Haveri : ಮನೆಯ ಮೇಲ್ಛಾವಣಿ ಹೆಂಚು ತೆಗೆದು ಕಳ್ಳತನ – ನಗದು,ಬೆಲೆಬಾಳುವ ಚಿನ್ನಾಭರಣ ಕದ್ದು ಖದೀಮರು ಎಸ್ಕೇಪ್.

Haveri ಜಿಲ್ಲೆ ಹಾನಗಲ್ ತಾಲೂಕಿನ ಹಿರೂರು ಗ್ರಾಮದ ಮನೆಯೊಂದರ ಮೇಲ್ಛಾವಣಿ ಹೆಂಚು ತೆಗೆದು, 15 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಚಿನ್ನಾಭರಣಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಹೆಚ್ಚು ಬೆಲೆಬಾಳುವ ಚಿನಾಭರಣ ದೋಚಿ ಪರಾರಿ
ಶನಿವಾರ ರಾತ್ರಿ 11 ಗಂಟೆಗೆ ಸುಮಾರಿಗೆ ಗ್ರಾಮದ ಮೊಹಮ್ಮದ್ ಗೌಸ್ ಹಂಚಿನಮನಿ ಎಂಬುವವರ ವಾಸದ ಮನೆಯ ಅಡುಗೆ ಕೋಣೆಯ ಮೇಲ್ಚಾವಣಿ ಹಂಚನ್ನ ಯಾರೋ ಕಳ್ಳರು ತೆಗೆದು, ಮನೆಯ ಒಳಗೆ ಪ್ರವೇಶಿಸಿ, ಟ್ರೇಜುರಿ ಬಾಗಿಲನ್ನು ಮುರಿದು ಟ್ರೇಜುರಿಯಲ್ಲಿ ಇಟ್ಟಿದ್ದ ಚಿನ್ನದ ಮಾಂಗಲ್ಯ ಸರ, ನೆಕ್ಲೆಸ್, ಜುಮುಕಿ, ಚೈನ್, ಚಿನ್ನದ ಪದಕದ ಸರ, ಒಂಬತ್ತು ಚಿನ್ನದ ಉಂಗುರುಗಳು, ಹಾಗೂ ಬೆಳ್ಳಿ ಆಭರಣಗಳು ಸೇರಿದಂತೆ ಒಟ್ಟು ಸುಮಾರು 15,42000/- ಲಕ್ಷ ರೂ ಗಳ ಬೆಲೆಬಾಳುವ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.
ಇದನ್ನು ಓದಿ : ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಭಾರತ – 61 ರನ್ ಅಂತರದ ಭರ್ಜರಿ ಜಯ!

ಕಳ್ಳರ ಪತ್ತೆಗೆ ಬಲೆ ಬೀಸಿರುವ ಹಾನಗಲ್ ಪೊಲೀಸರು
ಇನ್ನು ಕಳ್ಳತನದ ಮಾಹಿತಿ ತಿಳಿದ ಕೂಡಲೇ ಮಧ್ಯರಾತ್ರಿ 3ಗಂಟೆಗೆ ಸ್ಥಳಕ್ಕೆ ಧಾವಿಸಿದ, ಶಿಗ್ಗಾವಿ ಡಿವೈಎಸ್ಪಿ, ಹಾನಗಲ್ ಠಾಣೆ ಸಿಪಿಐ ಬಸವರಾಜ್ ಹಳಬಣ್ಣನವರ, ಪಿಎಸ್ಐ ಸಂಪತ್ ಆನಿಕಿವಿ, ಹಾಗೂ ಡಾಗ್ ಸ್ಕ್ವಾಡ್, ಸೇರಿದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳತನ ಎಸಗಿರುವ ಆರೋಪಿಯನ್ನು ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನು ನೋಡಿ : ತುಮಕೂರು ಲೈಬ್ರರಿ ಸುತ್ತ ಕಸದ ಸಮಸ್ಯೆ ಕಸ ಬಿದ್ದಿದ್ರೂ ಅಧಿಕಾರಿಗಳು ಡೋಂಟ್ ಕೇರ್




