Siddaganga Jatre 2026 : ಇಂದಿನಿಂದ ಸಿದ್ಧಗಂಗಾ ಮಹಾಜಾತ್ರೆ! ದನಗಳ ಜಾತ್ರೆ–ರಥೋತ್ಸವ–ಸಾಂಸ್ಕೃತಿಕ ಹಬ್ಬದ ಸಂಪೂರ್ಣ ವಿವರ ಇಲ್ಲಿದೆ ನೋಡಿರಿ.

Siddaganga Jatre 2026 : ಭಕ್ತಿ, ಸಂಸ್ಕೃತಿ, ವ್ಯಾಪಾರ ಮತ್ತು ಸಂಭ್ರಮ. ಈ ಎಲ್ಲದರ ಸಂಗಮವಾಗಿರುವ ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವ ಅಧಿಕೃತವಾಗಿ ಆರಂಭಗೊಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿದ್ದು, ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ.
5 ದಿನದ ಜಾತ್ರೆಯಲ್ಲಿ ಏನೆಲ್ಲಾ ವಿಶೇಷ ಗೊತ್ತಾ?
ವಿಶೇಷವಾಗಿ ಜಾತ್ರೆಯ ಅಂಗವಾಗಿ ನಡೆಯುವ ದನದ ವ್ಯಾಪಾರ ಜನರ ಗಮನ ಸೆಳೆಯುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ತಳಿಯ ಸಾವಿರಾರು ದನಗಳು ಜಾತ್ರೆಗೆ ಆಗಮಿಸಿದ್ದು, 60 ಸಾವಿರದಿಂದ 16 ಲಕ್ಷ ರೂಪಾಯಿ ಮೌಲ್ಯದ ದನಗಳು ವ್ಯಾಪಾರಕ್ಕೆ ಕರೆತರಲಾಗಿದೆ. ಮುಂದಿನ 15 ದಿನಗಳ ಜಾತ್ರಾ ಅವಧಿಯಲ್ಲಿ ದನಗಳ ವ್ಯಾಪಾರ ಭರ್ಜರಿಯಾಗಿ ನಡೆಯುವ ನಿರೀಕ್ಷೆ ಇದೆ.

ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ
ಜಾತ್ರೆಯ ಅಂಗವಾಗಿ 15 ದಿನಗಳ ಕಾಲ ಕೃಷಿ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ಕಳೆದ 60 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಈ ವಸ್ತು ಪ್ರದರ್ಶನವು ಪ್ರತಿವರ್ಷವೂ ಜನರ ಅಪಾರ ಗಮನ ಸೆಳೆಯುತ್ತಿದೆ. ವಿವಿಧ ನವೀನ ಕೃಷಿ ಉಪಕರಣಗಳು, ಕೈಗಾರಿಕಾ ಉತ್ಪನ್ನಗಳು ಪ್ರದರ್ಶನದಲ್ಲಿವೆ.
ಇದನ್ನು ಓದಿ : ತುಮಕೂರಿನಲ್ಲಿ ಚಿರತೆ ಪ್ರತ್ಯಕ್ಷ.. ತೆಂಗಿನ ಮರ ಏರಿ ಕುಳಿತ ಚಿರತೆ.!

ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವ
ಜಾತ್ರೆಯ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿ ಫೆಬ್ರವರಿ 16ರಂದು ರಥೋತ್ಸವ ನಡೆಯಲಿದ್ದು, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಜಾತ್ರೆಯ ಸಂಭ್ರಮಕ್ಕೆ ಮತ್ತಷ್ಟು ಕಳೆ ನೀಡಲು ಇಂದಿನಿಂದ 15 ದಿನಗಳ ಕಾಲ 31 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಇದರ ಜೊತೆಗೆ 13 ನಾಟಕಗಳ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ.
ಒಟ್ಟಾರೆ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ, ಕಣ್ಮನ ಸೆಳೆಯುವ ದನಗಳ ಜಾತ್ರೆ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಸಿದ್ಧಗಂಗಾ ಮಠದ ಜಾತ್ರಾ ಮಹೋತ್ಸವ ಮುಂದಿನ 15 ದಿನಗಳ ಕಾಲ ನಡೆಯಲಿದ್ದು, ಲಕ್ಷಾಂತರ ಜನರು ಸಿದ್ಧಗಂಗಾ ಮಠಕ್ಕೆ ಹರಿದು ಬರುವ ನಿರೀಕ್ಷೆ ಇದೆ.

ಇದನ್ನು ನೋಡಿ : ರೆಬಲ್ ನಾಯಕ ಕೆರಳಿದ್ದು ಯಾಕೆ..?- ಹೆಂಗೆ ಕ್ಲಾಸ್ ತಗೊಂಡ್ರು ಗೊತ್ತಾ?




