ಭಾರತ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾ Toxic ನಿನ್ನೆ ಬೆಳಿಗ್ಗೆ 9:30ಕ್ಕೆ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಟೀಸರ್ ಬಿಡುಗಡೆ ಆಗಿದೆ.

Yash ನಟನೆಯ ಬಹು ನಿರೀಕ್ಷಿತ ಚಿತ್ರ Toxic ಟೀಸರ್ ಬಿಡುಗಡೆಯಾಗಿ ಕೇವಲ 24 ಗಂಟೆಗಳಲ್ಲಿ ಸುಮಾರು 5 ಕೋಟಿ ವೀಕ್ಷಣೆಗಳನ್ನು ಪಡೆದು ಹೊಸ ದಾಖಲೆ ಬರೆದಿದೆ. ಫೆಬ್ರವರಿ 20ರಂದು ಬೆಳಿಗ್ಗೆ 9:30ಕ್ಕೆ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಟೀಸರ್ ಬಿಡುಗಡೆಗೊಂಡಿತ್ತು.
Social Mediaಗಳಲ್ಲಿ ವೈರಲ್
1 ನಿಮಿಷ 55 ಸೆಕೆಂಡುಗಳ ಟೀಸರ್ ಅನ್ನು ನಿರ್ಮಾಣ ಸಂಸ್ಥೆ KVN Productions ಯೂಟ್ಯೂಬ್ ಚಾನೆಲ್ ಮೂಲಕ ಏಕಕಾಲದಲ್ಲಿ ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಮೆಚ್ಚುಗೆ ಗಳಿಸಿತು.

ಭಾಷಾವಾರು ವೀಕ್ಷಣೆಗಳ ವಿವರ
- ಕನ್ನಡ ಟೀಸರ್ – 74,19,923 ವೀಕ್ಷಣೆ (ಹೊಸ ದಾಖಲೆ)
- ಹಿಂದಿ ಟೀಸರ್ – 2.19 ಕೋಟಿ+ ವೀಕ್ಷಣೆ (ಅತಿ ಹೆಚ್ಚು)
- ತೆಲುಗು ಟೀಸರ್ – 1.10 ಕೋಟಿ+ ವೀಕ್ಷಣೆ
- ತಮಿಳು ಟೀಸರ್ – 54.31 ಲಕ್ಷ+ ವೀಕ್ಷಣೆ
- ಮಲಯಾಳಂ ಟೀಸರ್ – 27.63 ಲಕ್ಷ+ ವೀಕ್ಷಣೆ
ಒಟ್ಟಾರೆ 24 ಗಂಟೆಗಳಲ್ಲಿ ಸುಮಾರು 5 ಕೋಟಿ ವೀಕ್ಷಣೆಗಳನ್ನು ಗಳಿಸಿ ‘ಟಾಕ್ಸಿಕ್’ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಇದನ್ನು ಓದಿ : ತಾಯಿಯ ಕಣ್ಣೆದುರೇ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟ ಯುವಕ.!

ದ್ವಿಪಾತ್ರದಲ್ಲಿ ರಾಯ
‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದು, ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ನಾಯಕಿಯರಾಗಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಗೀತು ಮೋಹನ್ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾಕ್ಕೆ ಕೆವಿಎನ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ಸ್ ಬಂಡವಾಳ ಹೂಡಿದೆ.

ಇದನ್ನು ನೋಡಿ : PRIVATE BANKಗಳಿಂದ ಬಡವರ ಮೇಲೆ ದಬ್ಬಾಳಿಕೆ- ಸಾಲ ಪಡೆದ ಗ್ರಾಹಕರಿಗೆ ಬ್ಯಾಂಕ್ನಿಂದ ಮೋಸ..?! | TUMAKURU NEWS




