Gubbi : ಕುರಿ ಮೈ ತೊಳೆಯಲು ಹೋಗಿ ಯುವಕನ ದಾರುಣ ಸಾವು.

ಹೆತ್ತ ತಾಯಿಯ ಮುಂದೆಯೇ ಯುವಕನೋರ್ವ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ Gubbi ತಾಲೂಕಿನ ಚೇಳೂರು ಹೋಬಳಿಯ ಸಾರಿಗೆಪಾಳ್ಯ ಗ್ರಾಮದಲ್ಲಿ ನಡೆದಿದೆ. ಸಾರಿಗೆಪಾಳ್ಯ ಗ್ರಾಮದ ನಿವಾಸಿ ಕುಮಾರ್ ಮೃತ ದುರ್ದೈವಿಯಾಗಿದ್ದಾನೆ.
ಕುರಿಗಳ ಮೈತೊಳೆಯಲು ಹೋಗಿ ದಾರುಣ ಘಟನೆ
ಮೃತ ಯುವಕ ತನ್ನ ತಾಯಿಯ ಜೊತೆಯಲ್ಲಿ ಕುರಿ ಮೇಯಿಸಲು ತೆರಳಿದ್ದ, ತನ್ನ ಜಮೀನಿನ ಪಕ್ಕದಲ್ಲಿರುವ ಅಂಕಸಂದ್ರ ಕಟ್ಟೆಯಲ್ಲಿ ಕುರಿಗಳ ಮೈ ತೊಳೆಯಲು ಹೋಗಿದ್ದ ವೇಳೆ, ಆಕಸ್ಮಾತಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾನೆ. ಆದ್ರೆ ಈಜಲು ಬಾರದೇ ನೀರಿನಲ್ಲೇ ಮುಳುಗಿ ತಾಯಿಯ ಕಣ್ಣೇದುರೇ ಪ್ರಾಣಬಿಟ್ಟಿದ್ದಾನೆ. ಇನ್ನು ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನು ಓದಿ : ಬಸವರಾಜ್ ಬೊಮ್ಮಾಯಿ ಪರ್ಸನಲ್ ಸೆಕ್ರೆಟರಿ ಪುತ್ರ Suicide

ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು – Gubbi
ಸದ್ಯ ವಿಷಯ ತಿಳಿದು ಚೇಳೂರು ಠಾಣೆಯ ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನು ನೋಡಿ : ಕೆಲಸದ ಮೇಲಿನ ಆಸೆನಾ..? ದುಡ್ಡಿನ ಆಸೆನಾ..? – ವಿಧವೆ ಮಹಿಳೆಯನ್ನು ಕೊಂ* ಡ್ರಾಮಾ




