Dina Bhavishay : 2026 ಜನವರಿ 9ರ ಶುಕ್ರವಾರವಾದ ಇಂದು, ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

Dina Bhavishay :ಇಂದು ಶೋಭನ ಮತ್ತು ರವಿ ಯೋಗವು ಉತ್ತರ ಫಲ್ಗುಣಿ ನಕ್ಷತ್ರದೊಂದಿಗೆ ಸಂಯೋಜಿತವಾಗಿ ರೂಪುಗೊಳ್ಳಲಿದೆ. ಎಲ್ಲಾ ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.
ಮೇಷ ರಾಶಿ
ಇಂದು ಮೇಷ ರಾಶಿಗೆ ತುಂಬಾ ಶುಭ ದಿನವಾಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ನೀವು ಕುಟುಂಬ ಮತ್ತು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರೊಂದಿಗೆ ಅನಗತ್ಯ ವಾದಗಳನ್ನು ತಪ್ಪಿಸಿ.
ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಾಣುವಿರಿ. ಆದರೆ, ಇಂದು ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಬುದ್ಧಿವಂತಿಕೆಯಿಂದ ಹಣವನ್ನು ಖರ್ಚು ಮಾಡಿ. ನಿಮ್ಮ ಸಂಗಾತಿಯ ಆರೋಗ್ಯದ ಕಡೆ ಗಮನ ಕೊಡಿ
ವೃಷಭ ರಾಶಿ
ಇಂದು ನಿಮಗೆ ಸಾಮಾನ್ಯ ದಿನವಾಗಿದ್ದು, ವೃತ್ತಿ ಜೀವನದಲ್ಲಿ ಕೆಲಸದ ಒತ್ತಡ ಹೆಚ್ಚು ಇರಬಹುದು. ಸಭೆಗಳಲ್ಲಿ ನಿಮ್ಮ ಅಭಿಪ್ರಾಯವನ್ನು ಧೈರ್ಯವಾಗಿ ವ್ಯಕ್ತಪಡಿಸಿದರೆ ಮೆಚ್ಚುಗೆ ಸಿಗುತ್ತದೆ ಮತ್ತು ಕೆಲವರಿಗೆ ಬಡ್ತಿಯ ಅವಕಾಶವೂ ದೊರೆಯಬಹುದು.
ಹಣಕಾಸಿನ ವಿಷಯಗಳಲ್ಲಿ ಅದೃಷ್ಟ ಸಹಕಾರ ನೀಡಿದ್ದು, ಅಗತ್ಯ ವಸ್ತುಗಳ ಖರೀದಿ ಸಾಧ್ಯ. ಕುಟುಂಬ ಹಾಗೂ ವೈವಾಹಿಕ ಜೀವನದಲ್ಲಿ ಶಾಂತಿ ಮತ್ತು ಸಂತೋಷ ಕಂಡುಬರುತ್ತದೆ. ವಿಷ್ಣು ಸಹಸ್ತ್ರನಾಮ ಪಠಿಸುವುದು ಶುಭ.
ಮಿಥುನ ರಾಶಿ
ಇಂದು ಅಧಿಕ ಖರ್ಚುಗಳಿಂದ ಎಚ್ಚರಿಕೆಯಿಂದಿರಬೇಕು; ಅನಗತ್ಯ ವ್ಯಯವನ್ನು ತಪ್ಪಿಸಿ. ಅಧಿಕಾರಿಗಳ ಬೆಂಬಲದಿಂದ ಉದ್ಯೋಗ ಹಾಗೂ ವ್ಯವಹಾರದಲ್ಲಿ ಪ್ರಗತಿ ಸಾಧ್ಯವಾಗಿದ್ದು, ಕಚೇರಿಯ ಅನಗತ್ಯ ಚರ್ಚೆಗಳಿಂದ ದೂರವಿರುವುದು ಒಳಿತು.
ಕಠಿಣ ಪರಿಶ್ರಮದಿಂದ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು ಸಿಗಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿಟ್ಟು, ಹಿರಿಯ ಬ್ರಾಹ್ಮಣರಿಗೆ ದಾನ ಮಾಡಿದರೆ ಶುಭ.
ಕಟಕ ರಾಶಿ
ಇಂದು ಕೆಲಸದ ಜವಾಬ್ದಾರಿಗಳು ಹೆಚ್ಚಾದರೂ ಉದ್ಯೋಗ ಹಾಗೂ ವ್ಯಾಪಾರಕ್ಕೆ ವಾತಾವರಣ ಅನುಕೂಲಕರವಾಗಿರುತ್ತದೆ.
ಅಧಿಕಾರಿಗಳ ಬೆಂಬಲದಿಂದ ಬಾಕಿ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಉದ್ಯೋಗದಲ್ಲಿ ಸ್ಥಳ ಬದಲಾವಣೆ ಕೂಡ ಸಂಭವಿಸಬಹುದು.
ಕೌಟುಂಬಿಕ ಜೀವನದಲ್ಲಿ ಕೆಲ ಅಸಮಾಧಾನಗಳು ಕಾಣಿಸಿಕೊಳ್ಳಬಹುದಾದ್ದರಿಂದ ತಾಳ್ಮೆ ಅಗತ್ಯ. ಹಣಕಾಸಿನ ನಿರ್ಧಾರಗಳಲ್ಲಿ ಎಚ್ಚರಿಕೆ ವಹಿಸಿ, ಸಂಗಾತಿಯ ಆರೋಗ್ಯದ ಕಡೆ ಗಮನ ಕೊಡಿ. ಇಂದು ಮೀನುಗಳಿಗೆ ಆಹಾರ ನೀಡುವುದು ಶುಭ.
ಸಿಂಹ ರಾಶಿ
ಇಂದು ಕೆಲಸದ ಜವಾಬ್ದಾರಿಗಳು ಹೆಚ್ಚಾದರೂ ಉದ್ಯೋಗ ಹಾಗೂ ವ್ಯಾಪಾರಕ್ಕೆ ವಾತಾವರಣ ಅನುಕೂಲಕರವಾಗಿರುತ್ತದೆ.
ಅಧಿಕಾರಿಗಳ ಬೆಂಬಲದಿಂದ ಬಾಕಿ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಉದ್ಯೋಗದಲ್ಲಿ ಸ್ಥಳ ಬದಲಾವಣೆ ಕೂಡ ಸಂಭವಿಸಬಹುದು.
ಕೌಟುಂಬಿಕ ಜೀವನದಲ್ಲಿ ಕೆಲ ಅಸಮಾಧಾನಗಳು ಕಾಣಿಸಿಕೊಳ್ಳಬಹುದಾದ್ದರಿಂದ ತಾಳ್ಮೆ ಅಗತ್ಯ. ಹಣಕಾಸಿನ ನಿರ್ಧಾರಗಳಲ್ಲಿ ಎಚ್ಚರಿಕೆ ವಹಿಸಿ, ಸಂಗಾತಿಯ ಆರೋಗ್ಯದ ಕಡೆ ಗಮನ ಕೊಡಿ. ಇಂದು ಮೀನುಗಳಿಗೆ ಆಹಾರ ನೀಡುವುದು ಶುಭ.
ಕನ್ಯಾ ರಾಶಿ
ಇಂದು ಕನ್ಯಾ ರಾಶಿಗೆ ಸಂಪತ್ತು ವೃದ್ಧಿಯಾಗುವ ಯೋಗವಿದ್ದು, ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ.
ಆದರೆ ಆತ್ಮವಿಶ್ವಾಸದ ಕೊರತೆ ಮತ್ತು ಅಜ್ಞಾತ ಭಯದಿಂದ ಮನಸ್ಸು ಅಶಾಂತವಾಗಬಹುದು. ಉದ್ಯೋಗದಲ್ಲಿ ಸ್ಥಳ ಬದಲಾವಣೆ ಹಾಗೂ ಜವಾಬ್ದಾರಿಗಳ ಹೆಚ್ಚಳ ಸಾಧ್ಯವಾಗಿದ್ದು, ಕೆಲಸದ ನಿಮಿತ್ತ ಪ್ರಯಾಣವೂ ಇರಬಹುದು.
ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ದೊರೆಯಬಹುದು. ಕೋಪವನ್ನು ನಿಯಂತ್ರಿಸಿ, ಆತುರದ ನಿರ್ಧಾರಗಳನ್ನು ತಪ್ಪಿಸಿ ಮತ್ತು ಪೋಷಕರ ಆರೋಗ್ಯದ ಕಡೆ ಗಮನ ಕೊಡಿ. ಇಂದು ಲಕ್ಷ್ಮೀ ದೇವಿಯನ್ನು ಆರಾಧಿಸುವುದು ಶುಭ.
ತುಲಾ ರಾಶಿ
ಈ ದಿನ ನಿಮಗೆ ಶುಭ ಫಲವನ್ನು ತಂದುಕೊಡಲಿದೆ. ಕೆಲಸದ ಸ್ಥಳದಲ್ಲಿ ಬದಲಾವಣೆಗಳು ಸಂಭವಿಸಬಹುದು ಮತ್ತು ಉದ್ಯೋಗ ಹುಡುಕಾಟದಲ್ಲಿರುವವರಿಗೆ ಹೊಸ ಅವಕಾಶ ಸಿಗಲಿದೆ.
ಆದಾಯದ ಹೊಸ ಮೂಲಗಳು ನಿರ್ಮಾಣವಾಗುತ್ತವೆ, ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಸಾಮಾಜಿಕ ಗೌರವ ಮತ್ತು ಆತ್ಮವಿಶ್ವಾಸ ಹೆಚ್ಚಾಗಿ, ಪರಿಶ್ರಮದ ಫಲವಾಗಿ ಕೆಲಸ ಹಾಗೂ ವ್ಯಾಪಾರದಲ್ಲಿ ಉತ್ತಮ ಯಶಸ್ಸು ದೊರೆಯುತ್ತದೆ. ಇಂದು ವಿಷ್ಣುವನ್ನು ಆರಾಧಿಸುವುದು ಶುಭ.
ವೃಶ್ಚಿಕ ರಾಶಿ
ಇಂದು ವೃತ್ತಿಪರ ಜೀವನದಲ್ಲಿ ಪ್ರಗತಿಯ ಅವಕಾಶಗಳು ಹೆಚ್ಚಾಗಿವೆ. ತಾಯಿಯ ನೆರವಿನಿಂದ ಆರ್ಥಿಕ ಲಾಭ ಸಾಧ್ಯವಾಗಿದ್ದು, ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು.
ಕೌಟುಂಬಿಕ ಜೀವನದಲ್ಲಿ ಸಂತೋಷ ಹೆಚ್ಚಾದರೂ, ಕುಟುಂಬದ ಜವಾಬ್ದಾರಿಗಳು ಹಾಗೂ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಸಂಗಾತಿಯಿಂದ ಬೆಂಬಲ ಸಿಗುತ್ತದೆ; ಹೊಸ ಆದಾಯದ ಮೂಲಗಳು ನಿರ್ಮಾಣವಾಗಬಹುದು. ವಾಹನ ನಿರ್ವಹಣೆಗೆ ಖರ್ಚಾಗಬಹುದಾದ್ದರಿಂದ ಹಣವನ್ನು ಬುದ್ಧಿವಂತಿಕೆಯಿಂದ ವ್ಯಯಿಸಿ.
ಧನು ರಾಶಿ
ಇಂದು ಧನು ರಾಶಿಯವರಿಗೆ ಶುಭ ದಿನವಾಗಿದ್ದು, ಪ್ರೇಮ ಮತ್ತು ದಾಂಪತ್ಯ ಜೀವನದಲ್ಲಿ ಸಂತೋಷ ಕಾಣಿಸುತ್ತದೆ.
ವ್ಯಕ್ತಿತ್ವದಲ್ಲಿ ಸುಧಾರಣೆ ಆಗಿ, ಕೆಲಸಕ್ಕೆ ಸಂಬಂಧಿಸಿದ ಪ್ರಯಾಣ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳು ಸಿಗುತ್ತವೆ.
ಶತ್ರುಗಳ ಮೇಲೆ ಜಯ ಸಾಧ್ಯವಾದರೂ, ಭಾವನಾತ್ಮಕ ನಿರ್ಧಾರಗಳನ್ನು ತಪ್ಪಿಸಿ. ಆದಾಯ ಹೆಚ್ಚಿಸಲು ಹೊಸ ಮಾರ್ಗಗಳನ್ನು ಹುಡುಕಿ, ಆರೋಗ್ಯ ಉತ್ತಮವ ಕೆಲಸದ ಒತ್ತಡದಿಂದ ದೂರವಿರಿ. ಇಂದು ನಿರ್ಗತಿಕರಿಗೆ ಸಹಾಯ ಮಾಡುವುದು ಶುಭ.
ಮಕರ ರಾಶಿ
ಇಂದು ಧನ ಲಾಭದ ಯೋಗವಿದ್ದು, ಆದಾಯಕ್ಕೆ ಹೊಸ ಮಾರ್ಗಗಳು ತೆರೆದುಕೊಳ್ಳಬಹುದು; ಆದರೆ ವೆಚ್ಚಗಳೂ ಹೆಚ್ಚಾಗುವ ಸಾಧ್ಯತೆ ಇದೆ.
ಮನಸ್ಸು ಸ್ವಲ್ಪ ಕುಗ್ಗಿದಂತೆ ಭಾಸವಾದರೂ, ಸಹೋದರರ ನೆರವಿನಿಂದ ಹೊಸ ಅವಕಾಶಗಳು ದೊರೆಯುತ್ತವೆ.
ಕುಟುಂಬದ ಬೆಂಬಲದೊಂದಿಗೆ ವೃತ್ತಿ ಜೀವನದಲ್ಲಿ ಪ್ರಗತಿ ಸಾಧ್ಯ. ಸಂಗಾತಿಯೊಂದಿಗೆ ಜಗಳ ತಪ್ಪಿಸಿ, ಸೋಮಾರಿತನವನ್ನು ಬಿಟ್ಟು ಗುರಿಗಳತ್ತ ನಿರಂತರ ಪ್ರಯತ್ನ ಮಾಡಿ. ಆರೋಗ್ಯದ ಕಡೆ ಗಮನವಿಟ್ಟು, ಇಂದು ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡುವುದು ಶುಭ.
ಕುಂಭ ರಾಶಿ
ಈ ದಿನ ಉದ್ಯೋಗದಲ್ಲಿ ಪ್ರಗತಿಯ ಅವಕಾಶಗಳಿದ್ದು, ಎಲ್ಲರೊಂದಿಗೆ ಸ್ನೇಹಪೂರ್ಣವಾಗಿ ವರ್ತಿಸಿದರೆ ಯಶಸ್ಸು ಸುಲಭವಾಗುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ ಮನಸ್ಸು ಅಶಾಂತವಾಗುವ ಸಾಧ್ಯತೆ ಇದೆ;
ಶತ್ರುಗಳಿಂದ ತೊಂದರೆ ಉಂಟಾಗಬಹುದಾದ್ದರಿಂದ ತಾಳ್ಮೆ ಅಗತ್ಯ. ದಿನದ ಅಂತ್ಯಕ್ಕೆ ಆದಾಯ ಹೆಚ್ಚಳದ ಹೊಸ ಮಾರ್ಗಗಳು ತೆರೆದುಕೊಳ್ಳಬಹುದು ಮತ್ತು ಆರೋಗ್ಯವೂ ಸುಧಾರಿಸುತ್ತದೆ. ಇಂದು ಹಣೆಗೆ ಶ್ರೀಗಂಧದ ತಿಲಕ ಹಚ್ಚಿಕೊಳ್ಳುವುದು ಶುಭ.
ಮೀನ ರಾಶಿ
ಇಂದು ಅನಗತ್ಯ ವಿಷಯಗಳಿಗೆ ಹಣ ವ್ಯಯಿಸಬೇಡಿ, ವಿಶೇಷವಾಗಿ ನೌಕರಿ ಕೊಡಿಸುವುದಾಗಿ ಹೇಳಿ ಹಣ ಕೇಳುವವರ ಬಗ್ಗೆ ಎಚ್ಚರಿಕೆ ವಹಿಸಿ ಮತ್ತು ಮಧ್ಯವರ್ತಿಯ ಮೂಲಕ ಮಾತ್ರ ಮಾತುಕತೆ ನಡೆಸಿ.
ಮಾನಸಿಕ ನೆಮ್ಮದಿ ದೊರೆಯುತ್ತಿದ್ದು, ಮನೆಗೆ ಅತಿಥಿಗಳ ಆಗಮನದಿಂದ ಸಂತಸದ ವಾತಾವರಣ ಇರುತ್ತದೆ. ಮಾತಿನಲ್ಲಿ ಸೌಮ್ಯತೆ ಕಾಣಿಸಿಕೊಳ್ಳುತ್ತದೆ, ವ್ಯಾಪಾರಿಗಳಿಗೆ ಶುಭ ಸುದ್ದಿ ಸಿಗಬಹುದು.
ಆಸ್ತಿಯಲ್ಲಿ ಹಳೆಯ ಹೂಡಿಕೆ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಕೆಲಸದ ನಿಮಿತ್ತ ಪ್ರಯಾಣ ಸಾಧ್ಯವಾಗಿದ್ದು, ಆರೋಗ್ಯದ ಕಡೆ ಗಮನ ಕೊಡಿ. ಇಂದು ಹಸುವಿಗೆ ಹಸಿರು ಮೇವನ್ನು ನೀಡುವುದು ಶುಭ.




