ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಲಿನ ಸಣ್ಣ ಪ್ಯಾಕೆಟ್ಗಳನ್ನು ಬಿಡುಗಡೆ ಮಾಡುವ ಮೂಲಕ KMF ಗ್ರಾಹಕ ಸ್ನೇಹಿ ಕ್ರಮಕ್ಕೆ ಮುಂದಾಗಿದೆ.

ಬೆಲೆ ಏರಿಕೆಯ ನಡುವೆ ರಾಜ್ಯದ ಜನರಿಗೆ KMF ಸಿಹಿಸುದ್ದಿ ನೀಡಿದೆ. ಕರ್ನಾಟಕ ಹಾಲು ಮಹಾಮಂಡಳಿ (KMF) ತಮ್ಮ ನಂದಿನಿ ಬ್ರ್ಯಾಂಡ್ ಹಾಲು ಮತ್ತು ಮೊಸರು ಸಣ್ಣ ಪ್ಯಾಕೆಟ್ಗಳಲ್ಲಿ ಕೇವಲ 10 ರೂಪಾಯಿಗೆ ಮಾರುಕಟ್ಟೆಗೆ ಒದಗಿಸಲು ಮುಂದಾಗಿದೆ.
ಹೊಸ ಪ್ಯಾಕೆಟ್ಗಳ ಬಿಡುಗಡೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ಪ್ಯಾಕೆಟ್ಗಳ ಬಿಡುಗಡೆ ಮೂಲಕ ಕೆಎಂಎಫ್ ಗ್ರಾಹಕರಿಗೆ ಸುಲಭ ಮತ್ತು ಲಾಭದಾಯಕ ಕ್ರಮ ಕೈಗೊಂಡಿದೆ. ಈ ನೂತನ ಯೋಜನೆಯ ಲೋಕಾರ್ಪಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂಕೇತಿಕವಾಗಿ ಮಾಡಿದ್ದಾರೆ.
ಹೊಸ ಪ್ಯಾಕೆಟ್ಗಳ ದರ
- ನಂದಿನಿ ಹಾಲು: 160 ML ಪ್ಯಾಕೆಟ್ — 10 ರೂ
- ನಂದಿನಿ ಮೊಸರು: 140 ML ಪ್ಯಾಕೆಟ್ — 10 ರೂ
- ನಂದಿನಿ ಲಸ್ಸಿ (ಮಾವು/ಸ್ಟ್ರಾಬೆರಿ): ಪ್ಯಾಕೆಟ್ — 15 ರೂ
ಇದನ್ನು ಓದಿ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ – ಶಿಕ್ಷಕರು, ಪೋಷಕರು ಓದಲೇಬೇಕಾದ ಸ್ಟೋರಿ

ಯಾರಿಗೆ ಹೆಚ್ಚು ಅನುಕೂಲ?
ಕೆಎಂಎಫ್ನ ಈ ನಿರ್ಧಾರವು ನಗರ ಪ್ರದೇಶಗಳಲ್ಲಿ ವಾಸಿಸುವ ಬ್ಯಾಚುಲರ್, ಪ್ರವಾಸಿಗರು ಮತ್ತು ಮನೆಯಲ್ಲಿ ಒಬ್ಬರೇ ಇರುವವರಿಗೆ ಹೆಚ್ಚು ಸಹಕಾರಿಯಾಗಲಿದೆ. ದೊಡ್ಡ ಪ್ಯಾಕೆಟ್ ಖರೀದಿಸಿ ಹಾಲು ಅಥವಾ ಮೊಸರು ವ್ಯರ್ಥವಾಗುವುದನ್ನು ಈ ಸಣ್ಣ ಪ್ಯಾಕೆಟ್ಗಳು ತಡೆಯಲಿವೆ.
ಎಲ್ಲಾ ಮಳಿಗೆಗಳಲ್ಲಿ ಲಭ್ಯ
ಮುಖ್ಯಮಂತ್ರಿಗಳಿಂದ ಚಾಲನೆ ಪಡೆದ ಈ ಯೋಜನೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ನಂದಿನಿ ಪಾರ್ಲರ್ಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿಲಭ್ಯವಾಗಲಿದೆ. ಕಡಿಮೆ ದರದಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಮೂಲಕ ಕೆಎಂಎಫ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಈ ಹೊಸ ಯೋಜನೆಯನ್ನು ರೂಪಿಸಿದೆ.

ಇದನ್ನು ನೋಡಿ : ಅಂದುಕೊಂಡಿದ್ದಕ್ಕಿಂತ ಡಬಲ್ ಸಂಪಾದಿಸಿದ ಗಿಲ್ಲಿ ನಟ




