ದಾಖಲೆ ಬರೆದ Toxic ರಾಯಲ್ ಎಂಟ್ರಿ : ಧುರಂಧರ್ 2 ಮುಂದೂಡಿಕೆಯಾಗುತ್ತಾ?

ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ಸಂಭ್ರಮಕ್ಕೆ ಬಿಡುಗಡೆಯಾದ ‘ಟಾಕ್ಸಿಕ್’ ಸಿನಿಮಾದ ಗ್ಲಿಂಪ್ಸ್ ನಿರೀಕ್ಷೆಗೂ ಮೀರಿದ ಹೈಪ್ ಸೃಷ್ಟಿಸಿದೆ. ಗ್ಲಿಂಪ್ಸ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದು, ಸೋಷಿಯಲ್ ಮೀಡಿಯಾದಾದ್ಯಂತ Trending ಆಗಿದೆ.

ದಾಖಲೆ ಬರೆದ Toxic ರಾಯಲ್ ಎಂಟ್ರಿ
ಯೂಟ್ಯೂಬ್ನಲ್ಲಿ ಬಿಡುಗಡೆಯಾದ 22 ಗಂಟೆಗಳಲ್ಲಿ ಬರೋಬ್ಬರಿ 48 ಮಿಲಿಯನ್ ವೀವ್ಸ್ ಪಡೆದುಕೊಂಡಿರುವ Toxic ಗ್ಲಿಂಪ್ಸ್, ಕನ್ನಡ ಸಿನಿಮಾಗಳ ಇತಿಹಾಸದಲ್ಲೇ ಅಪರೂಪದ ಸಾಧನೆ ಎನ್ನಬಹುದು. ಜೊತೆಗೆ ಎಲ್ಲಾ Social Media ವೇದಿಕೆಗಳಲ್ಲೂ ಭಾರೀ ಚರ್ಚೆ ಹುಟ್ಟುಹಾಕಿದೆ.

ಇದನ್ನು ಓದಿ : ಆಸ್ಕರ್ ಅಂಗಳಕ್ಕೆ Kantara 1 ಸಿನಿಮಾ ಎಂಟ್ರಿ!
ಎಲ್ಲೆಲ್ಲೂ Toxic ಹವಾ
ಟ್ವಿಟ್ಟರ್ (X) ನಲ್ಲಿ ‘ಟಾಕ್ಸಿಕ್’ ಇವತ್ತಿಗೂ ಟ್ರೆಂಡಿಂಗ್ ಲಿಸ್ಟ್ನಲ್ಲಿ ಲೀಡಿಂಗ್ ಸ್ಥಾನದಲ್ಲಿದ್ದು, ಇದುವರೆಗೂ 5.50 ಲಕ್ಷಕ್ಕೂ ಅಧಿಕ ಪೋಸ್ಟ್ಗಳು ಸಿನಿಮಾವನ್ನು ಕುರಿತಾಗಿ Upload ಆಗಿವೆ. ಇದು ಕನ್ನಡ ಚಿತ್ರರಂಗದ ಪಾಲಿಗೆ ದೊಡ್ಡ ದಾಖಲೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮುಂದೂಡಿಕೆಯಾಗುತ್ತಾ ‘ಧುರಂಧರ್ 2’?
ಇದೇ ಸಂದರ್ಭದಲ್ಲಿ ಕುತೂಹಲ ಕೆರಳಿಸುವ ಮತ್ತೊಂದು ಬೆಳವಣಿಗೆ ನಡೆದಿದೆ. ‘ಟಾಕ್ಸಿಕ್’ ಬಿಡುಗಡೆ ದಿನವೇ ‘ಧುರಂಧರ್ 2’ ಸಿನಿಮಾ ಕೂಡ ಬಿಡುಗಡೆ ಆಗಬೇಕಿದೆ. ಆದರೆ ಟಾಕ್ಸಿಕ್ ಗ್ಲಿಂಪ್ಸ್ ಬಿಡುಗಡೆಯಾದ ಬಳಿಕ ಉಂಟಾದ ಭಾರೀ ಹೈಪ್ ಹಿನ್ನೆಲೆಯಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ‘ಧುರಂಧರ್ – ಟಾಕ್ಸಿಕ್ ಕ್ಲ್ಯಾಶ್’ ಬಗ್ಗೆ ಭರ್ಜರಿ ಚರ್ಚೆಗಳು ನಡೆಯುತ್ತಿವೆ.

ಮುಂದಿನ ನಡೆ ಏನು?
ಧುರಂಧರ್ ಟೀಂ ಸಿನಿಮಾ ಮುಂದೂಡಿದರೆ ಒಳ್ಳೆಯ ಯೋಚನೆ ಅನ್ನುವಂತಹ ಪೋಸ್ಟ್ಗಳು ಹರಿದಾಡ್ತಿದ್ದು, ಧುರಂಧರ್ ಮುಂದಿನ ನಡೆ ಏನು ಅನ್ನೋದು ಎಲ್ಲರ ಕುತೂಹಲ ಆಗಿದೆ.

ಇದನ್ನು ನೋಡಿ : ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಸಮರ: ವಿಶೇಷ ಅಧಿವೇಶನ, ರಾಜ್ಯಾದ್ಯಂತ ಬೃಹತ್ ಪಾದಯಾತ್ರೆ..!




