ನೆಟ್ಫ್ಲಿಕ್ಸ್ನಲ್ಲಿ ನಂಬರ್ 1 ಪಟ್ಟಕ್ಕೇರಿದ Dhurandhar

ನಟ ರಣವೀರ್ ಸಿಂಗ್ ಅಭಿನಯದ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಧುರಂಧರ್’ ನೆಟ್ಫ್ಲಿಕ್ಸ್ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದ್ದು, ನೆಟ್ಫ್ಲಿಕ್ಸ್ ತನ್ನ ಇತ್ತೀಚಿನ ವರದಿಯಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
37 ಮಿಲಿಯನ್ ವೀಕ್ಷಣೆ
ಆದಿತ್ಯ ಧಾರ್ ನಿರ್ದೇಶನದ Dhurandhar ಸಿನಿಮಾ 37 ಮಿಲಿಯನ್ ವೀಕ್ಷಣೆಗಳನ್ನು ಪಡೆದು ನೆಟ್ಫ್ಲಿಕ್ಸ್ನ ಇಂಗ್ಲಿಷೇತರ ಚಿತ್ರಗಳ ವಿಭಾಗದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ.
ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಆರ್. ಮಾಧವನ್, ಅಕ್ಷಯ್ ಖನ್ನಾ, ಸಂಜಯ್ ದತ್ ಮತ್ತು ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಭಾರತದ ವ್ಯಕ್ತಿಯೊಬ್ಬ ಪಾಕಿಸ್ತಾನಕ್ಕೆ ತೆರಳಿ ಗೂಢಚಾರನಾಗುವ ಕಥಾಹಂದರವನ್ನು ಸಿನಿಮಾ ಒಳಗೊಂಡಿದೆ.

ಬಾಕ್ಸ್ ಆಫೀಸ್ನಲ್ಲೂ ಯಶಸ್ಸು
ಕಳೆದ ವರ್ಷದ ಡಿಸೆಂಬರ್ 5ರಂದು ಬಿಡುಗಡೆಯಾದ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲೂ ಉತ್ತಮ ಪ್ರದರ್ಶನ ನೀಡಿತ್ತು. ಚಿತ್ರದ ಯಶಸ್ಸಿನ ಬಳಿಕ ಬಿಡುಗಡೆಯಾದ ಅದರ ಸೀಕ್ವೆಲ್ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ದಾಖಲೆ ನಿರ್ಮಿಸಿದೆ.
ಇದನ್ನು ಓದಿ : ಜಿಯೋಹಾಟ್ಸ್ಟಾರ್ನಲ್ಲಿ ‘ Dhurandhar 2 ’ ಹೊಸ ದಾಖಲೆ..!!

ನೆಟ್ಫ್ಲಿಕ್ಸ್ ಇಂಡಿಯಾದಲ್ಲಿ ಭಾರತೀಯ ಒರಿಜಿನಲ್ಗಳ ಹವಾ
ಭಾರತೀಯ ಒರಿಜಿನಲ್ ಕಂಟೆಂಟ್ಗಳಿಗೂ ನೆಟ್ಫ್ಲಿಕ್ಸ್ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
- ‘ಅಕ್ಯೂಸ್ಡ್’ – ಅನುಭೂತಿ ಕಶ್ಯಪ್ ನಿರ್ದೇಶನದ ಈ ಸರಣಿಯು 19 ಮಿಲಿಯನ್ ವೀಕ್ಷಣೆಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಕೊಂಕಣ ಸೇನ್ ಶರ್ಮಾ ಹಾಗೂ ಪ್ರತಿಭಾ ರಾಂಟಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
- ‘ಮೇಡ್ ಇನ್ ಕೊರಿಯಾ’ – ಪ್ರಿಯಾಂಕಾ ಮೋಹನ್ ಅಭಿನಯದ ಈ ಸಿನಿಮಾ 18 ಮಿಲಿಯನ್ ವೀಕ್ಷಣೆಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ.
- ‘ತಸ್ಕರಿ’ – ಇಮ್ರಾನ್ ಹಶ್ಮಿ ನಟನೆಯ ಈ ಸರಣಿ 16 ಮಿಲಿಯನ್ ವೀಕ್ಷಣೆಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಜಾಗತಿಕ ಮಟ್ಟದಲ್ಲಿ ಟಾಪ್ ಸಿನಿಮಾಗಳು
ಅಂತಾರಾಷ್ಟ್ರೀಯ ಚಿತ್ರಗಳ ವಿಭಾಗದಲ್ಲಿ ‘ವಾರ್ ಮೆಷಿನ್’ 147 ಮಿಲಿಯನ್ ವೀಕ್ಷಣೆಗಳೊಂದಿಗೆ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ‘ದಿ ಆರ್ಐಪಿ’ (136 ಮಿಲಿಯನ್), ‘ಸ್ವಾಪ್ಡ್’ (131 ಮಿಲಿಯನ್), ‘ಕೆ-ಪಾಪ್ ಡೆಮನ್ ಹಂಟರ್ಸ್’ (130 ಮಿಲಿಯನ್) ಹಾಗೂ ‘ಅಪೆಕ್ಸ್’ (129 ಮಿಲಿಯನ್) ಚಿತ್ರಗಳು ಸ್ಥಾನ ಪಡೆದಿವೆ.
ವೆಬ್ ಸರಣಿಗಳ ವಿಭಾಗದಲ್ಲಿ ‘ಹಿಸ್ ಅಂಡ್ ಹರ್ಸ್’ 104 ಮಿಲಿಯನ್ ವೀಕ್ಷಣೆಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
ಇದನ್ನು ನೋಡಿ : ಚೆನ್ನಮ್ಮ ಪಾರ್ಥೀವ ಶರೀರದ ಎದುರು ಶ್ಲೋಕ ಹೇಳಿ ಬಿಕ್ಕಿಬಿಕ್ಕಿ ಅತ್ತ ಮಗಳು





