ಬ್ಯಾಟಿಂಗ್ ಮುಗಿಸಿ ಪೆವಿಲಿಯನ್ ನಲ್ಲಿ ಕುಳಿತಿದ್ದ ಯುವ ಕ್ರಿಕೆಟಿಗನಿಗೆ Heart Attack – ಸ್ಥಳದಲ್ಲೇ ಸಾವು.

ಕ್ರಿಕೆಟ್ ಮೈದಾನದಲ್ಲಿಯೇ ಆಟಗಾರರು ಸಾವನ್ನಪ್ಪಿರುವ ಘಟನೆ ಕೇಳಿರುವುದು ತೀರಾ ಕಡಿಮೆ ಆಗೊಮ್ಮೆ ಈಗೊಮ್ಮೆ ಎಲ್ಲೋ ಕೇಳುತ್ತಿದ್ದ ಇಂತಹ ಬೇಸರದ ಸಂಗತಿ ಕಳೆದೊಂದು ವರ್ಷದಿಂದ ಪದೇ ಪದೇ ಕೇಳುವಂತಾಗಿದೆ.
ಭಾರತೀಯ ಕ್ರಿಕೆಟ್ ಲೋಕಕ್ಕೆ ಆಘಾತ!
ಹೌದು, ಮಿಜೋರಾಂನ ಮಾಜಿ ರಣಜಿ ಕ್ರಿಕೆಟಿಗ ಕೆ. ಲಾಲ್ರೆಮ್ರುವಾಟಾ ಗುರುವಾರ ಸ್ಥಳೀಯ ಕ್ರಿಕೆಟ್ ಪಂದ್ಯದ ವೇಳೆ Heart Attack ನಿಂದ ಮೈದಾನದಲ್ಲಿಯೇ ಕುಸಿದು ಬಿದ್ದು ನಿಧನರಾಗಿದ್ದಾರೆ. ಐಜ್ವಾಲ್ ಬಳಿಯ ಸಿಹ್ಮುಯಿ ಪ್ರದೇಶದಲ್ಲಿ ನಡೆಯುತ್ತಿದ್ದ 2ನೇ ಡಿವಿಷನ್ ಟೂರ್ನಮೆಂಟ್ನಲ್ಲಿ ಅವರು ವೈಂಗ್ನುವೈ ರೈಡರ್ಸ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದರು.
ಇದನ್ನು ಓದಿ : ತುಮಕೂರಿಗರಿಗೆ ಗುಡ್ನ್ಯೂಸ್ – Metro ಮಾರ್ಗದ ಕಾಮಗಾರಿ ಆರಂಭ

Heart Attack ನಿಂದ ಕ್ರಿಕೆಟಿಗ ಸಾವು
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮಿಜೋರಾಂ ಕ್ರಿಕೆಟ್ ಸಂಸ್ಥೆ (CAM) ಲಾಲ್ರೆಮ್ರುವಾಟಾ ಎರಡು ಬಾರಿ ರಣಜಿ ಟ್ರೋಫಿ ಹಾಗೂ ಏಳು ಬಾರಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿದಲ್ಲಿ ಮಿಜೋರಾಂನ್ನು ಪ್ರತಿನಿಧಿಸಿದ್ದರು. ನಿವೃತ್ತಿಯ ನಂತರವೂ ಅವರು ರಾಜ್ಯಮಟ್ಟದ ಪಂದ್ಯಾವಳಿಗಳು ಮತ್ತು ಸ್ಥಳೀಯ ಕ್ಲಬ್ಗಳಲ್ಲಿ ಕ್ರಿಕೆಟ್ಗೆ ಸಕ್ರಿಯರಾಗಿದ್ದರು ಎಂದು ತಿಳಿಸಿದೆ.
ಇದೇ ವೇಳೆ ಮಿಜೋರಾಂನ ಕ್ರೀಡಾ ಮತ್ತು ಯುವಜನ ಸೇವೆಗಳ ಸಚಿವ ಲಾಲ್ಘಿಂಗ್ಲೋವಾ ಹ್ಮಾರ್ ಲಾಲ್ರೆಮ್ರುತಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇದನ್ನು ನೋಡಿ : ತುಮಕೂರಲ್ಲಿ ಭೀಕರ ಅಪಘಾತ – 7 ವರ್ಷದ ಮಗು ಸೇರಿ ನಾಲ್ವರ ಸಾವು




