ಬಿಜೆಪಿ ಕಾರ್ಯಕರ್ತೆ Sujatha Handi ಯ ಮೃಗೀಯ ವರ್ತನೆಯ ವಿಡಿಯೋ ಭಾರೀ ವೈರಲ್.

ಹುಬ್ಬಳ್ಳಿಯಲ್ಲಿ BJP ಕಾರ್ಯಕರ್ತೆಯಾದ ಸುಜಾತ ಹಂಡಿ ಅವರನ್ನು ವಿಬಸ್ತ್ರಗೊಳಿಸಿ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬ ಆರೋಪದ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಈ ಹಿಂದೆ ಸುಜಾತ ಹಂಡಿ ಅವರು ನಡೆಸಿದ್ದಾರೆ ಎನ್ನಲಾದ ಕ್ರೌರ್ಯದ ವಿಡಿಯೋಗಳು Social Media ದಲ್ಲಿ Viral ಆಗಿವೆ.
ನೋಟೀಸ್ ಜಾರಿ
ಹೌದು Sujatha Handi ಅವರ ಕುಟುಂಬಸ್ಥರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಸುಜಾತ ಹಂಡಿ ಅವರ ಸಹೋದರ ಮರಿಯಾದಾಸ್ ಕಮಲಮ್ಮ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಹುಬ್ಬಳ್ಳಿಯ ಕೇಶವಪುರ ಠಾಣೆ ಪೊಲೀಸರು ಈ ನೋಟಿಸ್ ನೀಡಿದ್ದು, ಕುಟುಂಬಸ್ಥರಿಂದ ಸಹಿ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನು ಓದಿ : Toxic ಸಿನಿಮಾಗೆ ಯೂಟ್ಯೂಬ್ ನಲ್ಲಿ ರೆಕಾರ್ಡ್ ವೀವ್ಸ್ ! ಇದು ಯಶ್ ಹವಾ

ಪ್ರಕರಣ ದಾಖಲು
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಜನವರಿ 2ರಂದು ಪ್ರಶಾಂತ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಸುಜಾತ ಹಂಡಿ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಸುಜಾತ ಹಂಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆಗೆ ಒಳಪಡಬೇಕೆಂದು ಸೂಚನೆ
ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇತರ ಆರೋಪಿಗಳಿಗೆ ಕೇಶವಪುರ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಠಾಣೆಗೆ ಹಾಜರಾಗಿ ವಿಚಾರಣೆಗೆ ಒಳಪಡಬೇಕು ಎಂದು ಸೂಚಿಸಿದ್ದಾರೆ.

ಯಾವ ಸತ್ಯ ಹೊರಬರಲಿದೆ
ಒಟ್ಟಿನಲ್ಲಿ, ಒಂದು ಕಡೆ ಪೊಲೀಸ್ ಹಲ್ಲೆ ಆರೋಪ, ಮತ್ತೊಂದೆಡೆ ವೈರಲ್ ಆಗಿರುವ ಕ್ರೌರ್ಯ ವಿಡಿಯೋಗಳು – ಈ ಎರಡೂ ಅಂಶಗಳು ಪ್ರಕರಣವನ್ನು ಮತ್ತಷ್ಟು ಸಂಚಲನಕ್ಕೆ ಕಾರಣವಾಗಿದ್ದು, ಮುಂದಿನ ತನಿಖೆಯಲ್ಲಿ ಯಾವ ಸತ್ಯ ಹೊರಬರಲಿದೆ ಎಂಬುದು ಗೊತ್ತಾಗಬೇಕಿದೆ.

ಇದನ್ನು ನೋಡಿ : School Holiday|ಮುಂದಿನ ಗುರುವಾರ ಶಾಲಾ-ಕಾಲೇಜುಗಳಿಗೆ ರಜೆ, ಸರ್ಕಾರದಿಂದ ಮಹತ್ವದ ಆದೇಶ




