
ಶಬರಿಮಲೆಗೆ ಹೋಗಿ ಬಂದ ದಿನವೇ ಪತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ Hassan ಜಿಲ್ಲೆಯ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ನಡೆದಿದೆ. ನಾಲ್ಕು ವರ್ಷಗಳಿಂದ ಗಂಡನಿಂದ ದೂರವಿದ್ದ ಪತ್ನಿ, ಗಂಡನ ಬಳಿ ಎರಡನೇ ಮದುವೆ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಗಂಡನ ಕೋಪ ತಾರಕಕ್ಕೇರಿದ್ದು, ಪತ್ನಿಯನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ.
ಗಂಡನಿಂದಲೇ ಹೆಂಡತಿ ಬರ್ಬರ ಕೊಲೆ
ಎರಡನೇ ಮದುವೆಯಾಗಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಮೊದಲ ಪತ್ನಿಯನ್ನೇ ಗಂಡ ಬರ್ಬರವಾಗಿ ಹತ್ಯೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಕುಮಾರ್ ಎಂಬಾತ ಶಬರಿಮಲೆಗೆ ಹೋಗಿ ಬಂದ ದಿನವೇ ಈ ಕೃತ್ಯವೆಸೆಗಿದ್ದಾನೆ ಎನ್ನಲಾಗಿದೆ. ಇನ್ನು ರಾಧ (40) ಕೊಲೆಯಾದ ದುರ್ದೈವಿಯಾಗಿದ್ದಾಳೆ.
ಇದನ್ನು ಓದಿ : ಪ್ರೇಯಸಿ ಜೊತೆ ಮಂಚದಲ್ಲಿದ್ದ ಪತಿಯನ್ನು Redhand ಆಗಿ ಹಿಡಿದ ಪತ್ನಿ..!

ಗಂಡನ ಹುಡುಕಿಕೊಂಡು ಬಂದು ಹೆಣವಾದಳು
ಜನವರಿ 10ರ ರಾತ್ರಿ ಮನೆಯಲ್ಲೇ ರಾಧಾಳ ಹತ್ಯೆ ನಡೆದಿದೆ ಎನ್ನಲಾಗ್ತಿದೆ. ಕಳೆದ 4 ವರ್ಷಗಳಿಂದ ಪತಿಯಿಂದ ರಾಧಾ ಬೇರೆಯಾಗಿ ವಾಸವಾಗಿದ್ದಳು. ಇದೇ ವೇಳೆ ಜನವರಿ ಮೊದಲ ವಾರ ಕುಮಾರ್ ಶಬರಿಮಲೆಗೆ ತೆರಳಿದ್ರು. ಇರುಮುಡಿ ಕಟ್ಟುವ ವೇಳೆ ಪತ್ನಿಯ ಸ್ಥಾನದಲ್ಲಿ ಮತ್ತೊಬ್ಬ ಮಹಿಳೆ ಪೂಜೆ ಮಾಡಿದ್ದಾಳೆ ಎಂಬ ವಿಚಾರ ರಾಧಾಗೆ ಗೊತ್ತಾಗಿದೆ ಇನ್ನು ಈ ವಿಷಯದ ಬಗ್ಗೆ ಪ್ರಶ್ನೆ ಮಾಡಲು ಶಬರಿಮಲೆಗೆ ಹೋಗಿದ್ದ ಕುಮಾರ್ ಬಂದ ಶನಿವಾರ ರಾತ್ರಿ, ರಾಧಾ ಯಡೂರು ಗ್ರಾಮದಲ್ಲಿರುವ ಪತಿಯ ಮನೆಗೆ ಬಂದಿದ್ದಾಳೆ.
ಪತ್ನಿಯನ್ನು ಕೊಂದು ನದಿಗೆಸೆದ ಗಂಡ
ಎರಡನೇ ಮದುವೆ ಬಗ್ಗೆ ಪ್ರಶ್ನೆ ಮಾಡಿದ ರಾಧ ಹಾಗೂ ಕುಮಾರ್ ನಡುವೆ ಮನೆಯಲ್ಲೇ ಭಾರೀ ಜಗಳ ನಡೆದಿದೆ. ಇನ್ನು ಜಗಳ ತಾರಕಕ್ಕೇರಿದ ವೇಳೆ ಕುಮಾರ್ ರಾಧಾಳನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆ ಮಾಡಿದ ಬಳಿಕ ಆಕೆಯ ಮೃತದೇಹವನ್ನು ಹಾಸನ ತಾಲೂಕಿನ ಕಂದಲಿ ಸಮೀಪದ ಯಗಚಿ ನದಿಗೆ ಎಸೆದಿದ್ದಾನೆ ಎಂದು ತಿಳಿದುಬಂದಿದೆ.

ಕೊಲೆ ಕೇಸ್ ದಾಖಲು
ಕೊಲೆ ಮಾಡಿದ ಬಳಿಕ ಆರೋಪಿ ಸ್ವತಃ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ಪಡೆದ ಪೊಲೀಸರು ಇಂದು ಯಗಚಿ ನದಿಯಿಂದ ಮೃತದೇಹವನ್ನು ಹೊರತೆಗೆಯಲಾಗಿದ್ದು, ಆರೋಪಿ ಕುಮಾರ್ನನ್ನು ಬಂಧಿಸಿದ್ದಾರೆ. ಇನ್ನು ಈ ಘಟನೆ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ.
ಇದನ್ನು ನೋಡಿ : ಜನವರಿ 16 ರಿಂದ 22 ರವರೆಗೆ ತುಮಕೂರಿನಲ್ಲಿ ಕರ್ನಾಟಕ ಕ್ರೀಡಾಕೂಟಕ್ಕೆ ಸಜ್ಜು




