ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ IPL 2026 ಪಂದ್ಯದಲ್ಲಿ Mumbai ಇಂಡಿಯನ್ಸ್ 6 ವಿಕೆಟ್ಗಳಿಂದ ಲಕ್ನೋ ವಿರುದ್ಧ ಗೆದ್ದಿದೆ.

ಐಪಿಎಲ್ ಟೂರ್ನಿಯ 47ನೇ ಪಂದ್ಯದಲ್ಲಿ Mumbai ಇಂಡಿಯನ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯವು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು. ತಂಡದ ಪರ ಮಿಚೆಲ್ ಮಾರ್ಷ್ 25 ಎಸೆತಗಳಲ್ಲಿ 44 ರನ್ ಗಳಿಸಿದರೆ, ನಿಕೋಲಸ್ ಪೂರನ್ 21 ಎಸೆತಗಳಲ್ಲಿ 63 ರನ್ ಸಿಡಿಸಿ ಸ್ಫೋಟಕ ಆಟವಾಡಿದರು.
MUST READ : Dina Bhavishya : ದಿನ ಭವಿಷ್ಯ 5 ಮೇ 2026..

ಅಂತಿಮ ಹಂತದಲ್ಲಿ ಐಡನ್ ಮಾಕ್ರ್ರಮ್ 31 ರನ್ ಮತ್ತು ಹಿಮ್ಮತ್ ಸಿಂಗ್ 40 ರನ್ ಗಳಿಸಿ ತಂಡದ ಮೊತ್ತವನ್ನು 228 ರನ್ಗಳವರೆಗೆ ಕೊಂಡೊಯ್ದರು.
ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡ 18.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿ ಗೆಲುವು ಸಾಧಿಸಿತು. ರಯಾನ್ ರಿಕಲ್ಟನ್ 32 ಎಸೆತಗಳಲ್ಲಿ 83 ರನ್ ಸಿಡಿಸಿ ಮಿಂಚಿದರೆ, ರೋಹಿತ್ ಶರ್ಮಾ 44 ಎಸೆತಗಳಲ್ಲಿ 84 ರನ್ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು.

ಕೊನೆಯಲ್ಲಿ ನಮನ ಧೀರ್ 23 ರನ್ ಗಳಿಸಿ ಅಜೇಯರಾಗಿ ಉಳಿದರು. ಒಟ್ಟಾರೆ, ಬ್ಯಾಟ್ಸ್ಮನ್ಗಳ ಸ್ಫೋಟಕ ಪ್ರದರ್ಶನದ ನೆರವಿನಿಂದ ಮುಂಬೈ ಇಂಡಿಯನ್ಸ್ ಈ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಸುಲಭವಾಗಿ ಜಯ ಸಾಧಿಸಿದೆ.
MUST WATCH : 3 ವರ್ಷವಾದ್ರೂ ಕನಿಷ್ಠ ಒಂದು ಮನೆ ಕೊಡಲು ಆಗಿಲ್ಲ ಸರ್ಕಾರದ ವಿರುದ್ಧ ಶಾಸಕ SURESH BABU ವಾಗ್ದಾಳಿ




