Tumakuru : ತೆಂಗಿನಮರವೇರಿ ಕುಳಿತಿದ್ದ ಚಿರತೆಯೊಂದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದ್ದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

Tumakuru : ಗುಬ್ಬಿ ತಾಲ್ಲೂಕಿನ ನಿಟ್ಟೂರು ಸಮೀಪದ ಹಾರನಹಳ್ಳಿ ಗ್ರಾಮದಲ್ಲಿ ತೆಂಗಿನ ಮರ ಏರಿ ಕುಳಿತಿದ್ದ ಚಿರತೆಯೊಂದು ಗ್ರಾಮಸ್ಥರಲ್ಲಿ ಭೀತಿಯನ್ನುಂಟುಮಾಡಿದ ಘಟನೆ ನಡೆದಿದೆ.
ತೆಂಗಿನ ಮರ ಏರಿ ಕುಳಿತ ಚಿರತೆ: ಗ್ರಾಮಸ್ಥರಲ್ಲಿ ಆತಂಕ
ಆಹಾರ ಹುಡುಕುತ್ತಾ ಹಾರನಹಳ್ಳಿ ಗ್ರಾಮದತ್ತ ಬಂದ ಚಿರತೆ ಗ್ರಾಮ ಸುತ್ತಮುತ್ತ ಸಂಚರಿಸಿ ಬಳಿಕ ತೋಟವೊಂದರ ತೆಂಗಿನ ಮರ ಏರಿ ವಿಶ್ರಾಂತಿ ಪಡೆಯುತ್ತಿತ್ತು. ಇನ್ನು ತೋಟದ ಮಾಲೀಕ ತೋಟಕ್ಕೆ ಬಂದ ವೇಳೆ ತೆಂಗಿನ ಮರದಿಂದ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಮೇಲಕ್ಕೆ ನೋಡಿದಾಗ ಚಿರತೆ ಕಂಡುಬಂದಿದೆ.
ಚಿರತೆ ಕಂಡ ತಕ್ಷಣ ಆತಂಕಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಗ್ರಾಮಸ್ಥರ ಚಲನವಲನ ಗಮನಿಸಿದ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ.
ಚಿರತೆ ಹಾವಳಿ: ಗ್ರಾಮಕ್ಕೆ ಬೋನ್ ಅಳವಡಿಕೆ
ಇದನ್ನೂ ಓದಿ : ಹೆತ್ತೇನಹಳ್ಳಿ ದೇವಸ್ಥಾನದಲ್ಲಿ ಕಳ್ಳತನ.! ಚಿನ್ನಾಭರಣ ದೋಚಿ ಕಳ್ಳರು ಎಸ್ಕೇಪ್.!
ಗ್ರಾಮದ ಸಮೀಪ ಚಿರತೆ ಕಾಣಿಸಿಕೊಂಡಿರುವುದರಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆ ಗ್ರಾಮಕ್ಕೆ ಹೋಗುವ ಎರಡು ಮಾರ್ಗಗಳಲ್ಲಿ ಬೋನ್ ಅಳವಡಿಸಿದೆ.
ಆದರೂ ಕತ್ತಲಾದ ನಂತರ ಮನೆಯಿಂದ ಹೊರಬರಲು ಗ್ರಾಮಸ್ಥರು ಹಿಂಜರಿಯುತ್ತಿದ್ದು, ಹೊಲಗಳಿಗೆ ತೆರಳಲು ಭಯಪಡುತ್ತಿದ್ದಾರೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
MUST WATCH : ಹೆತ್ತೇನಹಳ್ಳಿ ದೇವಾಲಯಕ್ಕೆ ಕನ್ನ ಹಾಕಿದ ಖದೀಮರು – ತಡರಾತ್ರಿ ಬೇಗ ಹೊಡೆದು ಚಿನ್ನಾಭರಣ ದೋಚಿ ಎಸ್ಕೇಪ್




