Bengaluru : ಶಾಲಾ ಮಕ್ಕಳ ಸುರಕ್ಷತೆಗೆ ಶಿಕ್ಷಣ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟವಾಗಿದೆ.

Bengaluru : ಶಾಲೆ-ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಲು ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಸರ್ಕಾರಿ ಕಾರ್ಯಕ್ರಮಗಳು, ರಾಷ್ಟ್ರೀಯ ಹಬ್ಬಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಂದರ್ಭದಲ್ಲಿ ಮಕ್ಕಳ ರಕ್ಷಣೆಗಾಗಿ ಹೊಸ ಸುರಕ್ಷತಾ ಮಾರ್ಗಸೂಚಿ ಅನ್ನು ಬಿಡುಗಡೆ ಮಾಡಲಾಗಿದೆ.
ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು
ಇತ್ತೀಚಿನ ದಿನಗಳಲ್ಲಿ ಶಾಲಾ ಆವರಣದಲ್ಲಿ ಸಂಭವಿಸುತ್ತಿರುವ ಸಣ್ಣ ಅವಘಡಗಳನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆ, ಎಲ್ಲಾ ಶಾಲೆ-ಕಾಲೇಜುಗಳು ಈ ಮಾರ್ಗಸೂಚಿಯಲ್ಲಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದೆ.
ಇದನ್ನು ಓದಿ : Duniya Vijay ನಟನೆಯ `ಲ್ಯಾಂಡ್ ಲಾರ್ಡ್’ ಸಿನಿಮಾಗೆ CM ಸ್ಪೆಷಲ್ ವಿಶ್
ಮಾರ್ಗಸೂಚಿಯ ಪ್ರಮುಖ ಅಂಶಗಳು
- ಧ್ವಜಾರೋಹಣದ ವೇಳೆ ಎಚ್ಚರಿಕೆ:
- ಧ್ವಜಾರೋಹಣದ ಕಂಬದ ಹತ್ತಿರ ವಿದ್ಯುತ್ ತಂತಿಗಳು ಹೋಗದಂತೆ ನೋಡಿಕೊಳ್ಳಬೇಕು.
- ಧ್ವಜವನ್ನು ಏರಿಸಲು ಅಥವಾ ಇಳಿಸಲು ಮಕ್ಕಳನ್ನು ಬಳಸಬಾರದು.
- ಧ್ವಜ ಕಂಬದಲ್ಲಿ ಸಿಕ್ಕಿಹಾಕಿದ್ದರೆ, ಅದನ್ನು ಸರಿಪಡಿಸಲು ಮಕ್ಕಳನ್ನು ಕಂಬ ಹತ್ತಿಸುವುದು ನಿಷೇಧ.
- ವಿದ್ಯುತ್ ಮತ್ತು ಬೆಂಕಿ ಅವಘಡ ತಡೆ:
- ಕಾರ್ಯಕ್ರಮ ಸ್ಥಳದಲ್ಲಿ ವಿದ್ಯುತ್ ಸೋರಿಕೆ ತಪಾಸಣೆ ಮಾಡಬೇಕು.
- ಮಳೆ ನೀರು ವಿದ್ಯುತ್ ತಂತಿಗಳ ಮೇಲೆ ಬೀಳದಂತೆ ಕ್ರಮ ಕೈಗೊಳ್ಳಬೇಕು.
- ಗ್ಯಾಸ್, ಒಲೆಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಬೇಕು; ಅಡುಗೆ ತಯಾರಿಸುವ ಸ್ಥಳಕ್ಕೆ ಮಕ್ಕಳ ಪ್ರವೇಶ ನಿಷೇಧ.
- ವಾಹನ ಮತ್ತು ಪ್ರಯಾಣದ ಸುರಕ್ಷತೆ:
- ಮಕ್ಕಳನ್ನು ತರಲು ಪ್ರಯೋಗವಾಗುವ ವಾಹನ ಚಾಲಕರು ಮದ್ಯಪಾನ ಮಾಡದಿರುವುದನ್ನು ಖಚಿತಪಡಿಸಬೇಕು.
- ವಾಹನಗಳು ನಿಗದಿತ ವೇಗಮಿತಿಯಲ್ಲಿ ಸಾಗಬೇಕು; ಸಾಮರ್ಥ್ಯಕ್ಕಿಂತ ಹೆಚ್ಚಿನ ಮಕ್ಕಳನ್ನು ಸಾಗಿಸಲಾಗದು.
- ಕಾರ್ಯಕ್ರಮ ಸ್ಥಳದಿಂದ ಕನಿಷ್ಠ 100 ಮೀಟರ್ ದೂರದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಬೇಕು.
- ಆಹಾರ ಮತ್ತು ಶುಚಿತ್ವ:
- ಮಕ್ಕಳಿಗೆ ನೀಡುವ ನೀರು, ಪಾನೀಯ ಮತ್ತು ಆಹಾರ ಶುದ್ಧವಾಗಿರಬೇಕು.
- ತುರ್ತು ಸಿದ್ಧತೆ ಮತ್ತು ತರಬೇತಿ:
- ಮಕ್ಕಳಿಗೆ ಅನಿರೀಕ್ಷಿತ ಅವಘಡಗಳನ್ನು ಎದುರಿಸುವ ಬಗ್ಗೆ ಅರಿವು ಮೂಡಿಸಬೇಕು.
- ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತುರ್ತು ಪರಿಸ್ಥಿತಿ ನಿರ್ವಹಣೆಯಲ್ಲಿ ತರಬೇತಿ ನೀಡಬೇಕು.
- ಯಾವುದೇ ಕಾರ್ಯಕ್ರಮದ ಮೊದಲು ಸ್ಥಳೀಯ ಪೊಲೀಸ್, ಅಗ್ನಿಶಾಮಕ ದಳ ಮತ್ತು ವೈದ್ಯಕೀಯ ತಂಡಕ್ಕೆ ಮಾಹಿತಿ ನೀಡಬೇಕು.
- ಸ್ಥಳದ ಪರಿಶೀಲನೆ:
- ಕಾರ್ಯಕ್ರಮ ನಡೆಯುವ ವೇದಿಕೆ, ಕುಳಿತ ಸ್ಥಳಗಳು ಮತ್ತು ಪಥಸಂಚಲನ ಸುರಕ್ಷಿತವಾಗಿರುವುದನ್ನು ನಿಯಮಿತವಾಗಿ ಪರಿಶೀಲಿಸಬೇಕು.
ಶಿಕ್ಷಣ ಇಲಾಖೆ, ಸ್ಥಳೀಯ ಆಡಳಿತಗಳು ಮತ್ತು ಶಾಲಾ ಮಂಡಳಿಗಳು ಈ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರುವಂತೆ ಸೂಚಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ಯಾವುದೇ ಲೋಪ ಕಂಡುಬಂದರೆ ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿಸುತ್ತಾರೆ ಎಂದು ಎಚ್ಚರಿಸಿದೆ.
ಇದನ್ನು ನೋಡಿ : SHOCKING : ತಲೆ ಕೂದಲಿಗೆ `ಹೇರ್ ಡೈ’ ಹಚ್ಚುವ ಮಹಿಳೆಯರೇ ಎಚ್ಚರ : ಯುವತಿಯಲ್ಲಿ ಅಪಾಯಕಾರಿ `ಕಾಯಿಲೆ’ ಪತ್ತೆ.!




