Bengaluru ವೈಟ್ಫೀಲ್ಡ್ ಪೊಲೀಸ್ ಠಾಣೆ (Whitefield Police Station) ವ್ಯಾಪ್ತಿಯ ನಲ್ಲೂರುಹಳ್ಳಿಯಲ್ಲಿ ಸ್ನೇಹಿತನ ಪತ್ನಿಯ ಮೇಲಿನ ಸೇಡಿನಿಂದ ಆಕೆಯ 6 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಭೀಕರ ಘಟನೆ ನಡೆದಿದೆ.

Bengaluru ನಲ್ಲಿ ಆರೋಪಿ ಯೂಸಫ್ ಅಂದರ್
ಹತ್ಯೆಯಾದ ಬಾಲಕಿಯನ್ನು ಶನಾದ್ (6) ಎಂದು ಗುರುತಿಸಲಾಗಿದೆ. ಈ ಅಮಾನುಷ ಕೃತ್ಯ ಎಸಗಿದ ಆರೋಪಿಯನ್ನು ಯೂಸಫ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಯೂಸಫ್ಗೆ ಬಾಲಕಿಯ ತಾಯಿಯ ಮೇಲಿನ ವೈಯಕ್ತಿಕ ದ್ವೇಷವೇ ಈ ಕೊಲೆಗೆ ಕಾರಣವಾಗಿದೆ. ಇದೇ ಕಾರಣಕ್ಕೆ ನಿರಪರಾಧ ಮಗುವನ್ನು ಗುರಿಯಾಗಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಯೂಸಫ್ ಹಾಗೂ ಬಾಲಕಿಯ ತಂದೆ ಇಜಾಮುಲ್ ಶೇಖ್ ಇಬ್ಬರೂ ಪಶ್ಚಿಮ ಬಂಗಾಳ ಮೂಲದವರು. ಉದ್ಯೋಗದ ಹುಡುಕಾಟದಲ್ಲಿ ಬೆಂಗಳೂರಿಗೆ ಬಂದು, ವೈಟ್ಫೀಲ್ಡ್ನ ನಲ್ಲೂರುಹಳ್ಳಿಯಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರು.
ಇದನ್ನು ಓದಿ : ಆಸ್ಕರ್ ಅಂಗಳಕ್ಕೆ Kantara 1 ಸಿನಿಮಾ ಎಂಟ್ರಿ!
ಮಹಿಳೆಯೊಂದಿಗೆ ಗಲಾಟೆ ನಡೆದಿತ್ತು
ಯೂಸಫ್ ಆಗಾಗ ತನ್ನ ಸ್ನೇಹಿತನ ಮನೆಗೆ ಹೋಗುತ್ತಿದ್ದು, ಈ ವೇಳೆ ಬಾಲಕಿಯ ತಾಯಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದನು. ಇದೇ ದ್ವೇಷವು ಕೊಲೆಗೀಡಾಗಲು ಕಾರಣವಾಯಿತು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ಆರೋಪಿ ಯೂಸಫ್ ಬಾಲಕಿಯನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪರಿಚಯ ಇದ್ದ ಕಾರಣ, ಶನಾದ್ ಯಾವುದೇ ಸಂಶಯವಿಲ್ಲದೆ ಆತನ ಹಿಂದೆ ತೆರಳಿದ್ದಳು.
ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಯೂಸಫ್, ಕತ್ತು ಹಿಸುಕಿ ಕೊಲೆ ಮಾಡಿ, ಮೃತದೇಹವನ್ನು ಚರಂಡಿಗೆ ಬಿಸಾಡಿ ಪರಾರಿಯಾಗಿದ್ದಾನೆ
ಮಗು ಕಾಣಿಸದೇ ಇದ್ದಾಗ ಪೋಷಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ವ್ಯಾಪಕ ಹುಡುಕಾಟ ನಡೆಸಿದ ಬಳಿಕ ಬಾಲಕಿಯ ಶವ ಪತ್ತೆಯಾಗಿದ್ದು, ಪ್ರಕರಣದ ಸತ್ಯಾಂಶ ಬಹಿರಂಗವಾಗಿದೆ.
ಇದನ್ನು ನೋಡಿ : ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಸಮರ: ವಿಶೇಷ ಅಧಿವೇಶನ, ರಾಜ್ಯಾದ್ಯಂತ ಬೃಹತ್ ಪಾದಯಾತ್ರೆ..!




