Bagalkote : ತಾಯಿಯೊಬ್ಬಳು ತನ್ನ ಮೂರು ಮಕ್ಕಳಿಗೆ ನೇಣು ಹಾಕಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ ದಾರುಣ ಘಟನೆ ನಡೆದಿದೆ.

Bagalkote : ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿಯೊಬ್ಬಳು ಹೆತ್ತ ಮೂರು ಮಕ್ಕಳನ್ನ ನೇಣು ಹಾಕಿ ಕೊಂದು, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ನಡೆದಿದೆ.
ಮೂವರು ಮಕ್ಕಳಿಗೆ ನೇಣು ಹಾಕಿ ತಾಯಿ ಆತ್ಮಹತ್ಯೆಗೆ ಯತ್ನ
ಭಾನುವಾರ ಈ ಮನಕಲುಕವ ಘಟನೆ ನಡೆದಿದ್ದು, ರೂಪಾ ಹನುಮಂತ ಗೌಡರ (28) ಎಂಬ ಮಹಿಳೆ ಈ ಕೃತ್ಯ ಎಸಗಿದ್ದಾರೆ. ಘಟನೆಯಲ್ಲಿ ಸಮೃದ್ಧಿ ಹನುಮಂತಪ್ಪ ಗೌಡರ (5), ಪ್ರೀತಂ ಹನುಮಂತಪ್ಪ ಗೌಡರ (4) ಹಾಗೂ ಸುಕ್ಷೀತ ಹನುಮಂತಪ್ಪ ಗೌಡರ (2) ಎಂಬ ಮೂವರು ಮಕ್ಕಳು ಮೃತಪಟ್ಟಿದ್ದಾರೆ.

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ
ಆರೋಪಿತ ತಾಯಿ ಮನೆಯಲ್ಲಿಯೇ ಮಕ್ಕಳಿಗೆ ನೇಣು ಹಾಕಿ ಹತ್ಯೆ ಮಾಡಿದ ಬಳಿಕ ರೂಪಾ ಗೌಡರ ವಿಷ ಸೇವಿಸಿದ್ದು, ತಕ್ಷಣವೇ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಸ್ತುತ ಮಹಿಳೆ ರೂಪಾ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮನೆಯಲ್ಲಿ ಅತ್ತೆ–ಸೊಸೆ ನಡುವೆ ನಡೆದ ಜಗಳವೇ ಈ ದುರ್ಘಟನೆಗೆ ಕಾರಣ ಎನ್ನಲಾಗ್ತಿದೆ.
ಇದನ್ನೂ ಓದಿ : ಮಹಿಳೆಯ ಅತ್ಯಾಚಾರವೆಸಗಿ ಕೊಲೆಗೈದು ತಾನೂ ಸತ್ತ ವ್ಯಕ್ತಿ!

ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ರೂಪಾ ಗೌಡರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಅತ್ತೆ ರೇಣವ್ವಳ ವಿರುದ್ಧ ಕಿರುಕುಳ ನೀಡಿದ ಆರೋಪದಡಿ ದೂರು ದಾಖಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
MUST WATCH : ವರನ ಮೇಲೆ ಚಾಕು ಇರಿತ ಕೇಸ್ – ತನಿಖೆಯ ವೇಳೆ ಪೊಲೀಸರೇ ಶಾಕ್




