Cricket : 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ7 ರಿಂದ ಮಾರ್ಚ್ 8ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಭ್ಯಾಸ ಪಂದ್ಯಗಳನ್ನು ಐಸಿಸಿ ಪ್ರಕಟಿಸಿದೆ.

Cricket : ಬಹುನಿರೀಕ್ಷಿತ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಆರಂಭಕ್ಕೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿಯಿದೆ. ಫೆಬ್ರವರಿ 7ರಂದು ವಿಶ್ವಕಪ್ ಅಧಿಕೃತವಾಗಿ ಆರಂಭವಾಗಲಿದ್ದು, ಅದಕ್ಕೂ ಮುನ್ನ ಎಲ್ಲಾ ತಂಡಗಳು ಅಭ್ಯಾಸ ಪಂದ್ಯಗಳಲ್ಲಿ ತೊಡಗಿಕೊಳ್ಳಲಿವೆ.
2026ರ ಐಸಿಸಿ ಟಿ20 ವಿಶ್ವಕಪ್ಗೆ ಕ್ಷಣಗಣನೆ
ಫೆಬ್ರವರಿ 2ರಿಂದ 6ರವರೆಗೆ ಅಭ್ಯಾಸ ಪಂದ್ಯಗಳು ನಡೆಯಲಿದ್ದು, ಟೂರ್ನಿಗೆ ಸಿದ್ಧತೆ ನಡೆಸಲು ತಂಡಗಳಿಗೆ ಇದು ಮಹತ್ವದ ಅವಕಾಶವಾಗಲಿದೆ. ಭಾರತೀಯ ಕ್ರಿಕೆಟ್ ತಂಡವು ಫೆಬ್ರವರಿ 4ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭ್ಯಾಸ ಪಂದ್ಯವನ್ನು ಆಡಲಿದೆ.
ಇದನ್ನೂ ಓದಿ : ಮೂರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ..!

ಇದೇ ವೇಳೆ ಭಾರತ ತಂಡದ ಜೊತೆಗೆ ಭಾರತ ಎ ತಂಡವೂ ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸಲಿದೆ. ಪ್ರಮುಖ ಆಟಗಾರರ ಫಾರ್ಮ್, ಸಂಯೋಜನೆ ಹಾಗೂ ತಂತ್ರಗಳನ್ನು ಪರೀಕ್ಷಿಸುವ ದೃಷ್ಟಿಯಿಂದ ಈ ಅಭ್ಯಾಸ ಪಂದ್ಯಗಳು ಅತ್ಯಂತ ಮಹತ್ವ ಪಡೆದುಕೊಂಡಿವೆ.
ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ತಂಡಗಳ ಸಿದ್ಧತೆಗಳು ತೀವ್ರಗೊಂಡಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಟೂರ್ನಿಯ ಕುರಿತ ಉತ್ಸಾಹ ದಿನೇದಿನೇ ಹೆಚ್ಚುತ್ತಿದೆ.
MUST WATCH : ಕೈ ತೆಕ್ಕೆಗೆ ಜಾರಿದ ಚಿಮುಲ್ ಅಧಿಕಾರ – ಜೆಡಿಎಸ್ ಮತ್ತು ಬಿಜೆಪಿ ನಿರಾಶೆಯ ಜೊತೆ ಸಿಹಿ




