Bengaluru : ಪ್ರೇಯಸಿ ಜೊತೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿರಾಯ.

ಪ್ರೇಯಸಿಯೊಂದಿಗೆ ಒಂದೇ ರೂಮಿನಲ್ಲಿ ಮಂಚದ ಮೇಲಿದ್ದ ಪತಿಯನ್ನು ಪತ್ನಿಯೇ ರೆಡ್ಹ್ಯಾಂಡ್ ಆಗಿ ಹಿಡಿದಿರುವ ಘಟನೆ Bengaluru ನಗರದಲ್ಲಿ ನಡೆದಿದೆ. ಇನ್ನು ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪತ್ನಿಯ ದೂರಿನ ಮೇರೆಗೆ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿದೆ.
ಏನಿದು ಕತೆ?
ಜೆಡ್ರೆಲಾ ಜಾಕೂಬ್ ಆರೂಪ್, ಬೆಂಗಳೂರಿನ ಟೆಕ್ಕಿ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಪಶ್ಚಿಮ ವಿಭಾಗ ಠಾಣಾ ವ್ಯಾಪ್ತಿಯಲ್ಲಿ ಪತ್ನಿ ಜೊತೆ ವಾಸವಿದ್ದ. ಈತನ ಪತ್ನಿ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಆರಂಭದಲ್ಲಿ ಆರೋಪಿಗೆ ಕೆಲಸ ಇರಲಿಲ್ಲ. ಹೀಗಾಗಿ ಪತ್ನಿ, ತನ್ನ ಕೆಲಸವನ್ನೇ ಪತಿಗೆ ಕೊಡಿಸಿದ್ದಳು. ಲಕ್ಷಾಂತರ ರೂಪಾಯಿ ಸಂಬಳ ಬರ್ತಿದ್ದ ತನ್ನ ಕೆಲಸವನ್ನ ಪತಿಗೆ ಕೊಡಿಸಿದ್ದಳು ಎನ್ನಲಾಗಿದೆ.
ಇದನ್ನು ಓದಿ : 15 ನಿಮಿಷ ಮಾತ್ರ ಮೈಸೂರಿನಲ್ಲಿ ಇರಲಿದ್ದಾರೆ ರಾಹುಲ್ ಗಾಂಧಿ!
ಆರೋಪ ಏನು?
ಇನ್ನು ಈ ದಂಪತಿಗೆ ಒಂದು ಮಗು ಇದ್ದು, ಮಗುವಿನ ಜನನದ ಬಳಿಕ ಆರೋಪಿ ತನ್ನ ನಿಜ ಸ್ವರೂಪ ತೋರಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಮತ್ತೊಮ್ಮೆ ಪತ್ನಿ ಗರ್ಭಧಾರಣೆ ಮಾಡಿದ್ದಾಗ, ಆಕೆಯ ಜಾತಿಯನ್ನು ನಿಂದಿಸಿ ಹಲ್ಲೆ ನಡೆಸಿ ಗರ್ಭಪಾತಕ್ಕೆ ಕಾರಣನಾದ ಆರೋಪವೂ ಜೆಡ್ರೆಲಾ ಜಾಕೂಬ್ ಆರೂಪ್ ಮೇಲಿದೆ.
ಇದಲ್ಲದೇ ಪತ್ನಿಗೆ ಮೋಸ ಮಾಡಿ ಪರಸ್ತ್ರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ದೂರಲಾಗಿದೆ.

ರೆಡ್ಹ್ಯಾಂಡ್ ಆಗಿ ಲಾಕ್
ಈ ನಡುವೆ ಪತ್ನಿಗೆ ಮೋಸ ಮಾಡಿ ಪರಸ್ತ್ರಿ ಜೊತೆ ಸಂಘ ಬೆಳೆಸಿದ್ದ. ಈ ಎಲ್ಲ ಬೆಳವಣಿಗೆಯಿಂದ ನೊಂದಿದ್ದ ಸಂತ್ರಸ್ತೆ ಆಂಧ್ರಕ್ಕೆ ಹೋಗಿದ್ದಳು. ನಿನ್ನೆ ಬೆಂಗಳೂರಿಗೆ ದಿಢೀರ್ ಬಂದು, ಗಂಡ ಪರಸ್ತ್ರಿ ಜೊತೆ ಚಕ್ಕಂದ ಆಡ್ತಿದ್ದಾಗ ಆತನನ್ನು ಲಾಕ್ ಮಾಡಿದ್ದಾರೆ.
ಸಂತ್ರಸ್ತೆ ಹೇಳಿದ್ದೇನು..?
ನನ್ನ ಹೆಸರು.. ನಾನು ಆಂಧ್ರ ಮೂಲದವಳು. ನಿನ್ನೆ ಬೆಳಗ್ಗೆ ಬೆಂಗಳೂರಿಗೆ ಬಂದಿದ್ದೇನೆ. ನನ್ನ ಪತಿ ಬೇರೊಂದು ಹುಡುಗಿ ಜೊತೆ ಅಕ್ರಮ ಸಂಬಂಧ ಹೊಂದಿರೋ ವಿಚಾರ ತಿಳಿದು ಇಲ್ಲಿಗೆ ಬಂದಿದ್ದೇನೆ. ಅವರಿಬ್ಬರು ಒಂದೇ ಪಿಜಿಯಲ್ಲಿರೋದು ತಿಳಿಯಿತು. ವಿಚಾರ ಗೊತ್ತಾಗಿ ಪೊಲೀಸರ ಸಹಾಯ ಪಡೆದೆ.
ಮೊದಲು ಅಧಿಕಾರಿಗಳಿಗೆ ಬೇಕಾಗಿದ್ದ ಸಾಕ್ಷ್ಯಗಳನ್ನ ನೀಡಿದೆ. ನಂತರ ಪೊಲೀಸರೊಂದಿಗೆ ಪಿಜಿಗೆ ಎಂಟ್ರಿ ನೀಡಿದೇವು. ಅಲ್ಲಿ ಅವರಿಬ್ಬರೂ ಒಂದೇ ರೂಮಿನಲ್ಲಿ ಒಟ್ಟಿಗೆ ಇದ್ದರು ಎಂದು ಕಣ್ಣೀರು ಇಟ್ಟಿದ್ದಾಳೆ.

ಇದನ್ನು ನೋಡಿ : HORRIFIC CRIME| ಮಗಳ ಬಾಯಿ ಮುಚ್ಚಿ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದರು




