Bengaluru : ಕೈ ಕೊಟ್ಟ ಪ್ರೇಯಸಿ – ಡೆತ್ ನೋಟ್ ಬರೆದಿಟ್ಟು ಬಾಡಿ ಬಿಲ್ಡರ್ Suicide.

ಪ್ರೀತಿಸಿದ್ದ ಯುವತಿ ಕೈಕೊಟ್ಟ ಹಿನ್ನೆಲೆ ಮನನೊಂದು ಬಾಡಿ ಬಿಲ್ಡರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಲ್ಲಿ ನಡೆದಿದೆ.
ಕೈಕೊಟ್ಟ 3 ವರ್ಷ ಪ್ರೀತಿಸಿದ ಪ್ರೇಯಸಿ
ಮೃತನನ್ನು ಕಿರಣ್ (26) ಎಂದು ಗುರುತಿಸಲಾಗಿದೆ. ಕಿರಣ್ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಇತ್ತೀಚೆಗೆ ಆ ಯುವತಿ ತನ್ನ ಮದುವೆ ಬೇರೆ ಯುವಕನೊಂದಿಗೆ ನಿಶ್ಚಯವಾಗಿದೆ ಎಂದು ಮದುವೆಯ ಆಮಂತ್ರಣ ಪತ್ರಿಕೆ ಹಾಗೂ ಹೊಸ ಸೀರೆಯನ್ನು ತೋರಿಸಿದ್ದಾಳೆ. ಇದರಿಂದ ತೀವ್ರವಾಗಿ ಮನನೊಂದ ಕಿರಣ್ Suicideಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಇದನ್ನು ಓದಿ : ಸಿದ್ಧಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವ – 15 ದಿನದ ಜಾತ್ರೆಯಲ್ಲಿ ಏನೆಲ್ಲಾ ವಿಶೇಷ ಗೊತ್ತಾ?

ನೇಣು ಬಿಗಿದುಕೊಂಡು Suicide
ಇದರಿಂದ ಮನನೊಂದ ಕಿರಣ್ ಮನೆಗೆ ಬಂದು ರೂಂನ ಬಾಗಿಲು ಲಾಕ್ ಮಾಡಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯ ಡೋರ್ ಓಪನ್ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಬಾಡಿಬಿಲ್ಡರ್ ತೆಗೆದುಕೊಂಡಿದ್ದು ದುಡುಕಿನ ನಿರ್ಧಾರ
ಹಲವು ವರ್ಷಗಳಿಂದ ಜಿಮ್ ಟ್ರೈನರ್, ಬಾಡಿ ಬಿಲ್ಡಿಂಗ್ ಮಾಡ್ತಿದ್ದ ಕಿರಣ್, ಪ್ರಿಯತಮೆಗೆ ಪ್ರೇಮಿಗಳ ದಿನಾಚರಣೆಗೆ ಗಿಫ್ಟ್ ಕೊಡಲು ಸಹ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈ ನಡುವೆ ಪ್ರೇಯಸಿ ಮತ್ತೊಬ್ಬನ ಜೊತೆ ಮದುವೆ ವಿಷಯ ಪ್ರಸ್ತಾಪಿಸಿದ ಕಾರಣ ಆಘಾತಕೊಳ್ಳಗಾಗಿದ್ದ ಕಿರಣ್ ದುಡುಕಿನ ನಿರ್ಧಾರ ಮಾಡಿದ್ದಾರೆ.

ಡೆತ್ ನೋಟ್ ಬರೆದಿಟ್ಟು Suicide
ಇನ್ನು ಆತ್ಮಹತ್ಯೆಗೆ ಮುನ್ನ ಕಿರಣ್ ಡೆತ್ ನೋಟ್ ಬರೆದಿದ್ದು, ತನ್ನ ಆತ್ಮಹತ್ಯೆಗೆ ಪ್ರೇಯಸಿ ಹಾಗೂ ಆಕೆಯ ತಾಯಿಯೇ ಕಾರಣ ಎಂದು ಉಲ್ಲೇಖಿಸಿದ್ದಾನೆ. ಜೊತೆಗೆ ತನ್ನ ಮೊಬೈಲ್ ಫೋನ್ ಪಾಸ್ವರ್ಡ್ನನ್ನೂ ಪತ್ರದಲ್ಲಿ ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನು ನೋಡಿ : ಪಾಠ ಮಾಡುವ ಶಿಕ್ಷಕರಿಂದ ಕ್ರೌರ್ಯತೆ – ವಿದ್ಯಾರ್ಥಿಗೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ರು




