BBK S12 : Bigg Boss Kannada 12 ಫಿನಾಲೆ ಹಂತಕ್ಕೆ ಸಮೀಪಿಸುತ್ತಿದ್ದಂತೆ, ಬಿಗ್ ಬಾಸ್ ಸ್ಪರ್ಧಿಗಳಿಗೆ ವಿಶೇಷ ಚಟುವಟಿಕೆಗಳನ್ನು ನೀಡುತ್ತಿದೆ.

BBK S12 :ಅದರ ಭಾಗವಾಗಿ, ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ಮೂರು ಬೇಡಿಕೆಗಳನ್ನು (Three Choices Task) ಹೇಳಬೇಕು ಹಾಗೂ ಅವುಗಳಲ್ಲಿ ಒಂದನ್ನು ಈಡೇರಿಸುವುದಾಗಿ ಬಿಗ್ ಬಾಸ್ ಭರವಸೆ ನೀಡಿದ್ದಾರೆ. ಈ ಟಾಸ್ಕ್ನಲ್ಲಿ ರಕ್ಷಿತಾ ಅವರ ಬೇಡಿಕೆಗಳು ವೀಕ್ಷಕರ ಮನಗೆದ್ದಿವೆ.
ಫಿನಾಲೆ ಸಮೀಪಿಸುತ್ತಿರುವುದರಿಂದ ಮನೆ ಒಳಗಿನ ಚಟುವಟಿಕೆಗಳು ಮತ್ತಷ್ಟು ರೋಚಕವಾಗಿವೆ.
ಈ ಟಾಸ್ಕ್ನಲ್ಲಿ ರಘು, ಅಶ್ವಿನಿ ಗೌಡ, ಧ್ರುವಂತ್, ರಕ್ಷಿತಾ ಮತ್ತು ಗಿಲ್ಲಿ ನಟ ತಮ್ಮ ತಮ್ಮ ಆಸೆಗಳನ್ನು ಬಿಗ್ ಬಾಸ್ ಮುಂದೆ ಇಟ್ಟರು. ಆದರೆ, ಸಾಮಾಜಿಕ ಅರಿವು ಮೂಡಿಸುವ ರಕ್ಷಿತಾರ ಬೇಡಿಕೆಗಳು ಎಲ್ಲರ ಗಮನ ಸೆಳೆದವು.
ಇದನ್ನು ಓದಿ : ಪ್ರೇಯಸಿ ಜೊತೆ ಮಂಚದಲ್ಲಿದ್ದ ಪತಿಯನ್ನು Redhand ಆಗಿ ಹಿಡಿದ ಪತ್ನಿ..!

ರಕ್ಷಿತಾ ಇಟ್ಟ ಮೂರು ಬೇಡಿಕೆಗಳು – ವೀಕ್ಷಕರ ಹೃದಯ ಗೆದ್ದ ಪ್ರಬುದ್ಧತೆ
ಮೊದಲ ಬೇಡಿಕೆ:
ನಾವು ಕರಾವಳಿ ಭಾಗದವರು. ಮೀನುಗಾರರು ಸಮುದ್ರಕ್ಕೆ ಇಳಿಯುವಾಗ ಎದುರಿಸುವ ಸಮಸ್ಯೆಗಳ ಬಗ್ಗೆ ಎಲ್ಲರ ಮುಂದೆ ಮಾತನಾಡಲು ವೇದಿಕೆ ನೀಡಬೇಕು ಎಂದು ರಕ್ಷಿತಾ ಮನವಿ ಮಾಡಿದರು.
ಮೀನುಗಾರ ಸಮುದಾಯಕ್ಕೆ ವೇದಿಕೆ ಕಲ್ಪಿಸುವ ಆಶಯ ವೀಕ್ಷಕರಿಂದ ಭಾರಿ ಮೆಚ್ಚುಗೆ ಪಡೆದಿದೆ.
ಎರಡನೇ ಬೇಡಿಕೆ:
ಬಿಗ್ ಬಾಸ್ ಮನೆಗೆ ಹುಲಿ ನೃತ್ಯದ ಕಲಾವಿದರು ಬರಬೇಕು ಮತ್ತು ಅವರೊಂದಿಗೆ ನಾನು ಡ್ಯಾನ್ಸ್ ಮಾಡಬೇಕು ಎಂದು ಹೇಳಿದರು.
ಮೂರನೇ ಬೇಡಿಕೆ:
ಬಿಗ್ ಬಾಸ್ ಮನೆಯಲ್ಲಿ ಕನ್ನಡ ನಾಟಕ ವೀಕ್ಷಿಸುವ ಅವಕಾಶ ಬೇಕೆಂದು ಮನವಿ ಮಾಡಿದರು.
ಈ ಮೂರು ಬೇಡಿಕೆಗಳ ಮೂಲಕ ರಕ್ಷಿತಾ ಅವರ ಪ್ರಬುದ್ಧತೆ ಮತ್ತು ಕನ್ನಡ-ಸಂಸ್ಕೃತಿ ಪ್ರೀತಿಗೆ ವೀಕ್ಷಕರು ಫಿದಾ ಆಗಿದ್ದಾರೆ.

ಗಿಲ್ಲಿ ನಟ ಕೇಳಿದ್ದೇನು?
ರಕ್ಷಿತಾ ಬಳಿಕ ಗಿಲ್ಲಿ ನಟ ತಮ್ಮ ಬೇಡಿಕೆಗಳನ್ನು ಮುಂದಿಟ್ಟರು.
- ಬಿಗ್ ಬಾಸ್ ಟಿವಿಯಲ್ಲಿ ಸಿನಿಮಾ ನೋಡಬೇಕು
- ಬಿಗ್ ಬಾಸ್ ಮನೆಯಲ್ಲಿರುವ ಆನೆಯ ಮೇಲೆ ಕುಳಿತುಕೊಳ್ಳಬೇಕು
- ನಳ್ಳಿ ಮೂಳೆ ತಿನ್ನಬೇಕು
ಗಿಲ್ಲಿ ಬೇಡಿಕೆಗಳು ಮನರಂಜನೆಯಾಗಿದ್ದರೂ, ರಕ್ಷಿತಾರ ಸಾಮಾಜಿಕ ಅರ್ಥಪೂರ್ಣ ಬೇಡಿಕೆಗಳ ಮುಂದೆ ವೀಕ್ಷಕರ ಗಮನ ಕಡಿಮೆ ಆಯಿತು.
ಇದನ್ನು ನೋಡಿ : ಜನವರಿ 16 ರಿಂದ 22 ರವರೆಗೆ ತುಮಕೂರಿನಲ್ಲಿ ಕರ್ನಾಟಕ ಕ್ರೀಡಾಕೂಟಕ್ಕೆ ಸಜ್ಜು




