಾಕ್ಸಿಕ್’ ಸಿನಿಮಾ ಕೂಡ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಸಿನಿಮಾದ ಪ್ರೀ ರಿಲೀಸ್ ಸೇಲ್ಸ್ ಬಹುತೇಕ ಮುಗಿದಿದ್ದು, ಸಿನಿಮಾದ ಅಸಲಿ ಪ್ರಚಾರ ಶುರುವಾಗಬೇಕಿದೆ. ಆದರೆ ಈ ಬಾರಿ ‘ಟಾಕ್ಸಿಕ್’ ಸಿನಿಮಾಕ್ಕೆ ಎದುರಾಳಿಯಾಗಿ ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಬರುತ್ತಿದೆ. ಎರಡೂ ಸಿನಿಮಾಗಳ ನಡುವೆ ಭಾರಿ ಪೈಪೋಟಿ ಏರ್ಪಡುವುದು ಖಾತ್ರಿ ಆಗಿದೆ.
ಈ ವರ್ಷದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳು
ಒಂದ್ಕಡೆ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’. ಇನ್ನೊಂದು ಕಡೆ ಗೀತು ಮೋಹನ್ದಾಸ್ ಆಕ್ಷನ್ ಕಟ್ ಹೇಳಿರುವ ‘ಟಾಕ್ಸಿಕ್’. ಎರಡೂ ಸಿನಿಮಾಗಳು ಈ ವರ್ಷದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳು. ಸಾವಿರ ಕೋಟಿ ಸರದಾರರ ಸಿನಿಮಾಗಳು ಪೈಪೋಟಿಗೆ ಬಿದ್ದು ರಿಲೀಸ್ ಆಗುತ್ತಿವೆ. ಹೀಗಾಗಿ ಬಾಕ್ಸಾಫೀಸ್ ರಣರಂಗ ಆಗುವ ಸಾಧ್ಯತೆಯಿದೆ.

MUST WATCH : ತುಮಕೂರಿನಲ್ಲಿ ಜೆಸಿಬಿ ಘರ್ಜನೆ ಫುಟ್ಪಾತ್ ಒತ್ತುವರಿ ತೆರವು | TUMAKURU NEWS




