ವೇಶ್ಯಾವಾಟಿಕೆಗೆ ಅತ್ತೆ ಒತ್ತಾಯ : ಬೀದರ್ ನಲ್ಲಿ ಮಹಿಳೆ Suicide.!

ವೇಶ್ಯಾವಾಟಿಕೆ ಮಾಡಲು ಅತ್ತೆಯಿಂದ ಹಾಗೂ ಪತಿ ಮನೆಯವರಿಂದ ಒತ್ತಾಯ ಮತ್ತು ನಿತ್ಯ ಕಿರುಕುಳ ಆರೋಪದ ಹಿನ್ನೆಲೆ 11 ತಿಂಗಳ ಮಗು ಬಿಟ್ಟು ಗೃಹಿಣಿಯೋರ್ವಳ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಓಂ ಬಡಾವಣೆಯಲ್ಲಿ ನಡೆದಿದೆ.
ವೇಶ್ಯಾವಾಟಿಕೆ ನಡೆಸುವಂತೆ ಅತ್ತೆ ಟಾರ್ಚರ್
ಮೃತ ಯುವತಿಯನ್ನು ಅಂಜನಾಬಾಯಿ ಶೇಖರ್ ಪಾಟೀಲ್ (22) ಎಂದು ಗುರುತಿಸಲಾಗಿದೆ. ಪತಿ ಮನೆಯವರ ನಿತ್ಯ ಕಿರುಕುಳದಿಂದ ಮನನೊಂದಿದ್ದ ಅಂಜನಾಬಾಯಿ Suicide ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಮೂರು ದಿನಗಳ ಹಿಂದೆ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮದುವೆ ಬಳಿಕ ಕಿರುಕುಳ ಆರೋಪ
2022ರಲ್ಲಿ ಬಸವಕಲ್ಯಾಣದ ಶೇಖರ್ ಪಾಟೀಲ್ ಅವರೊಂದಿಗೆ ಅಂಜನಾಬಾಯಿ ವಿವಾಹವಾಗಿತ್ತು. ಮದುವೆ ಬಳಿಕ ಆಕೆಗೆ ವೇಶ್ಯಾವಾಟಿಕೆ ಮಾಡಲು ಒತ್ತಾಯಿಸಿ ನಿತ್ಯವೂ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.
ಮೃತಳ ಪತಿ ಶೇಖರ್ ಪಾನಿಪುರಿ ವ್ಯಾಪಾರ ಮಾಡುತ್ತಿದ್ದನು ಎನ್ನಲಾಗಿದ್ದು, ಪ್ರತಿದಿನ ರಾತ್ರಿ 11–12 ಗಂಟೆಯ ವೇಳೆಗೆ ಮನೆಗೆ ಬರುತ್ತಿದ್ದ. ಈ ಬಗ್ಗೆ ಪ್ರಶ್ನಿಸಿದ ಅಂಜನಾಬಾಯಿಗೆ ಬೇಗ ಮನೆಗೆ ಬನ್ನಿ ಎಂದು ಹೇಳಿದ್ದಕ್ಕೆ ಅತ್ತೆ–ಮಾವರಿಂದ ಜಗಳವಾಗುತ್ತಿತ್ತು ಎನ್ನಲಾಗಿದೆ.

ಇದನ್ನು ಓದಿ : ಗಣಿ ನಾಡಿನಲ್ಲಿ 5 ಸಾವಿರ ವರ್ಷದ ಹಳೆಯ 2 ಮಾನವ ಅಸ್ಥಿಪಂಜರ ಪತ್ತೆ!
11 ತಿಂಗಳ ಮಗು ಬಿಟ್ಟು ಸೊಸೆ Suicide
“ನಿನಗೆ ಅಡುಗೆ ಬರಲ್ಲ, ನೀನು ಚೆನ್ನಾಗಿಲ್ಲ” ಎಂದು ಹೀಯಾಳಿಸುವುದರ ಜೊತೆಗೆ ವೇಶ್ಯಾವಾಟಿಕೆ ಮಾಡಲು ಒತ್ತಾಯಿಸಿ ಅಂಜನಾಬಾಯಿಯನ್ನು ಪೀಡಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ವಿಚಾರವನ್ನು ಅಂಜನಾಬಾಯಿ ತನ್ನ ಪೋಷಕರಿಗೆ ತಿಳಿಸಿದ್ದರೂ, ಅವರು ಕಾಲಕ್ರಮೇಣ ಎಲ್ಲವೂ ಸರಿಯಾಗಬಹುದು ಎಂದು ತಿಳುವಳಿಕೆ ಹೇಳಿದ್ದರು.
ಈ ನಡುವೆ ಕಿರುಕುಳ ತಾಳಲಾರದೆ ಅಂಜನಾಬಾಯಿ ದುಡುಕಿನ ನಿರ್ಧಾರ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪ್ರಕರಣ ದಾಖಲು
ಘಟನೆ ಸಂಬಂಧ ಮೃತಳ ತಂದೆ ವಿಜಯಕುಮಾರ್ ನೀಡಿದ ದೂರಿನ ಮೇರೆಗೆ ಬಸವಕಲ್ಯಾಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪತಿ ಶೇಖರ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ನೋಡಿ : ಜಾಗದ ವಿಚಾರಕ್ಕೆ ಮಾರಾಮಾರಿ ಮುಖಮೂತಿ ನೋಡದೇ ಹಲ್ಲೆ




